ಬೆಂಗಳೂರು
ಇತಿಹಾಸ ಪ್ರಸಿದ್ಧ ಬೆಂಗಳೂರು ಬಸವನಗುಡಿ ಕಡಲೇಕಾಯಿ ಪರಿಷೆ ಸೋಮವಾರದಿಂದ ಆರಂಭವಾಗಲಿದೆ. ಬೆಳಿಗ್ಗೆ ಬಸವಣ್ಣ ಮೂರ್ತಿಗೆ ತುಲಾಭಾರ ಮಾಡುವ ಮೂಲಕ ಕಡಲೇಕಾಯಿ ಪರಿಷೆಗೆ ಚಾಲನೆ ನೀಡಲಾಗುತ್ತದೆ.ಪರಿಷೆಗೆ ಬರುವವರು ತಪ್ಪದೆ ಕೈ ಚೀಲ ತರುವುದರೊಂದಿಗೆ ನಗರದ ಪರಿಸರವನ್ನು ಕಾಪಾಡಲು ಸಹಕರಿಸಬೇಕೆಂದು ಪಾಲಿಕೆ ಜನರಲ್ಲಿ ಮನವಿ ಮಾಡಿದೆ.
ರೈತರು ತಾವು ಬೆಳೆದ ಕಡಲೇಕಾಯಿಯನ್ನು ದೊಡ್ಡ ಗಣಪತಿ ಮತ್ತು ಬಸವಣ್ಣನಿಗೆ ಅರ್ಪಿಸಿ ಕಡಲೇಕಾಯಿ ಪರಿಷೆ ನಡೆಸುತ್ತಾರೆ. ಇದು ಬಹಳ ಹಿಂದಿನಿಂದಲು ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದ್ದು, ಚಾರಿತ್ರಿಕ ಹಿನ್ನಲೆಯನ್ನು ಒಳಗೊಂಡಿದೆ. ಬಸವನಗುಡಿ ಈ ಹಿಂದೆ ಸುಂಕೇನಹಳ್ಳಿ, ಸುತ್ತಮುತ್ತಲಿನ ಗವಿಪುರ, ಹೊಸಕೆರೆಹಳ್ಳಿ, ಯಡಿಯೂರು ನಾಗಸಂದ್ರ ಹಳ್ಳಿಗಳ ಸಮೂಹವಾಗಿತ್ತು.
ದೊಡ್ಡಬಸವನಗುಡಿ ಹಿಂದಿನ ಜಾಗದಲ್ಲಿ ಕಡಲೆಕಾಯಿ ಬೆಳೆದಾಗ ಅದನ್ನು ಒಂದು ಎತ್ತು ತಿಂದು, ತುಳಿದು ಹೋಗುತ್ತಿತ್ತು. ಒಂದು ದಿನ ರೈತರೆಲ್ಲ ಸೇರಿ ಆ ಎತ್ತನ್ನು ಹಿಂಬಾಲಿಸಿಕೊಂಡು ಹೋದಾಗ ಎತ್ತು ದೇವಸ್ಥಾನದಲ್ಲಿ ಕುಳಿತು ಕಲ್ಲಾಯಿತು ಎಂಬುದು ಹಿಂದಿನ ಪ್ರತೀತಿ.!
ಇದನ್ನು ನೋಡಿದ ರೈತರು ಈಶ್ವರನ ವಾಹನ ನಂದಿಯೇ ಬಂದು ಕಡಲೆಕಾಯಿ ತಿನ್ನುತ್ತಿತ್ತು. ಎಂಬುದನ್ನು ತಿಳಿದು ಪ್ರತಿ ವರ್ಷದ ಮೊದಲ ಬೆಳೆಯನ್ನು ಬಸವಣ್ಣನಿಗೆ ಅರ್ಪಿಸಿ ನಂತರ ಮಾರಾಟ ಮಾಡುವ ಪರಿಪಾಠವನ್ನು ರೂಢಿಸಿಕೊಂಡಿದ್ಧಾರೆ. ಕಾರ್ತಿಕ ಮಾಸದ ಕೊನೆಯ ಸೋಮವಾರ ಕಡಲೇಕಾಯಿ ಪರಿಷೆ ಬೆಂಗಳೂರಿನ ಜನಮಾನಸದಲ್ಲಿ ಹಾಸುಹೊಕ್ಕಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
