ಬೆಂಗಳೂರು
ಕರೋನ ಸೋಂಕು ಜನತೆಯನ್ನು ಬೆಚ್ಚಬೀಳಿಸಿಲ್ಲ..!! ಬದಲಾಗಿ ಜಯದೇವ ಆಸ್ಪತ್ರೆ ವೈದ್ಯರನ್ನೂ ಸಹ ಕಂಗೆಡಿಸಿಬಿಟ್ಟಿದೆ.!!
ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರಿಗೆ ಸೋಮಕು ತಗುಲಿರುವುದು ಬಹಳ ಆತಂಕಕ್ಕೆ ಕಾರಣವಾಗಿದೆ ಇಂದಿನಿಂದ ನಾಲ್ಕು ದಿನಗಳ ಕಾಲ ಜಯದೇವ ಹೊರರೋಗಿ ವಿಭಾಗವನ್ನು ಮುಚ್ಚಲಾಗಿದೆ.
ಸೋಂಕು ತಗುಲಿದ ನಂತರ ಇದೆ ಜೂನ್ 24 ರಿಂದ 27 ರವರಗೆ ಹೊರ ರೋಗಿಗಳ ವಿಭಾಗವನ್ನು ಮುಚ್ಚಲಾಗಿದೆ. ಪರಿಣಾಮ ಹೃದಯ ರೋಗಿಗಳಿಗೆ ಬಹಳ ತೊಂದೆಯಾಗಿದೆ ಹೇಳಿ, ಕೇಳಿ ಹೃದಯ ರೋಗಕ್ಕೆ ಸಂಬಧಪಟ್ಟಂತೆ ಬಡವರಿಗೆ ಬಹಳ ಕೈಗೆಟುವ ದರದ ಉತ್ತಮ ಚಿಕಿತ್ಸಾ ಆಸ್ಪತ್ರೆ ಎಂಬ ಹೆಗ್ಗಳಿಕೆ ಪಡೆದಿದೆ.
ಲಾಕ್ ಡೌನ್ ಸಂದರ್ಭದಲ್ಲೂ ಕೂಡ ಹೊರ ರೋಗಿ ವಿಭಾಗವನ್ನು ಬಂದ್ ಮಾಡಿರಲಿಲ್ಲ ಆದರೆ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗೆ ಕೊರೊನಾ ಕಾಣಿಸಿಕೊಂಡ ಹಿನ್ನಲೆ ಈ ಕ್ರಮ ಜರುಗಿಸಲಾಗಿದೆ. ತುರ್ತು ಚಿಕಿತ್ಸೆಯ ಅವಶ್ಯಕತೆ ಇದ್ದರೇ ಮಾತ್ರ ಆಸ್ಪತ್ರೆಗೆ ಬರುವಂತೆ ರೋಗಿಗಳಲ್ಲಿ ಆಸ್ಪತೆಯ ಆಡಳಿತ ಮಂಡಳಿ ಮನವಿ ಮಾಡಿದೆ.