ತುಮಕೂರು:
ರಫೆಲ್ ಯುದ್ದನೌಕರೆ ಹಗರಣ ಸಂಬಂಧ ಪ್ರಧಾನಿಗಳು ಜನರಿಗೆ ಉತ್ತರಿಸಬೇಕು ಹಾಗೂ ಯುದ್ದ ನೌಕೆ ಹಗರಣ ಪ್ರಕರಣವನ್ನು ಸದನದ ಜಂಟಿ ಸಂಸದೀಯ ಸಮಿತಿಗೆ ನೀಡಬೇಕು ಎಂದು ಸಿಸಿಐ ಜಿಲ್ಲಾ ಕಾರ್ಯದರ್ಶಿ ಗೀರೀಶ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಸಿಪಿಐ ವತಿಯಿಂದ ನಗರದಲ್ಲಿರುವ ಕೇಂದ್ರ ಸರ್ಕಾರಿ ಸೌಮ್ಯದ ಬಿಎಸ್‍ಎನ್‍ಎಲ್ ಮುಂದೆ ನಡೆದ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರನ್ನು ಉದ್ದೇಶಿ ಮಾತನಾಡಿದ ಅವರು, ದೇಶದ ರಫೇಲ್ ಯುದ್ದ ವಿಮಾನ ಖರೀದಿ ಹಾಗೂ ಉತ್ಪಾದನೆಯಲ್ಲಿ ಭಾರಿ ಹಗರಣವೊಂದು ಬೆಳಕಿಗೆ ಬಂದಿದ್ದು, ಪ್ರಧಾನಿಗಳೇ ನೇರವಾಗಿ ನಡೆಸಿರುವ ವ್ಯವಹಾರವಾಗಿರುವುದರಿಂದ ದೇಶದ ದೇಶದ ನಾಗರಿಕರಿಗೆ ಹಗರಣದ ಬಗ್ಗೆ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.
ಭಾರತ ವಿಶ್ವದಲ್ಲೇ ಅತೀ ಹೆಚ್ಚು ಶಸ್ತ್ರಾಸ್ತ್ರ ಹಾಗೂ ರಕ್ಷಣಾ ಉಪಕರಣಗಳನ್ನು ಆಮದು ಮಾಡಿಕೊಳ್ಳುವ ದೇಶವಾಗಿದ್ದು, ಇದೇ ಕಾರಣಕ್ಕಾಗಿಯೇ ಅನೇಕ ದೇಶದ ನೇತಾರರು ತಮ್ಮ ದೇಶಗಳ ರಕ್ಷಣಾ ಉತ್ಪನ್ನಗಳನ್ನು ಉತ್ತೇಜಿಸುವ ಸಲುವಾಗಿಯೇ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ರಫೇಲ್ ಯುದ್ದ ವಿಮಾನಗಳ ವ್ಯವಹಾರವನ್ನು ಯುಪಿಎ-2 ಸರ್ಕಾರದ ಅವಧಿಯಲ್ಲಿ ಸುರ್ದೀಘ ಹರಾಜು ಪ್ರಕ್ರಿಯೆ ನಡೆಸಿ ನಂತರ ಅಂತಿಮಗೊಳಿಸಲಾಗಿತ್ತು. ಅಂದು 126 ರಫೇಲ್ ಯುದ್ದ ವಿಮಾನಗಳ ಖರೀದಿಗಾಗಿ ಅನೇಕ ಅಂಶಗಳನ್ನು ಪರಿಗಣಿಸಲಾಗಿತ್ತು.
ಆದರೆ ಎನ್‍ಡಿಎ ಸರ್ಕಾರಗಳನ್ನು ನಿಮಯಗಳನ್ನು ಸಡಿಲಗೊಳಿಸಿ ಒಪ್ಪಂದ ಮಾಡಿಕೊಂಡಿರುವುದು ಏಕೆ? ಪ್ರಮುಖವಾಗಿ ಭಾರತಕ್ಕೆ ತಂತ್ರಜ್ಞಾನ ವರ್ಗಾವಣೆಯಾಗಬೇಕು, ಉತ್ಪಾದನೆಯನ್ನು ಡೆಸಾಲ್ಟ್ ಹಾಗೂ ಎಚ್‍ಎಎಲ್ ಜಂಟಿಯಾಗಿ ನಿರ್ವಹಿಸಬೇಕು. ದೇಶದ ಅಂತರೀಕ್ಷ ನೌಕೆ ತಯಾರಿಕಾ ಉದ್ಯಮವನ್ನು ಆಫ್‍ಸೆಟ್ ಷರತ್ತಿನಡಿ ತರಬೇಕು, ವಾಯ ಸೇನೆಯ ಹಳೆಯ ಯುದ್ದ ವಿಮಾನಗಳ ಬದಲಾವಣೆ ಸೇರಿದಂತೆ ಈ ಹಿಂದೆ ಅನೇಕ ಷರತ್ತುಗಳನ್ನು ವಿಧಿಸಲಾಗಿತ್ತದ್ದಾರೂ ಎಲ್ಲವನ್ನು ಗಾಳಿಗೆ ತೂರಿ ಖಾಸಗಿ ಕಂಪನಿಯೊಂದರ ಲಾಭಕ್ಕಾಗಿ ಕೇಂದ್ರ ಸರ್ಕಾರ ಈ ಒಪ್ಪಂದದಲ್ಲಿ ಭಾರಿ ಅವ್ಯವಹಾರ ನಡೆಸಿದೆ ಎಂದು ಗೀರೀಶ್ ಆರೋಪಿಸಿದರು.
ದೇಶದ ಅಂತರಿಕ್ಷನೌಕೆ ತಯಾರಿಕಾ ಉದ್ದಿಮೆಯಾದ ಎಚ್‍ಎಎಲ್ ಡಸಾಲ್ಟ್‍ನ ಸಹ ಭಾಗಿಯಾಗಿ, ಪ್ರತಿ ವಿಮಾನದ ದರ ರೂ.550 ಕೋಟಿಯನ್ನು ಯುಪಿಎ-2 ಸರ್ಕಾರದ ಅವಧಿಯಲ್ಲಿ ನಗದಿಪಡಿಸಲಾಗಿತ್ತು. ಆದರೆ ಎನ್‍ಡಿಎ ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ 2015ರಲ್ಲಿ ಅಂದಿನ ರಕ್ಷಣಾ ಸಚಿವರಾಗಿದ್ದ ಮನೋಹರ್ ಪರಿಕರ್ ಪ್ರತಿ ವಿಮಾನದ ದರ ಸುಮಾರು 720 ಕೋಟಿಯಾಗಲಿದೆ ಎಂದಿದ್ದರು. ಪ್ರಧಾನಿ ಮೋದಿ ತಮ್ಮ ಆಪ್ತಮಿತ್ರ ಅನಿಲ್ ಅಂಬನಿ ಹಾಗೂ ಗೌತಮ್ ಅಂಬಾನಿ ಅವರೊಂದಿಗೆ ಫ್ರಾನ್ಸ್ ದೇಶಕ್ಕೆ ಒಂದೇ ವಿಮಾನದಲ್ಲಿ ತೆರಳಿ ಅಂಬನಿಯ ಹೊಸ ಕಂಪನಿಯನ್ನು ರಫೇಲ್ ಒಪ್ಪಂದದ ಆಫ್‍ಸೆಟ್ ಪಾಲುದಾರರನ್ನಾಗಿ ಮಾಡಿ 36 ರಫೇಲ್ ಯುದ್ದ ವಿಮಾನಗಳನ್ನು ಕೊಳ್ಳಲು ಡಸಾಲ್ಟ್ ಕಂಪನಿಯೊಂದಿಗೆ ವ್ಯವಹಾರವನ್ನು ಘೋಷಸಿರುವುದರ ಹಿಂದಿರುವ ಮರ್ಮವೇನು ಎಂದು ಪ್ರಶ್ನಿಸಿದರು.
ರಫೇಲ್ ಯುದ್ದವಿಮಾನ ತಯಾರಿಕಾ ಪಾಲುದಾರರಾಗಲು ರಿಲೈಯನ್ಸ್ ಡಿಫೆನ್ಸ್ ಕಂಪನಿ ಅನುಭವ, ಪರಿಣತಿ ಮತ್ತು ಸಾಮಥ್ರ್ಯಗಳೇನು, ಅನಿಲ್ ಅಂಬಾನಿ ಓಡೆತನದ ರಿಲೈಯನ್ಸ್ ಕಮ್ಯುನಿಕೇಷನ್ಸ್ ಸೇರಿದಂತೆ ಅನೇಕ ಸಂಸ್ಥೆಗಳು ದಿವಾಳಿ ಅಂಚಿನಲ್ಲಿವೆ, ಇಂತಹ ಕಂಪನಿ ಮೇಲೆ ದೇಶದ ಜನ ಹೇಗೆ ವಿಶ್ವಾಸವಿಡಲು ಸಾಧ್ಯವಿದೆಯೇ? ಸರ್ಕಾರಿ ಸ್ವಾಮ್ಯದ ಎಚ್‍ಎಎಲ್‍ಗಿಂತ ಅನಿಲ್ ಅಂಬನಿಯ ಸಂಸ್ಥೆ ರಾಷ್ಟ್ರೀಯ ಭದ್ರತಾ ಹಿತದೃಷ್ಠಿ ಕಾಯುತ್ತದೆ ಎನ್ನುವ ನಂಬಿಕೆ ಇದೇಯೇ ಎಂದು ಗೀರೀಶ್ ಪ್ರಧಾನಿ ಮೋದಿಯವನ್ನು ಪ್ರಶ್ನಿಸಿದ್ದಾರೆ.
ಈ ಹಿಂದ ಒಪ್ಪಂದದಲ್ಲಿ ಒಪ್ಪಿಕೊಂಡಿದ್ದ ತಂತ್ರಜ್ಞಾನ ವರ್ಗಾವಣೆಯ ಷರತ್ತನ್ನು ಸಡಿಲಗೊಳಿಸುವ ಉದ್ದೇಶವೇನು? ಇದರಿಂದ ವೇಕ್ ಇನ್ ಇಂಡಿಯಾ ಏನಾಯಿತು? ಒಪ್ಪಂದಕ್ಕೆ 12 ದಿನಗಳ ಹಿಂದೆ ನೊಂದಾಣೆಯಾದ ಕಂಪನಿಗೆ 70 ವರ್ಷಗಳ ಸಾರ್ವಜನಿಕ ಉದ್ದಿಮೆಗಳಿಗಿಂತಲ್ಲೂ ಹೆಚ್ಚು ಸಾಮಥ್ರ್ಯವಿದೆಯೇ ಎನ್ನುವುದನ್ನು ಪ್ರಧಾನಿಗಳು ಉತ್ತರಿಸಬೇಕಿದೆ. 2016ರ ನವೆಂಬರ್‍ನಲ್ಲಿ 36 ರಫೆಲ್ ಯುದ್ದ ವಿಮಾನಗಲ ದರವನ್ನು ಪ್ರತಿ ವಿಮಾನಕ್ಕೆ 670 ಕೋಟಿ ಎಂದು ರಕ್ಷಣ ಇಲಾಖೆ ರಾಜ್ಯ ಸಚಿವಾಲಯ ಲೋಕಸಭೆಯಲ್ಲಿ ಬಹಿರಂಗೊಳಿಸಿತ್ತು. ಆದರೆ ಡಸಾಲ್ಟ್ ಹಾಗೂ ರಿಲೈಯನ್ಸ್ ಕಂಪನಿಗಳು ಪ್ರತಿಕಾ ಹೇಳಿಕೆ ನೀಡಿ ವಿಮಾನ ದರನವನ್ನು 1660 ಕೋಟಿ ಎಂದು ಘೋಷಿಸುತ್ತವೆ.
ಈ ರೀತಿ ಏಕಾಏಕಿ ಬೃಹತ್ ಪ್ರಮಾಣದಲ್ಲಿ ದರ ಏರಿಕೆ ಕಾರಣವೇನು ಎನ್ನುವುದನ್ನು ಕೇಂದ್ರ ಸರ್ಕಾರ ಬಹಿರಂಗಗೊಳಿಸಬೇಕು ಎಂದು ಒತ್ತಾಯಿಸಿದರು.
ನಾನೂ ತಿನ್ನಲ್ಲ, ತಿನ್ನಲು ಬಿಡೋದಿಲ್ಲ ಎಂದು ಹೇಳುತ್ತಿದ್ದ ದೇಶದ ಪ್ರಧಾನಿಯೇ ದೇಶದ ಭದ್ರತೆಯನ್ನು ಅಡವಿಟ್ಟು, ತಮ್ಮ ಆಪ್ತನಿಗೆ ಸುಲಿಗೆಗೆ ದಾರಿ ಮಾಡಿಕೊಟ್ಟಿದ್ದಾರೆ, ಇದರಲ್ಲಿ ಪ್ರಧಾನಿ ಪಾಲೇಷ್ಟು ಎಂದು ಸಾರ್ವಜನಿಕರವಾಗಿ ಚರ್ಚೆಯಾಗುತ್ತಿದೆ. ಈ ಎಲ್ಲಾ ಗೊಂದಲಗಳಿಗೆ, ಪ್ರಶ್ನೆಗಳಿಗೆ ಪ್ರಧಾನಿಗಳು ಉತ್ತರಿಸಬೇಕು, ರಾಷ್ಟ್ರದ ಭದ್ರೆತೆಗೆ ಧಕ್ಕೆ ತರಲಿರುವ ಹಾಗೂ ದೇಶದ ಬೊಕ್ಕಸವನ್ನು ಲೂಟಿ ಮಾಡುವ ರಫೇಲ್ ಯುದ್ದ ವಿಮಾನ ಖರೀದಿ ಮತ್ತು ಉತ್ಪಾದನೆಯಲ್ಲಿ ಆಗಿರುವ ಅವ್ಯವಹಾರ ಮತ್ತು ಭ್ರಷ್ಟಾಚಾರದ ಸಮಗ್ರ ಮಾಹಿತಿ ನೀಡುವ ದೃಷ್ಡಿಯಿಂದ ಪ್ರಕರಣವನ್ನು ಸದನದ ಜಂಟಿ ಸಂಸದೀಯ ಸಮಿತಿಗೆ ವಹಿಸಬೇಕು ಎಂದು ಸಿಪಿಐ ಆಗ್ರಹಿಸುತ್ತದೆ ಎಂದು ಗೀರೀಶ್ ತಿಳಿಸಿದರು.
ಸಿಪಿಐ ಜಿಲ್ಲಾ ಖಜಾಂಚಿ ಕಂಬೇಗೌಡ, ಜಿಲ್ಲಾ ಸಹಕಾರ್ಯದರ್ಶಿ ಕಾಂತರಾಜು ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಮಂಡಳಿ ಸದಸ್ಯರಾದ ವೈ.ಶ್ರೀರಾಮಯ್ಯ, ಕಾಂ.ನಾಗಣ್ಣ, ಕಾಂ.ಶಶಿಕಾಂತ್, ಕಾಂ.ಭೂತರಾಜು, ಕಾಂ.ಸತ್ಯನಾರಾಯಣ, ಕುಪ್ಪೂರು ನಾಗರತ್ನಮ್ಮ, ವೆಂಕಟೇಶ್, ರಾಜಣ್ಣ, ಗುಬ್ಬಿ ದೊಡ್ಡತಿಮ್ಮಯ್ಯ, ಜೇಮ್ಸ್, ವಿಪ್ರೋ ಚಂದ್ರಶೇಖರ್ ಸೇರಿದಂತೆ ಸಿಪಿಐನ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ