ಕೊಟ್ಟೂರು
ಪಟ್ಟಣದ ಪ್ರಮುಖ ಇಟಗಿ ರಸ್ತೆಯಲ್ಲಿ ಸತ್ತ ಕೋಳಿಯ ತ್ಯಾಜ್ಯ, ಮದ್ಯದ ಪೌಚ್‍ಗಳು, ಕ್ಷೌರಿಕರು ಎಸೆದ ಕೂದಲು, ಕಸಕಡ್ಡಿಯಿಂದಾಗಿ ದುರ್ವಾಸನೆ ಬೀರುತ್ತಿದ್ದು ವಾಯುವಿಹಾರಿಗಳು, ವಾಹನ ಸವಾರರು ಮೂಗು ಮುಚ್ಚಿಕೊಂಡು ಓಡಾಡುವಂತ ಸ್ಥಿತಿ ನಿರ್ಮಾಣವಾಗಿದೆ.
ಕೊಟ್ಟೂರೇಶ್ವರ ಸ್ವಾಮಿ ದರ್ಶನಕ್ಕೆ ಪ್ರತಿ ಅಮವಾಸೆಗೆ ಈ ಮಾರ್ಗವಾಗಿ ಪಾದಯಾತ್ರಿಗಳು ಬರುವಾಗ ಮೂಗಿಗೆ ಬಟ್ಟೆ ಕಟ್ಟಿಕೊಂಡು ಬರುತ್ತಾರೆ. ಈ ದುರ್ವಾಸನೆ ನಡುವೆ ರಸ್ತೆ ಪಕ್ಕದಲ್ಲಿ ಬಳ್ಳಾರಿ ಕ್ಯಾಂಪ್, ಇಂದಿರಾ ನಗರ, ಅಂಬೇಡ್ಕರ್ ನಗರದ ಮಕ್ಕಳು ಕ್ರಿಕೇಟ್ ಆಡುತ್ತಾರೆ.
ಸರ್ಕಾರ ಪ್ಲಾಸ್ಟಿಕ್ ನಿಷೇಧಿಸಿದ್ದರು ಇಲ್ಲಿನ ತೇರು ಬಯಲಿನಲ್ಲಿರುವ ಚಿಕನ್ ಅಂಗಡಿಗಳು ಹೇರ್‍ಸಲೂನ್, ಹೋಟೆಲ್, ಮಧ್ಯದಂಗಡಿಗಳು ಈ ನಿಯಮ ಉಲ್ಲಂಘಿಸಿ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದರೆ.
ಪಟ್ಟಣ ಪಂಚಾಯ್ತಿಯ ಕಸ ಸಂಗ್ರಹಿಸುವ ವಾಹನಗಳಿದ್ದರೂ, ರಾತ್ರಿ ವೇಳೆ ಅಂಗಡಿಯವರು ತ್ಯಾಜ್ಯ ವಸ್ತುಗಳನ್ನು ಚೀಲದಲ್ಲಿ ತುಂಬಿಕೊಂಡು ರಸ್ತೆಗೆ ಎಸೆಯುತ್ತಾರೆ ಇದು ಕೊಳೆತು ಸಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ ಎಂದು ವಾಯು ವಿಹಾರಿಗಳಾದ ಸಿದ್ದಯ್ಯ, ಚಾನುಕೋಟೆಯ್ಯ, ಕೊಟ್ರೇಶ ಮುಂತ್ತಾದವರು ಪತ್ರಿಕೆ ದೂರು ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ