ಹಾನಗಲ್ಲ :
ಹಾನಗಲ್ಲಿನ ಕೆಇಬಿ ಕಛೇರಿಯಲ್ಲಿ ಈಗ ರೈತರ ದಂಡು ಆಕ್ರಮವನ್ನು ಸಕ್ರಮಗೊಳಿಸಲು ಸಹಾಯಕವಾಗುವ ಆರ್‍ಆರ್ ನಂಬರ ಪಡೆಯಲು ನೂಕು ನುಗ್ಗಲಾಗಿ ಸಾಲು ಸಾಲಿನಲ್ಲಿ ಕಾದು ನಿಂತಿದ್ದಾರೆ.
ಸರಕಾರ ಕೇವಲ 50 ರೂಪಾಯಿಗಳು ಶುಲ್ಕ ಪಡೆದು ತಾಲೂಕಿನಲ್ಲಿ ಆಕ್ರಮವಾಗಿ ಕೊಳವೆ ಭಾವಿ ಸಂಪರ್ಕ ಹೊಂದಿರುವುದನ್ನು ಕಾನೂನು ಬದ್ಧವಾಗಿ ಕೆಇಬಿಯಿಂದ ಆರ್‍ಆರ್ ನಂಬರ ನೀಡುವ ಯೋಜನೆ ರೈತರಿಗೆ ಒಂದು ರೀರಿಯ ನಿಟ್ಟುಸಿರು ಬಿಟ್ಟಂತಾಗಿದೆ.
ಈ ಮೊದಲು ಕೊಳವೆ ಭಾವಿ ಕೊರೆಸಿ ಕೆಇಬಿ ಇಂದ ಯಾವುದೇ ಕಾನೂನು ಬದ್ಧ ದಾಖಲೆ ಹೊಂದದೆ, ಇಲಾಖೆಗೆ ಏನನ್ನೂ ತಿಳಿಸದೇ ಸಮೀಪ ಇರುವ ವಿದ್ಯುತ್ ಕಂಬದಿಂದ ವಿದ್ಯುತ್ ತಂತಿ ಸಂಪರ್ಕ ಪಡೆದು ಕೊಳವೆ ಭಾವಿಗಳಿಗೆ ಬಳಿಸಿಕೊಳ್ಳುತ್ತಿದ್ದರು. ಆದರೆ ಸರಕಾರಿ ಇಂಥ ಕೊಳವೆ ಭಾವಿಗಳ ಸಂಖ್ಯೆ ಪಡೆಯಲು ಹಾಗೂ ಮುಂದಿನ ದಿನಗಳಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲು ಸಹಕಾರಿಯಾಗುವಂತೆ ಯೋಜನೆ ರೂಪಿಸಿರುವುದು ಒಂದು ಹೊಸ ಬೆಳವಣೆಗೆ ಎಂಬುದಂತೂ ಸತ್ಯ ಹಾಗೂ ಒಳ್ಳೆಯ ಬೆಳವಣಿಗೆಯಾಗಿದೆ.
ಈ ಸುದ್ದಿ ತಿಳಿಯುತ್ತಿದ್ದಂತೆ ರೈತರ ದಂಡೇ ಕೆಇಬಿ ಕಛೇರಿ ಎದುರು ಜಮಾಯಿಸಿದೆ. ಆದರೆ ಒಂದು ದಿನಕ್ಕೆ ನೂರಾರು ಜನರಿಂದ ಮಾತ್ರ ದಾಖಲೆ ಪಡೆದು ಆರ್‍ಆರ್ ಸಂಖ್ಯೆ ನೀಡಲು ಸಾಧ್ಯವಾಗುತ್ತಿದೆ. ಎರಡು ಮೂರು ದಿನಗಳಲ್ಲಿ ಅಂದಾಜು ಎರಡು ಸಾವಿರದಷ್ಟು ಆರ್‍ಆರ್ ಸಂಖ್ಯೆ ನೀಡಲಾಗಿದೆ. ಇನ್ನೂ ಈ ಸಂಖ್ಯೆ ದ್ವಿಗುಣವಾಗುವ ಸಂದರ್ಭಗಳಿವೆ. ಈ ಯೋಜನೆಯಿಂದ ಯಾವುದೇ ರೈತ ಅನಧಿಕೃತ ವಿದ್ಯುತ್ ಬಳಸದೆ ತಾನು ವಿದ್ಯುತ್ ಬಳಸುತ್ತಿರುವ ಬಗ್ಗೆ ಅಧಿಕೃತ ಮಾಹಿತಿ ನೀಡಿದಂತಾಗುತ್ತಿದೆ.
ಹೆಸ್ಕಾಂ ಹಾನಗಲ್ಲಿನ ಅಧಿಕಾರಿ ಕಿರಣಕುಮಾರ ಮಾಹಿತಿ ನೀಡಿ, ಯಾವುದೇ ಆತಂಕವಿಲ್ಲದೆ, ಎಲ್ಲ ಆಕ್ರಮ ವಿದ್ಯುತ್ ಸಂಪರ್ಕ ಹೊಂದಿದ ರೈತರ ಕೊಳವೆ ಭಾವಿಗಳಿಗೆ ಆರ್‍ಆರ್ ಸಂಖ್ಯೆಗಳನ್ನು ನೀಡಲಾಗುತ್ತಿದೆ. ಈಗಾಗಲೇ ನಮ್ಮ ನಿರೀಕ್ಷೆ ಮೀರಿ ರೈತರು ಇದರ ಲಾಭ ಪಡೆಯುತ್ತಿದ್ದಾರೆ. ಕೇವಲ 50 ರೂ ಹಾಗೂ ಅಗತ್ಯ ಮಾಹಿತಿ ಪಡೆದು ಆರ್‍ಆರ್ ನಂಬರ್ ನೀಡಿಲಾಗುತ್ತದೆ ಎಂದು ತಿಳಿಸಿದರಲ್ಲದೆ, ಮುಂದಿನ ದಿನಗಳಲ್ಲಿ ಸರಕಾರದ ಸೌಲಭ್ಯ ಅನುದಾನವನ್ನು ಅವಲಂಬಿಸಿ, ಒಟ್ಟು ಕೊಳವೆ ಭಾವಿಗಳ ಸರ್ವೆ ಮಾಡಿ, ಅಗತ್ಯಕ್ಕೆ ಅನುಗುವಣವಾಗಿ, ರೈತರಿಂದ 10 ಸಾವಿರ ರೂ ಸರ್ವಿಸ್ ಚಾರ್ಜ, 6200 ರೂ ಠೇವಣಿ, ಮೀಟರ್ ಚಾರ್ಜ ಸೇರಿದಂತೆ ಅಗತ್ಯ ಶುಲ್ಕಗಳನ್ನು ಪಡೆದು ಕಂಬ, ವಿದ್ಯುತ್ ತಂತಿ ಒದಗಿಸಿ ಸುರಕ್ಷಿತ ವಿದ್ಯುತ್ ಬಳಕೆಗೆ ಅನುವು ಮಾಡಿಕೊಡಲಾಗುತ್ತದೆ ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ