ಹೊಸಪೇಟೆ:
ತಾಲೂಕಿನ ಧರ್ಮಸಾಗರ ಸ.ಹಿ.ಪ್ರಾ.ಶಾಲೆಯಲ್ಲಿ ಶನಿವಾರ ಆಯುರ್ವೇದ ಚಿಕಿತ್ಸಾ ಶಿಬಿರ ನಡೆಯಿತು.ಜಿಲ್ಲಾಡಳಿತ, ಜಿ.ಪಂ, ಜಿಲ್ಲಾ ಆಯುಷ್ ಇಲಾಖೆ, ಬಳ್ಳಾರಿ, ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಬೈಲುವದ್ದಿಗೇರಿ. ಜಂಟಿಯಾಗಿ ಆಯೋಜಿಸಿದ್ದ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಜಿಲ್ಲಾ ಆಯುಷ್ ಅಧಿಕಾರಿ ವಂದನಾ.ಜೆ.ಗಾಳಿ, ಆಯುರ್ವೇದ ಚಿಕಿತ್ಸೆ ಎಂದರೆ ಎಲ್ಲೋ ಒಂದು ಕಡೆ ಜನಗಳಿಗೆ ಇದರಿಂದ ಬೇಗ ಗುಣವಾಗುವುದಿಲ್ಲ ಎಂಬ ಭಾವನೆ ಇದೆ. ಆದರೆ ಈ ಚಿಕಿತ್ಸೆಯ ಪರಿಣಾಮ ನಿಧಾನವಾದರೂ ಪಕ್ಕಾ ಚಿಕಿತ್ಸೆಯಾಗಿರುತ್ತದೆ. ಮತ್ತೆ ಕಾಯಿಲೆ ಮರುಕಳಿಸುವ ಸಾಧ್ಯತೆ ಕಡಿಮೆಯಿರುತ್ತದೆ. ಹೀಗಾಗಿ ಸಾರ್ವಜನಿಕರು ಇಂಥ ಶಿಬಿರಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿ ಗ್ರಾ.ಪಂ.ಅಧ್ಯಕ್ಷ ಎಚ್.ಮೂಕಪ್ಪ ಮಾತನಾಡಿ, ಆಯುರ್ವೇದ ಚಿಕಿತ್ಸಾ ಪದ್ದತಿಯಲ್ಲಿ ಯಾವುದೇ ಅಡ್ಡ ಪರಿಣಾಮವಿರುವುದಿಲ್ಲ. ಬದಲಿಗೆ ಇದೊಂದು ಉತ್ತಮ ವೈಧ್ಯ ಚಿಕಿತ್ಸೆಯಾಗಿರುತ್ತದೆ ಎಂದು ತಿಳಿಸಿದರು.ತಾ.ಪಂ.ಅಧ್ಯಕ್ಷೆ ಜೋಗದ ನೀಲಮ್ಮ ಶಿಬಿರವನ್ನು ಉದ್ಘಾಟಿಸಿದರು.
ಶಿಬಿರದಲ್ಲಿ ಸುಮಾರು 300 ಜನ ತಪಾಸಣೆ ಮಾಡಿಸಿಕೊಂಡರು. ವೈಧ್ಯರಾದ ಡಾ.ಮುನಿವಾಸುದೇವರೆಡ್ಡಿ, ಡಾ.ಚಂದ್ರಶೇಖರ್, ಡಾ.ಪದ್ಮಾವತಿ , ಡಾ.ಬಳಗಾರ್ನೂ ಮಂಜುನಾಥ ಸೇರಿದಂತೆ ಇತರೆ ವೈಧ್ಯರು ತಪಾಸಣೆ ಮಾಡಿದರು.ಗ್ರಾಮದ ಎಸ್ಡಿಎಂಸಿ ಅಧ್ಯಕ್ಷ ಪಂಪಾಪತಿ, ಬಸವರಾಜ, ಕೆ.ಮಲ್ಲಿಕಾರ್ಜುನ, ಈಶ್ರ್ವ, ಮುಖ್ಯಗುರು ಮಂಜುಳಾ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ