ಹುಳಿಯಾರು:
ಹುಳಿಯಾರು ಸಮೀಪದ ಕೆಂಕೆರೆಯಿಂದ ಗೌಡಗೆರೆ ಮಾರ್ಗವಾಗಿ ಕಂಪನಹಳ್ಳಿಗೆ ಹೋಗುವ ರಸ್ತೆಯ ಇಕ್ಕೆಲಗಳಲ್ಲಿ ಬೆಳದಿರುವ ಬಳ್ಳಾರಿ ಜಾಲಿ ಗಿಡಗಳನ್ನು ಕಡಿದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಲಿಂಗಪ್ಪನಪಾಳ್ಯದ ಯೋಗೀಶ್ ಮನವಿ ಮಾಡಿದ್ದಾರೆ.ಈ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದಿರುವ ಬಳ್ಳಾರಿ ಜಾಲಿ ಮುಳ್ಳಿನ ಗಿಡಗಳು ರಸ್ತೆಗೆ ಚಾಚಿಕೊಂಡ್ಡಿದ್ದು ಸುಗಮ ಸಂಚಾರಕ್ಕೆ ಭಾರಿ ತೊಡಕಾಗಿ ಪರಿಣಮಿಸಿದೆ. ತಿರುವಿನಲ್ಲಿ ಎದುರಿಗೆ ಬರುವ ವಾಹನಗಳು ಕಾಣದೆ ಅಪಘಾತದ ಭಯದಿಂದ ಸಂಚರಿಸುತ್ತಿದ್ದಾರೆ.
ರಸ್ತೆಯಲ್ಲಿ ಭಾರಿ ವಾಹನಗಳು ಬಂದಾಗ ದ್ವಿಚಕ್ರ ವಾಹನ ಚಾಲಕರು ಸೈಡಿಗೆ ಹೋಗಿ ಮುಳ್ಳಿನ ಗಿಡಗಳಿಂದ ಬಡಿಸಿಕೊಂಡು ಗಾಯಗಳನ್ನು ಮಾಡಿಕೊಳ್ಳುತ್ತಿದ್ದಾರೆ.ಬಳ್ಳಾರಿ ಜಾಲಿಯ ಈ ಕಿರಿಕಿರಿಗೆ ರೋಸಿ ಹೋಗಿರುವ ಸ್ಥಳೀಯ ಗ್ರಾಮಗಳ ದ್ವಿಚಕ್ರ ವಾಹನ ಸವಾರರು ಅನೇಕ ಬಾರಿ ತಾವೇ ರಸ್ತೆ ಚಾಚಿಕೊಂಡಿರುವ ಗಿಡಗಳನ್ನು ಕಡೆದಿದ್ದಾರೆ. ಆದರೆ ಇವರು ಕಡಿದ ವಾರಕ್ಕೆ ಮತ್ತೆ ಗಿಡ ಬೆಳೆದು ರಸ್ತೆಗೆ ಚಾಚಿಕೊಳ್ಳುತ್ತಿದೆ.
ಹಾಗಾಗಿ ಸುಗಮ ಸಂಚಾರಕ್ಕೆ ತೊಡಕಾಗದಂತೆ ನೋಡಿಕೊಳ್ಳುವ ಸಲುವಾಗಿ ತಕ್ಷಣ ಈ ಗಿಡಗಳನ್ನು ತೆರವುಗೊಳಿಸುವಂತೆ ಯೋಗೀಶ್ ಮನವಿ ಮಾಡಿದ್ದಾರೆ.