ಬೆಂಗಳೂರು:

ಹಲವರು ತಮಗೆ ಮಕ್ಕಳು ಇಲ್ಲ ಎಂಬ ಕೊರಗಿನಿಂದ ಐವಿಎಫ್ ಕೇಂದ್ರಗಳಿಗೆ ತೆರಳುವುದು ಸಾಮಾನ್ಯ ಆದರೆ ಆ ಕೇಂದ್ರಗಳು ಈಗ ದುಡ್ಡು ಮಾಡುವ ವ್ಯಾಪಾರ ಕೇಂದ್ರಗಳಾಗಿ ಪರಿವರ್ತನೆಯಾಗಿವೆ ಅವು ಸರಿಯಾಗಿ ಚಿಕಿತ್ಸೆ ನೀಡದೆ ಮಕ್ಕಳಾಗದೆ ಹೊದಲ್ಲಿ ಅವು ಹೇಳುವ ಸಾಮಾನ್ಯ ಕಾರಣ ನಿಮ್ಮಲ್ಲಿ ದೋಷವಿದೆ ಅದನ್ನು ಸರಿಮಾಡಬೇಕು ಎಂದು ಇನ್ನೂ ದುಡ್ಡು ಕೇಳುವ ಧನದಾಹಿ ಮನಸ್ತತ್ವ ಹೊಂದಿವೆ ಇದೇ ರೀತಿ ಬೆಂಗಳೂರಿನ ಒಂದು ಪ್ರತಿಷ್ಠಿತ ಇನ್-ವಿಟ್ರೋ ಫರ್ಟಿಲಿಟಿ (ಐವಿಎಫ್) ಕೇಂದ್ರವೊಂದು ತಾನು ಪಡೆದ ಶುಲ್ಕಕ್ಕೆ ಸರಿಯಾಗಿ ಚಿಕಿತ್ಸೆ ಒದಗಿಸದ ಕಾರಣ ವ್ಯಕ್ತಿಯೊಬ್ಬನಿಗೆ ಭಾರೀ ಪ್ರಮಾಣದ ಪರಿಹಾರ ನೀಡಿರುವ ಘಟನೆ ಬೆಳಕಿಗೆ ಬಂದಿದೆ.
ಮೈಸೂರು ಮೂಲದ 40 ವರ್ಷದವನಾದ ವ್ಯಕ್ತಿ ಅವಿವಾಹಿತನಿದ್ದು ತಾನು ತನ್ನ ತಾಯಿ ಜೀವಿತ ಆಸೆಯನ್ನು ನೆರವೇರಿಸುವುದಕ್ಕಾಗಿ ಭಾಡಿಗೆ ತಾಯಿಯ ಮೂಲಕ ಮಗುವನ್ನು ಹೊಂದಲು ಬಯಸಿದ್ದನು. ಆದರೆ ಐವಿಎಫ್ ಸೆಂಟರ್ ನವರ ನಿರ್ಲಕ್ಷದಿಂದ ಅದು ಸಾಧ್ಯವಾಗದೆ ಹೋದ ಕಾರಣ ಆತ ಕಾನೂನಿನ ಮೊರೆ ಹೋಗಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
