ಹಾಸನ:
ಹಾಸನ ಜಿಲ್ಲಾ ಉಸ್ತುವಾರಿ ಮತ್ತು ಲೋಕೋಪಯೋಗಿ ಸಚಿವರಾದ ಮಾನ್ಯ ಹೆಚ್ ಡಿ ರೇವಣ್ಣ ಅವರನ್ನು ಸಚಿವೆ ಜಯಮಾಲಾ ಅವರು ಹೊಗಳಿರುವುದು ಇದೀಗ ಹಾಸನ ಜಿಲ್ಲೆಯ ಕಾಂಗ್ರೆಸ್ ನಾಯಕರ ಸಿಟ್ಟಿಗೆ ಕಾರಣವಾಗಿದೆ.ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಜಿಲ್ಲೆಯ ಕಾಂಗ್ರೆಸ್ ನಾಯಕ ಎ ಮಂಜು, ಸಚಿವೆ ಜಯಮಾಲಾ ಶ್ರವಣಬೆಳಗೊಳಕ್ಕೆ ಬಂದಿರುವುದು ಸರ್ಕಾರದ ಕಾರ್ಯಕ್ರಮಕ್ಕಾಗಿ ಸಚಿವೆಯಾಗಿ, ಅಲ್ಲಿಗೆ ಬಂದಿರುವ ಪ್ರಸ್ತುತತೆಯನ್ನು ಅವರು ಅರ್ಥ ಮಾಡಿಕೊಂಡು ಅಷ್ಟು ಕೆಲಸ ಮಾಡಿ ಹೋಗಬೇಕಿತ್ತು.
ಅದು ಬಿಟ್ಟು ಸಚಿವ ರೇವಣ್ಣನವರ ಏಜೆಂಟರಾಗಿ ಅಲ್ಲಿಗೆ ಬಂದಿದ್ದಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.ರಾಜಕೀಯವೆಂದರೆ ಸಿನಿಮಾ ಅಲ್ಲ ,ಅಲ್ಲಿ ಡೈಲಾಗ್ ಹೊಡೆದ ರೀತಿ ಇಲ್ಲಿ ಮಾತನಾಡಲಾಗುವುದಿಲ್ಲ, ಸಿನಿಮಾದಲ್ಲಿ ತಾವು ಎವರ್ ಗ್ರೀನ್ ತಾರೆ ಎಂದು ಅವರು ಹೇಳಿಕೊಳ್ಳಬಹುದು. ಆದರೆ ರಾಜಕೀಯದಲ್ಲಿ ಅವೆಲ್ಲ ನಡೆಯುವುದಿಲ್ಲ, ಇವರಂತಹ ಅನಾನುಭವಿಗಳು ಮಂತ್ರಿಯಾಗುವುದಕ್ಕೆ ನಾಲಾಯಕ್ , ಕಾಂಗ್ರೆಸ್ ನಲ್ಲಿದ್ದುಕೊಂಡು ಅವರು ಈ ರೀತಿ ಹೇಳಿಕೆ ನೀಡುವುದು ಪಕ್ಷಕ್ಕೆ ಅಪಮಾನ ಮಾಡಿದಂತೆ ಎಂದು ಪ್ರತಿಕ್ರಿಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
