ಹಗರಿಬೊಮ್ಮನಹಳ್ಳಿ:
ತಾಲೂಕಿನ ಕಡಲಬಾಳು ಗ್ರಾಮದ ಸಮಸ್ತ ಅಭಿವೃದ್ಧಿಗೆ ಸ್ಪಂದಿಸುವೆ ಎಂದು ಶಾಸಕ ಎಸ್.ಭೀಮಾನಾಯ್ಕ್ ಹೇಳಿದರು.ಅವರು ತಾಲೂಕಿನ ಕಡಲಬಾಳು ಗ್ರಾಮದಲ್ಲಿ ಗವಿಸಿದ್ದೇಶ್ವರ ಮಠದ ಶಾಖಾ ಪೀಠದ 15ನೇ ಶಿವಶಾಂತವೀರ ಮಹಾಸ್ವಾಮಿಗಳ 96ನೇ ಪುಣ್ಯಾರಾಧನೆ ಅಂಗವಾಗಿ ಹಮ್ಮಿಕೊಂಡಿದ್ದ ಉಚಿತ ಸಾಮೂಹಿಕ ವಿವಾಹ ಹಾಗೂ ಧಾರ್ಮಿಕ ಕಾರ್ಯಕ್ರಮದ ವೇದಿಕೆಗೆ ಬುಧವಾರ ಚಾಲನೆ ನೀಡಿ ಮಾತನಾಡಿದರು. ಮೊದಮೊದಲು ಧರ್ಮಸ್ಥಳದ ಶ್ರೀಮಂಜುನಾಥ ಸನ್ನಿಧಿಯಲ್ಲಿ ವೀರೇಂದ್ರ ಹೆಗ್ಡೆಯವರ ನೇತೃತ್ವದಲ್ಲಿ ಮಾತ್ರ ಸಮೂಹಿಕ ವಿವಾಹಗಳು ಜರುಗುತಿದ್ದವು.
ನಂತರ ಗವಿಸಿದ್ದೇಶ್ವರ ಮಠದಲ್ಲಿ ಅತಿ ಹೆಚ್ಚು ಸಮೂಹಿಕ ವಿವಾಹ ಜರುಗುತ್ತಿವೆ ಎಂದ ಅವರು ಸಮೂಹಿಕ ಮದುವೆಯ ನೆಪದಲ್ಲಿ ಪಾಲಕರ ಆರ್ಥಿಕ ಹೊರೆ ಕಡಿಮೆಮಾಡುವ ನಿಟ್ಟಿನಲ್ಲಿ ಸಮಾಜದ ಹೊಣೆ ಹೊತ್ತಿದ್ದಾರೆ ಎಂದರು.ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಸದಾ ನಿಮ್ಮೊಂದಿಗಿರುವ ನನಗೆ ಆಶೀರ್ವಾದ ಬೇಕು ಎಂದು ವೇದಿಕೆಯ ಮೇಲಿರುವ ಸ್ವಾಮಿಗಳನ್ನುದ್ದೇಶಿಸಿ ವಿನಂತಿಸಿಕೊಂಡರು.
ಕಡಲಬಾಳು ಶಾಖಾಮಠದ ಸೋಮಶಂಕರ ದೇವರು ಸ್ವಾಮೀಜಿ ಮಾತನಾಡಿ ಜೀವನದಲ್ಲಿ ಸಂತೋಷ ಇಲ್ಲ ಎಂದರೆ ಬದುಕೇ ಇಲ್ಲ ಎಲ್ಲಾ ಸಮಾಜದವರನ್ನು ಪ್ರೀತಿಸಿ ಎಲ್ಲರೂ ನನ್ನವರು ಎಂದಾಗ ಸಿಗುವ ಸಂತೋಷ ಬೆಲೆಕಟ್ಟಲಾಗದು. ಸಮಾಜದಲ್ಲಿ ಪರಸ್ಪರ ಒಂದಾಣಿಕೆ ಇದ್ದಾಗ ಸಂತೋಷ ಸಿಗುತ್ತದೆ. ಕುಟುಂಬದ್ಲಿರುವ ದಂಪತಿಗಳು ಕೂಡ ಅಷ್ಟೇ ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ಅನುಸರಿಸಿಕೊಂಡು ಹೋದಾಗ ಸಂಸಾರ ಸಂತೋಷದಿಂದ ಕೂಡಿರುತ್ತದೆ ಎಂದರು.
‘ಪ್ರತಿಯೊಂದು ಮನೆಯಲ್ಲಿ ಹಿರಿಯರನ್ನು ಗೌರವಿಸಿ, ಸಂಸ್ಕತಿ, ಸಂಸ್ಕಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಿ. ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತನ್ನಿ.’-ನಾಗಭೂಷಣ ಸ್ವಾಮಿಜಿ. ಹೆಬ್ಬಾಳ ಮಠ.
ಇದೇ ವೇಳೆ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡ 19 ನವಜೋಡಿ ವಧು ವರರಿಗೆ ಸಮಾಜ ಸೇವಕ ಕುರಿ ಶಿವಮೂರ್ತಿಯವರು ಪ್ರತೀ ವರ್ಷದಂತೆ ಈ ವರ್ಷವೂಸಹ ವಸ್ತ್ರದಾನ ಮಾಡಿದ್ದಾರೆಂದು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಹಡಗಲಿ ಗವಿಮಠದ ಹಿರಿಶಾಂತವೀರ ಸ್ವಾಮೀಜಿ, ನಂದಿಪುರ ಮಠದ ಮಹೇಶ್ವರ ಸ್ವಾಮೀಜಿ, ಹ.ಬೊ.ಹಳ್ಳಿಯ ಹಾಲಶಂಕರ ಸ್ವಾಮೀಜಿ ಸಾನ್ನೀಧ್ಯ ವಹಿಸಿದ್ದರು.
ಪಂಚಾಕ್ಷರಿ ಶಾಸ್ತ್ರಿ, ತಾ.ಪಂ. ಸ್ಥಾಯಿಸಮಿತಿ ಅಧ್ಯಕ್ಷ ಬುಡ್ಡಿ ಬಸವರಾಜ, ಸದಸ್ಯ ಜಾಣ ಅನಿಲ್‍ಕುಮಾರ್, ಪುರಸಭೆ ಸದಸ್ಯ ಹಂಚಿನ ಮನಿ ಹನುಮಂತಪ್ಪ, ಅಲ್ಲಾಭಕ್ಷಿ, ಬಾಲಕೃಷ್ಣ ಬಾಬು, ಹುಡೇದ ಗುರುಬಸವರಾಜ, ಮುಖಂಡರಾದ ಕಡ್ಲಬಾಳು ವೆಂಕಟೇಶ, ನೆಲ್ ಇಸ್ಮಾಯಿಲ್, ಅಜೀಜುಲ್ಲಾ, ಕುಲ್ಮಿ ರೆಹಮಾನ್, ಕಡ್ಲಬಾಳು ಗುರುಬಸವರಾಜ, ಕೊಟ್ರೇಶ್, ನಾಗರಾಜ, ಮಂಜುನಾಥ ಗೌಡ ಹಾಗೂ ಕಡಲಬಾಳು ಗವಿಮಠ ಅಕ್ಕನಬಳಗದ ಅಧ್ಯಕ್ಷೆ ಚನ್ನಬಸಮ್ಮ, ಕೆ.ಶೋಭ, ಸುಮಾ, ಟಿ.ಎಂ.ಜ್ಯೋತಿ, ಎಸ್.ಎಸ್.ಶೋಭ ಹಾಗೂ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು. ಶಿಕ್ಷಕ ಎ.ಎಂ.ಗಂಗಾಧರ ಹಾಗೂ ಗವಿಸಿದ್ದ ನಿರ್ವಹಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ