ಕಡಲೆಕಾಯಿ ಪರಿಷೆ ಪ್ರಾರಂಭ…..!

ಬೆಂಗಳೂರು

         ನಾಡು-ನುಡಿ ಕಲೆ-ಸಂಸ್ಕತಿ ಬೇಸಾಯ ಅನಾವರಣಗೊಳಿಸುವ ಕಡಲೆಕಾಯಿ ಪರಿಷೆಯು ನಗರದ ಮಲ್ಲೇಶ್ವರಂನ ಕಾಡುಮಲ್ಲೇಶ್ವರ ಬಯಲು ರಂಗ ಮಂಟಪದ ಆವರಣದಲ್ಲಿ ಆವರಣಗೊಂಡಿದ್ದು ಶುಕ್ರವಾರದಿಂದ ಸೋಮವಾರದ ವರೆಗೆ ನಾಲ್ಕು ದಿನಗಳ ಕಾಲ ಪರಿಷೆಯ ಅಂಗವಾಗಿ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ.

        ರೈತಸ್ನೇಹಿ, ಜನಪದ ಸಂಬಂಧಗಳನ್ನು ಗಟ್ಟಿಗೊಳಿಸುವ ಉದ್ದೇಶ ಹೊಂದಿದೆ.ಅಷ್ಟೇ ಅಲ್ಲದೆ, ಎಲ್ಲಾ ಜಾತಿ, ಧರ್ಮ,ವರ್ಗದ ಜನರು ಮುಕ್ತವಾಗಿ ಬೆರೆಯುವಂಥ ವಾತಾವರಣ ಕಡಲೆಕಾಯಿಪರಿಷೆಯಲ್ಲಿದೆ. ಜೊತೆಗೆ, ಇದೇ ಮೊದಲ ಬಾರಿಗೆ ಚಿತ್ರ ಪರಿಷೆ ಆಯೋಜಿಸಿವೆ. ಪರಿಷೆಯಲ್ಲಿ ನೂರೆಂಟು ರಥ ದೀಪಗಳ ನಮಾಮಿ ಮಲ್ಲೇಶ್ವರ ಶಿವದೀಪೆತ್ಸವ, ಕಾಡು ಮಲ್ಲೇಶ್ವರ ಸ್ವಾಮಿಗೆ ಕಡಲೆಕಾಯಿ ಅಭಿಷೇಕ ನೆರವೇರಿದ್ದು, ವಿಶೇಷವಾಗಿತ್ತು.

         ಪರಿಷೆ ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ ಚಾಲನೆ ನೀಡಿ, ನಮ್ಮ ಸಂಸ್ಕೃತಿ, ಪರಂಪರೆಯನ್ನು ಯುವ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಕಡಲೆಕಾಯಿ ಪರಿಷೆ ಹಮ್ಮಿಕೊಳ್ಳುತ್ತ ಬಂದಿದೆ. ಇದರಿಂದ ಕಡಲೆಕಾಯಿ ಬೆಳೆಗಾರರಿಗೂ ಅನುಕೂಲವಾಗಲಿದೆ. ಪರಿಷೆಗೆ ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ ಎಂದು ಹೇಳಿದರು.

        ಶಾಸಕ ಅಶ್ವಥ್ ನಾರಾಯಣ ಮಾತನಾಡಿ, ಅಕ್ಕ-ಪಕ್ಕದ ಊರುಗಳಿಂದ ಬಂದ ರೈತರು ತಾವು ಬೆಳೆದ ಕಡಲೆ ಬೀಜಗಳನ್ನು ಇಲ್ಲಿಗೆ ಹೊತ್ತು ತರುತ್ತಾರೆ. ಇದರಿಂದ ಅವರಿಗೆ ವ್ಯಾಪಾರ ಆಗುವ ಜೊತೆಗೆ,ಬೆಂಗಳೂರಿಗರಿಗೆ ಕಡಲೆಕಾಯಿ ಕೊಳ್ಳಲು ಅನುಕೂಲವಾಗುತ್ತದೆ ಎಂದು ನುಡಿದರು.

        ಚಿತ್ರಕಲಾ ಪರಿಷತ್ತು ಅಧ್ಯಕ್ಷ ಬಿ.ಎಲ್.ಶಂಕರ್, ಕಡಲೆಕಾಯಿ ಮಾತ್ರವಲ್ಲದೆ, ಚಿತ್ರ ಕಲಾವಿದರಿಗೆ ವೇದಿಕೆ ಕಲ್ಪಿಸಿರುವುದು ಸಂತಸ ತಂದಿದೆ.ಇದರಿಂದ ಕಲೆಗಾರರಿಗೆ ಪೆರೀತ್ಸಾಹ ದೊರೆಯುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

        ಪರಿಷೆಯಲ್ಲಿ ತುಮಕೂರು, ದೇವನಹಳ್ಳಿ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ವಿಜಯಪುರ, ಹೊಸಕೋಟೆ, ಗೌರಿಬಿದನೂರು, ಯಲಹಂಕ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳ ಕಡಲೇಕಾಯಿ ವ್ಯಾಪಾರಿಗಳು ಭಾಗವಹಿಸಿ, ನಾಟಿ, ಸಮ್ರಾಟ್, ಜೆಎಲ್ ಮತ್ತಿತರ ಜಾತಿಯ ಕಡಲೇಕಾಯಿಯನ್ನು ಪ್ರತಿ ಕೆಜಿಗೆ ?50-60 ದರದಂತೆ ಮಾರಾಟ ಮಾಡಿದರು.
ನರು ಉತ್ಸಾಹದಿಂದ ಪರಿಷೆಯಲ್ಲಿ ಪಾಲ್ಗೊಂಡರು. ತಮಗಿಷ್ಟವಾದ ಹಸಿ ಮತ್ತು ಹುರಿದ ಕಡಲೆಕಾಯಿಯನ್ನು ಖರೀದಿಸಿದರು. ಇದರ ಜೊತೆಗೆ ಮಕ್ಕಳ ಆಟಿಕೆಗಳು, ತಿಂಡಿ-ತಿನಿಸುಗಳು, ಕಬ್ಬಿನ ಜಲ್ಲೆ, ಹಣ್ಣುಗಳು, ಮಣ್ಣಿನ ಮತ್ತು ಪಿಒಪಿ ಬೊಂಬೆಗಳು, ಗೃಹೋಪಯೋಗಿ ಮತ್ತು ಹೆಣ್ಣುಮಕ್ಕಳ ಅಲಂಕಾರಿಕ ಆಭರಣಗಳ ಮಾರಾಟದ ಭರಾಟೆಯೂ ಜೋರಾಗಿ ನಡೆಯುತ್ತಿದೆ.

        ಕಡಲೇಕಾಯಿ ಪರಿಷೆಯ ನಿಮಿತ್ತ ಕಾಡು ಮಲ್ಲಿಕಾರ್ಜುನ ಸ್ವಾಮಿ, ನಂದಿತೀರ್ಥ ಶಿವಲಿಂಗ, ಲಕ್ಷ್ಮಿ ನರಸಿಂಹಸ್ವಾಮಿ, ಗಂಗಮ್ಮ, ಗಣೇಶ, ಬಸವ ಸೇರಿದಂತೆ ವಿವಿಧ ದೇವರಿಗೆ ವಿಶೇಷವಾಗಿ ಕಡಲೇಕಾಯಿ ಅಲಂಕಾರ ಮಾಡಲಾಗಿತ್ತು. ಸಾವಿರಾರು ಮಂದಿ ಭಕ್ತಾದಿಗಳು ಸಾಲುಗಟ್ಟಿ ನಿಂತು ಕಡಲೇಕಾಯಿ ಅಲಂಕಾರದಿಂದ ಕಂಗೊಳಿಸುತ್ತಿದ್ದ ದೇವರ ದರ್ಶನ ಪಡೆದು ಪರಿಷೆಯ ಕಡೆಗೆ ಹೆಜ್ಜೆ ಹಾಕಿದರು.

ಮಳೆಕಾಟ

         ನಾಲ್ಕು ದಿನ ಮಾತ್ರ ಕಡಲೆಕಾಯಿ ಪರಿಷೆ ನಡೆದರೂ ಹಿಂದಿನ ದಿನ ಹಾಗೂ ಮುಗಿದ ಬಳಿಕವೂ ಮಾರಾಟ ಕಡಿಮೆಯಾಗುವುದಿಲ್ಲ. ಆದರೆ ಈ ಬಾರಿ ಮಳೆಯಿಂದಾಗಿ ಮಳಿಗೆಗಳಿಗೆ ಹಾನಿಯಾಗಬಹುದು ಎಂಬುದು ರೈತರ ಅಳಲು. ಶುಕ್ರವಾರ ನಗರದಲ್ಲಿ ಮೋಡ ಮುಸುಕಿದ ವಾತಾವರಣವಿದ್ದು, ಬಿಟ್ಟು ಬಿಟ್ಟು ಜಿಟಿ ಜಿಟಿ ಮಳೆ ಸುರಿದ ಕಾರಣ, ಕಡಲೆಕಾಯಿ ಮಾರಾಟಗಾರರು, ಸಾರ್ವಜನಿಕರು,ಪರಿಷೆಯಲ್ಲಿ ತೊಂದರೆಗೆ ಸಿಲುಕಿದರು.

ಕಡಲೇಕಾಯಿ ಅಲಂಕಾರ…!

         ಕಡಲೇಕಾಯಿ ಪರಿಷೆಯ ನಿಮಿತ್ತ ಕಾಡು ಮಲ್ಲಿಕಾರ್ಜುನ ಸ್ವಾಮಿ, ನಂದಿತೀರ್ಥ ಶಿವಲಿಂಗ, ಲಕ್ಷ್ಮಿ ನರಸಿಂಹಸ್ವಾಮಿ, ಗಂಗಮ್ಮ, ಗಣೇಶ, ಬಸವ ಸೇರಿದಂತೆ ವಿವಿಧ ದೇವರಿಗೆ ವಿಶೇಷವಾಗಿ ಕಡಲೇಕಾಯಿ ಅಲಂಕಾರ ಮಾಡಲಾಗಿತ್ತು. ಸಾವಿರಾರು ಮಂದಿ ಭಕ್ತಾದಿಗಳು ಸಾಲುಗಟ್ಟಿ ನಿಂತು ಕಡಲೇಕಾಯಿ ಅಲಂಕಾರದಿಂದ ಕಂಗೊಳಿಸುತ್ತಿದ್ದ ದೇವರ ದರ್ಶನ ಪಡೆದು ಪರಿಷೆಯ ಕಡೆಗೆ ಹೆಜ್ಜೆ ಹಾಕಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link