ಉಪಚುನಾವಣೆ ಕದನ: ಪ್ರಚಾರಕ್ಕೆ ಗೈರಾದ ಜೆಡಿಎಸ್ ನಾಯಕರು

ಕಲಬುರುಗಿ

       ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಒಗ್ಗಟ್ಟು ಪ್ರದರ್ಶಿಸಿದ್ದ ಕಾಂಗ್ರೆಸ್-ಜೆಡಿಎಸ್ ನಾಯಕರು, ರಾಜ್ಯ ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ಐಕ್ಯತೆ ಪ್ರದರ್ಶಿಸುತ್ತಿಲ್ಲ. ಮೇ 19ರಂದು ಉಪಚುನಾವಣೆಗೆ ಮತದಾನ ಘೋಷಣೆಯಾಗಿದ್ದರೂ ಚಿಂಚೋಳಿಯಲ್ಲಿ ಯಾರೊಬ್ಬ ಜೆಡಿಎಸ್ ನಾಯಕರೂ ಸುಳಿದಿಲ್ಲ ಎಂಬ ಆರೋಪ ಕೇಳಿಬಂದಿದೆ.

       ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ ದೋಸ್ತಿ ಪಕ್ಷಕ್ಕೆ ಸಾಥ್ ನೀಡುವುದಾಗಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಆದರೆ ಅದು ಬರಿ ಹೇಳಿಕೆಗಷ್ಟೇ ಸೀಮಿತವಾಗಿದ್ದು , ಕಾಂಗ್ರೆಸ್ ಅಭ್ಯರ್ಥಿ ಸುಭಾಷ್‌ ರಾಠೋಡ್ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ನೆಪಮಾತ್ರಕ್ಕೆ ಸಹಕಾರ ಸಚಿವ ಬಂಡೆಪ್ಪ ಖಾಶಂಪೂರ ಆಗಮಿಸಿದ್ದು ಬಿಟ್ಟರೆ ಬೇರೆಯಾವ ಜೆಡಿಎಸ್ ನಾಯಕರು ಇತ್ತ ಸುಳಿದಿಲ್ಲ.

       ಮೇಲ್ಮಟ್ಟದ ಜೆಡಿಎಸ್ ನಾಯಕರು ಅಥವಾ ಸ್ಥಳೀಯ ಮಟ್ಟದ ನಾಯಕರು ಸಹ ಸುಭಾಷ್ ರಾಠೋಡ್ ಪರ ಪ್ರಚಾರದಲ್ಲಿ ಒಲವು ತೋರುತ್ತಿಲ್ಲ. ಕುಂದಗೋಳದ ಜವಾಬ್ದಾರಿಯನ್ನು ಸಚಿವ ಡಿ.ಕೆ.ಶಿವಕುಮಾರ್ ವಹಿಸಿದ್ದು, ಕುಂದಗೋಳದಲ್ಲಿ ತೋರಿದ ಆಸಕ್ತಿಯನ್ನು ಜೆಡಿಎಸ್ ನಾಯಕರು ಚಿಂಚೋಳಿಯಲ್ಲಿ ಏಕೆ ತೋರುತ್ತಿಲ್ಲ ? ಎಂಬ ಚರ್ಚೆ ಇದೀಗ ಸ್ಥಳೀಯ ಮಟ್ಟದಲ್ಲಿ ಸೇರಿದಂತೆ ರಾಜ್ಯಮಟ್ಟದಲ್ಲಿಯೂ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕಳೆದೆರಡು ದಿನಗಳಿಂದ ಅಭ್ಯರ್ಥಿ ಪರ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಚಿಂಚೋಳಿಯಲ್ಲಿ ಠೀಕಾಣಿ ಹೂಡಿ ಪ್ರಚಾರದಲ್ಲಿ ತೊಡಗಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap