ಕೈ ವಶವಾದ ಕಮಲಾಪುರ..!!!

ಹೊಸಪೇಟೆ :

     ತಾಲೂಕಿನ ಕಮಲಾಪುರ ಪಟ್ಟಣ ಪಂಚಾಯಿತಿ ಚುನಾವಣಾ ಫಲಿತಾಂಶ ಶುಕ್ರವಾರ ಹೊರ ಬಿದ್ದಿದ್ದು, 14ರಲ್ಲಿ ಕಾಂಗ್ರೆಸ್, ಪಕ್ಷೇತರರು 5, ಹಾಗು ಬಿಜೆಪಿ 1ರಲ್ಲಿ ಗೆದ್ದಿದೆ. ಇದರಿಂದ ಕಮಲಾಪುರ ಪ.ಪಂ. ಕೈ ವಶವಾದಂತಾಗಿದೆ.

      ಕಮಲಾಪುರ ಪ.ಪಂ.20 ವಾರ್ಡುಗಳಲ್ಲಿ 20 ಕಾಂಗ್ರೆಸ್, 18 ಬಿಜೆಪಿ, 8 ಜೆಡಿಎಸ್, ಹಾಗು 39 ಪಕ್ಷೇತರರು ಸ್ಪರ್ಧಿಸಿದ್ದರು. ಬಿಜೆಪಿ ಘಟಾನುಘಟಿ ನಾಯಕರನ್ನು ಪ್ರಚಾರಕ್ಕೆ ಕರೆ ತಂದಿತ್ತು. ಆದರೆ ಗಳಿಸಿದ್ದು ಮಾತ್ರ 1 ಸ್ಥಾನ. ಆದರೆ ಕಾಂಗ್ರೆಸ್‍ನ ಪ್ರಭಾವಿ ನಾಯಕರು ಪ್ರಚಾರದಿಂದ ದೂರ ಉಳಿದಿದ್ದರೂ 14ರಲ್ಲಿ ಗೆಲ್ಲುವ ಮೂಲಕ ಕಮಲಾಪುರ ಕಾಂಗ್ರೆಸ್‍ನ ಭದ್ರಕೋಟೆ ಎಂದು ಜನ ನಿರೂಪಿಸಿದ್ದಾರೆ. ಉಳಿದ 5ಸ್ಥಾನಗಳಲ್ಲಿ ಪಕ್ಷೇತರರು ತಮ್ಮ ಪಾರಮ್ಯ ಮೆರೆದಿದ್ದಾರೆ.

      ಗೆದ್ದವರು : ಕಾಂಗ್ರೆಸ್‍ನಿಂದ ಸೈಯದ್ ಅಮಾನುಲ್ಲಾ ಅನ್ವರ್ ಸಾಬ್, ಕೆ.ವಿ.ಸರಿತಾ, ಮುಕ್ತಿಯಾರ್ ಪಾಷಾ, ಪಿ.ರವಿಕುಮಾರ್, ಆರ್.ಪಾರ್ವತಿ, ಪಾಲಯ್ಯ, ಗೌಸಿಯಾ ಬೇಗಂ, ಅಜಯಕುಮಾರ್, ಈಶ್ವರಮ್ಮ, ಬೋರಮ್ಮ, ರಾಮಸ್ವಾಮಿ ಮಾಳಗಿ, ಅಮೀನಾ, ಜ್ಯೋತಿಬಾಯಿ, ಗೆದ್ದರೆ, ಪಕ್ಷೇತರರಾಗಿ ಎನ್.ಗಂಗಮ್ಮ, ಮಮತಾ, ಬಿ.ಕಿಶೋರಕುಮಾರ್, ಎಚ್.ಗೋಪಾಲಕೃಷ್ಣ, ಸ್ಟೈಲ್ ರಾಜ ಹಾಗು ಬಿಜೆಪಿಯಿಂದ ಎಂ.ಲಿಂಗಪ್ಪ ಗೆಲುವನ್ನು ಸಾಧಿಸಿದ್ದಾರೆ.

      ವಿಜಯೋತ್ಸವ : ಕಮಲಾಪುರ ಪ.ಪಂ.ಕೈ ವಶವಾಗುತ್ತಿದ್ದಂತೆ ಹೊಸಪೇಟೆ ನಗರದ ರೋಟರಿ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.ಈ ಸಂಧರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಟಿಂಕರ್ ರಫೀಕ್, ಅಮಾಜಿ ಹೇಮಣ್ಣ, ಮುಖಂಡರಾದ ಸಂದೀಪಸಿಂಗ್, ಡಿ.ವೆಂಕಟರಮಣ, ನಿಂಬಗಲ್ ರಾಮಕೃಷ್ಣ, ಎನ್.ವೆಂಕಟೇಶ, ಜೀವರತ್ನ, ಕೆ.ಪಾಂಡುರಂಗ ಸೇರಿದಂತೆ ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link