ಯುವಜನ ಜಾನಪದ ಸಂಸ್ಕೃತಿ ಉಳಿಸಿ ಬೆಳೆಸಿ

ತುಮಕೂರು

     ಜಾನಪದ ಸಂಸ್ಕೃತಿಯ ಮೌಲ್ಯ ಅರ್ಥ ಮಾಡಿಕೊಂಡು, ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಲು ಯುವಕರ ಪರಿಶ್ರಮದಅಗತ್ಯವಿದೆಎಂದು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ವಿ.ರಮೇಶ್ ತಿಳಿಸಿದರು.

    ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ 2018-19ನೇ ಸಾಲಿನ ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭ ಕಲಾಸಿರಿಯಲ್ಲಿ ಮಾತನಾಡಿದ ಅವರು ಯುವಕರು ಜಾನಪದ ಕಲೆಗಳಿಂದ ದೂರವಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.ಜಾನಪದ ಎಂಬುದೊಂದು ಬ್ರಹ್ಮಾಂಡ. ಅದರಲ್ಲಿ ವಿಜ್ಞಾನವೂ ಇದೆ. ವಿಜ್ಞಾನದಿಂದ ಸಾಧನೆಯಾಗದ್ದು ಜಾನಪದದಿಂದ ಸಾಧಿತವಾಗುತ್ತದೆ ಎಂದರು.

     ವಿದ್ಯಾರ್ಥಿಗಳು ಮೊಬೈಲ್ ದಾಸರಾಗುತ್ತಿದ್ದಾರೆ. ಶಿಕ್ಷಣ ಹಾಗೂ ಸಂಸ್ಕøತಿಯಿಂದ ವಿಮುಖರಾಗುತ್ತಿದ್ದಾರೆ. ಅಧ್ಯಯನಕ್ಕೆ ಕೊಡಬೇಕಾದ ಸಮಯವನ್ನು ಮೊಬೈಲ್‍ಗೆ ಕೊಡುತ್ತಿದ್ದಾರೆ. ಇದರಿಂದ ತಮ್ಮಭವಿಷ್ಯ ಮಸುಕಾಗುತ್ತಿದೆ ಎಂಬುದು ಅವರಿಗೆ ಅರ್ಥವಾಗುತ್ತಿಲ್ಲ ಎಂದರು.
ಸಮಾರಂಭ ಉದ್ಘಾಟಿಸಿದ ತುಮಕೂರು ವಿವಿ ಕುಲಪತಿ ಪ್ರೊ.ವೈ.ಎಸ್. ಸಿದ್ದೇಗೌಡರು, ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸವಾಗುತ್ತದೆ. ಅವರು ಕೇವಲ ತರಗತಿ ಕೊಠಡಿಗಳ ಅಭ್ಯಾಸಕ್ಕೆ ಸೀಮಿತವಾಗಬಾರದು ಎಂದರು.
ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ನೆಲದ ಜಾನಪದ ಸತ್ತ್ವವನ್ನು ಮೈಗೂಡಿಸಿಕೊಳ್ಳಬೇಕು. ಜಾನಪದ-ವಿಜ್ಞಾನ ಬೆರೆತಾಗ ಆರೋಗ್ಯಕರ ಸಮಾಜದ ಸೃಷ್ಟಿಯಾಗುತ್ತದೆ ಎಂದರು.

       ಪ್ರಾಂಶುಪಾಲ ಕೆ.ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಖೋಖೋ ತರಬೇತುದಾರರಾದ ಕೆ. ಎಸ್. ಉಮೇಶ್ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ರಂಗನಿರ್ದೇಶಕರಾದ ಎಂ. ವಿ. ಬಾಲಕೃಷ್ಣಯ್ಯ ಹಾಗೂ ಬಾಲಪ್ರತಿಭೆ ಎಂ.ಎನ್. ವೇಣುಗೋಪಾಲ್‍ಅವರನ್ನು ಸನ್ಮಾನಿಸಲಾಯಿತು.ವಿದ್ಯಾರ್ಥಿಗಳಿಂದ ವಿವಿಧ ವಿನೋದಾವಳಿಗಳು ಜರುಗಿದವು. ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಚಾಲಕ ಡಾ.ಎಸ್. ಶಿವಣ್ಣ, ಸಹಾಯಕ ದೈಹಿಕ ಶಿಕ್ಷಣ ನಿರ್ದೇಶಕ ಆರ್.ಸುದೀಪ್‍ಕುಮಾರ್ ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link