ಜನರ ನೆಮ್ಮದಿಗೆ ಪೊಲೀಸ್,ಯೋಧರು ಕಾರಣ

ಚಿತ್ರದುರ್ಗ ;

       ದೇಶದಲ್ಲಿ ಜನತೆ ನೆಮ್ಮದಿಯಿಂದ ನಿದ್ದೆ, ಶಾಂತಿಯಿಂದ ಸಮಾಜ ಇದೇ ಎಂದರೆ ಅದಕ್ಕೆ ಗಡಿಯಲ್ಲಿ ಸೈನಿಕರು ಒಳಗಡೆ ಪೋಲಿಸರು ಕಾರಣರಾಗಿದ್ದಾರೆ ಎಂದು ಚಿತ್ರದುರ್ಗ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಕೆ.ಸತ್ಯಭಾಮ ತಿಳಿಸಿದರು.

         ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ಹಾಗೂ ಕಲ್ಯಾಣ ದಿನಾಚರಣೆ ಅಂಗವಾಗಿ ನಗರದ ಡಿ.ಎ.ಆರ್ ಪೊಲೀಸ್ ಕವಾಯತು ಮೈದಾನದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ಪೋಲಿಸ್ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ಸನ್ಮಾನಿಸಿ ಮಾತನಾಡಿದರು.
ಶಿಸ್ತು ಮತ್ತು ಶಿಷ್ಟಾಚಾರಕ್ಕೆ ಹೆಸರಾಗಿರುವುದು ಪೋಲಿಸ್ ಅದರಲ್ಲೂ ಕರ್ನಾಟಕ ಪೋಲಿಸ್ ಎಂಬುದು ಹೆಮ್ಮೆಯ ವಿಷಯವಾಗಿದೆ. ದೇಶದ ಬಾವುಟ ಎತ್ತರದಲ್ಲಿ ಶಾಂತಿಯುತವಾಗಿ ಹಾರಾಡುತ್ತಿದೆ ಎನ್ನುವುದಾದರೆ ಅದರಲ್ಲಿ ಪೋಲಸರ ಶ್ರಮ ಇದೆ, ನೀವುಗಳು ನಿದ್ದೆಯನ್ನು ಬಿಟ್ಟು ಕೆಲಸ ಮಾಡಿದ್ದರಿಂದ ಜನತೆ ನೆಮ್ಮದಿಯಾಗಿ ನಿದ್ದೆಯನ್ನು ಮಾಡುತ್ತಾರೆ ಎಂದು ಅವರ ಕಾರ್ಯವನ್ನು ಶ್ಲಾಘಿಸಿದರು.

         ಏ.18 ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲರು ತಪ್ಪದೆ ಮತದಾನವನ್ನು ಮಾಡಬೇಕಿದೆ ಯಾವುದೆ ನೆಪವನ್ನು ಹೇಳುವುದರ ಮೂಲಕ ಮತದಾನವನ್ನು ಬಿಡಬಾರದು, ನೀವುಗಳು ಕೆಲಸದ ಮೇಲೆ ಬೇರೆ ಕಡೆಯಿಂದ್ದರೂ ಸಹಾ ಮತದಾನ ಮಾಡಲು ಅವಕಾಶವನ್ನು ಕಲ್ಪಿಸಲಾಗಿದೆ. ಅಂಚೆ ಮತಪತ್ರದ ಮೂಲಕ ಮತದಾನವನ್ನು ಮಾಡಬಹುದಾಗಿದೆ. ಈ ಬಾರಿ ಶೇ.100 ರಷ್ಟು ಮತದಾನವಾಗಬೇಕೆಂದು ಸಮಿತಿ ನಿರ್ಧಾರ ಮಾಡಿದೆ ಅದಕ್ಕೆ ಎಲ್ಲರು ಸಹಕಾರ ಮಾಡಬೇಕೆಂದು ಮನವಿ ಮಾಡಿದರು.

        ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರಾದ ಎಸ್.ಬಿ ವಸ್ತ್ರಮಠ ಮಾತನಾಡಿ, ಪೋಲಿಸ್ ಕಲ್ಯಾಣ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಾ ಬರುತ್ತಿದೆ ಇದರಲ್ಲಿ ಅರ್ಹರಾದವರು ಸಹಾಯ ಪಡೆಯುವುದರ ಮೂಲಕ ಉತ್ತಮವಾದ ಆರೋಗ್ಯವನ್ನು ಕಾಪಾಡಬೇಕಿದೆ. ಕಾನೂನನ್ನು ಯಾರು ಗೌರವಿಸುತ್ತಾರೋ ಅವರಿಗೆ ಕಾನೂನು ಗೌರವ ನೀಡತ್ತದೆ, ಕಾನೂನು ಮೀರಿ ನಡೆದವರಿಗೆ ಶಿಕ್ಷೆಯನ್ನು ಸಹ ಕೂಡಿಸುತ್ತದೆ ಎಂದರು.

          ಠಾಣೆಗಳಿಗೆ ಕೆಲಮೊಮ್ಮೆ ಸಣ್ಣ ಪುಟ್ಟ ಕಾರಣಗಳಿಗಾಗಿ ಬರುತ್ತಾರೆ ಅವರಿಗೆ ಸರಿಯಾದ ರೀತಿಯಲ್ಲಿ ಬುದ್ದಿವಾದವನ್ನು ಹೇಳುವುದರ ಮೂಲಕ ಅದನ್ನು ಅಲ್ಲಿಯೇ ಬಗೆಹರಿಸಿ ಇದರಿಂದ ವಾಜ್ಯಗಳ ಪ್ರಮಾಣ ಕಡಿಮೆಯಾಗಿತ್ತದೆ ಸಮಾಜವೂ ಸಹಾ ಶಾಂತಿಯಿಂದ ಇರುತ್ತದೆ ಎಂದು ತಿಳಿಸಿ, ದೀಪ ಯಾವ ರೀತಿ ತಾನು ಉರಿದು ಬೇರೆಯವರಿಗೆ ಬೆಳಕನ್ನು ನೀಡುತ್ತದೆ ಆದೇ ರೀತಿ ಪೋಲಿಸರು ಕೆಲಸ ಮಾಡುತ್ತಿರುವುದರಿಂದ ನಾವುಗಳು ನೆಮ್ಮದಿಯಿಂದ ಇದ್ದೇವೆ ಎಂದು ನ್ಯಾಯಾಧಿಶರು ತಿಳಿಸಿದರು.

          ಜಿಲ್ಲಾಧಿಕಾರಿ ವಿನೋತ್‍ಪ್ರಿಯಾ ಮಾತನಾಡಿ, ನಿಮ್ಮ ಕೆಲಸದ ಒತ್ತಡದಲ್ಲಿ ಕುಟುಂಬವನ್ನು ಮರೆಯಬೇಡಿ ಅದು ನಿಮ್ಮ ಬೆನ್ನೆಲುಬು ಅದ್ದರಿಂದ ಅವರ ಬಗ್ಗೆ ಕಾಳಜಿಯನ್ನುವಹಿಸಿ, ಕರ್ತವ್ಯ ಎಂದು ಮನೆಯನ್ನು ಮರೆಯಬೇಡಿ, ನಿಮ್ಮ ಕರ್ತವ್ಯದಲ್ಲಿ ಅವರು ಸಹಾ ಭಾಗಿಯಾಗಿರುತ್ತಾರೆ ಎಂಬುದನ್ನು ಮರೆಯಬೇಡಿ ಎಂದು ಕಿವಿ ಮಾತು ಹೇಳಿದರು.

ಯಾವುದೇ ಊರಿನಲ್ಲಿ ಗಲಬೆ, ಗಲಾಟೆ ಇಲ್ಲದೆ ಉತ್ತಮ ರೀತಿಯಲ್ಲಿ ಇರಬೇಕಾದರೆ ಪೊಲೀಸ್ ಸಿಬ್ಬಂದಿಗಳ ಪಾತ್ರ ಬಹಳ ಮುಖ್ಯವಾದದ್ದು ಸಮಾಜದಲ್ಲಿ ರಕ್ಷಣೆ ಮಾಡುವಂತಹ ಪೆಲೀಸರು ತಮ್ಮ ಕುಟುಂಬದ ಇತಾಸಕ್ತಿಯನ್ನು ಬಯಸಿ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.

         ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಬಿ ಮಂಜುನಾಥ್ ಪೋಲಿಸರು ಸಮಾಜದ ಸ್ವಾಸ್ಯವನ್ನು ಕಾಪಾಡುವ ವೈದ್ಯರಿದ್ದ ಹಾಗೇ ಅವರು ಉತ್ತಮವಾದ ರೀತಿಯಲ್ಲಿ ಕೆಲಸ ನಿರ್ವಹಿಸಿದರೆ ಸಮಾಜ ಶಾಂತಿಯುತವಾಗಿ ಇರುತ್ತದೆ ಇಲ್ಲವಾದಲ್ಲಿ ಆಶಾಂತಿಯ ವಾತಾವರಣ ಉಂಟಾಗುತ್ತದೆ, ಇದಕ್ಕೆ ಅವಕಾಶ ನೀಡಬಾರದೆಂದು ತಿಳಿಸಿದರು. ನಿವೃತ್ತ ಪೊಲೀಸ್ ಉಪಾಧೀಕ್ಷಕರಾದ ಎಸ್. ನಾಗರಾಜು, ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅರುಣ್ ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link