ಹರಪನಹಳ್ಳಿ,
ಇಂದು ರೈತರ ಪರಿಸ್ಥಿತಿ ಬಹಳ ಕಷ್ಟದಾಯಕವಾಗಿದ್ದು, ಕೇಂದ್ರ, ರಾಜ್ಯಸರ್ಕಾರಗಳು ರೈತರ ಉಳಿವಿಗಾಗಿ ವಿಶೇಷ ಯೋಜನೆ ಹಾಕಿಕೊಳ್ಳಬೇಕಾಗಿದೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ಹೇಳಿದ್ದಾರೆ.
ಅವರು ತಾಲೂಕಿನ ಕಡಬಗೇರಿ ಗ್ರಾಮದಲ್ಲಿ ಕೈತೋಟದಿಂದ ಕೈ ತುಂಬಾ ಕಾಸು ಎಂಬ ಯೋಜನೆ ಉದ್ಘಾಟಿಸಿ ಭಾನುವಾರ ಮಾತನಾಡಿದರು. ಸಮರ್ಪಕ ವಿದ್ಯುತ, ಗುಣ ಮಟ್ಟದ ರಸಗೊಬ್ಬರ, ವೈಜ್ಞಾನಿಕ ಬೆಲೆ ಸಿಕ್ಕಾಗ ರೈತರಿಗೆ ನೆಮ್ಮದಿ ಎಂದರು.ರೈತರಿಗೆ ಸರ್ಕಾರ ಏನು ಕೊಟ್ಟರೂ ಸಾಲದು ಎಂದ ಅವರು ಏನೇ ಆದರೂ ಆತ್ಮಹತ್ಯೆಗೆ ಮೊರೆ ಹೋಗಬೇಡಿ, ಹನಿ ನೀರಾವರಿ ಹಾಗೂ ಕೃಷಿ ತಜ್ಞರ ಸಲಹೆ ಪಡೆದು ಹೊಸ ಹೊಸ ಅವಿಷ್ಕಾರ ಅಳವಡಿಸಿಕೊಂಡು, ಹಳ್ಳಿ ತೊರೆಯದೇ ಸುಸ್ಥಿರ ಜೀವನ ನಡೆಸಿ ಎಂದು ಅವರು ರೈತರಿಗೆ ಸಲಹೆ ನೀಡಿದರು
ಮಾವು, ಹುಣಸೆ ಬೇಡ, ತರಕಾರಿ ಬೆಳೆಯಿರಿ ಪರವಾಗಿಲ್ಲ, ಕೇಂದ್ರ ಸರ್ಕಾರ ರೈತರಿಗಾಗಿ ಫಸಲ್ ಭೀಮಾ ಯೋಜನೆ ಸೇರಿದಂತೆ ಅನೇಕ ಯೋಜನೆಗಳನ್ನು ರೈತರಿಗಾಗಿ ಜಾರಿಗೆ ತಂದಿದೆ, ಅಂತಹ ಮೋದಿಯವರಿಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಅವರು ಹೇಳಿದರು.
ಬೆಂಗಳೂರಿನ ಕೃಷಿ ಅಭಿಯಾನ ಟ್ರಸ್ಟ್ ನ ಉಪಾದ್ಯಕ್ಷ ಡಾ.ಕೆ.ಆರ್ .ಹುಲ್ಲು ನಾಚೇಗೌಡರು ಮಾತನಾಡಿ ರೈತರಿಗೆ ವಿವಿಧ ರೀತಿಯ ಸೇವೆ ಒದಗಿಸಿ ರೈತರನ್ನು ಕೃಷಿ ಉದ್ದಿಮೆದಾರರನ್ನಾಗಿ ಪರಿವರ್ತಿಸಿ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದು ಹಾಗೂ ನಮ್ಮ ಮುಂದಿ ನ ಪೀಳಿಗೆ ವಿಷ ಪೂರಿತ ಮಣ್ಣು, ನೀರು, ಗಾಳಿ ಮತ್ತು ವಿಷಪೂರಿತ ಆಹಾರದಿಂದ ಮುಕ್ತವಾದ ಸಮೃದ್ದ ಜೀವನ ನಡೆಸುವಂತಾಗಬೇಕೆಂಬ ಆಶಯ ನಮ್ಮದಾಗಿದೆ ಎಂದು ತಿಳಿಸಿದರು.
ಕಡಬಗೇರಿ, ಕೋಡಿಹಳ್ಳಿ ಗಳಲ್ಲಿ 3 ವರ್ಷದ ಸುಸ್ಥಿರ ಕೃಷಿ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ, ಇದರಿಂದ ಸುಸ್ಥಿರ ಜೀವನ ಹಳ್ಳಿಯಲ್ಲಿಯೇ ಮಾಡಬಹುದು ಎಂದು ಅವರು ತಿಳಿಸಿದರು.ಕೃಷಿ ಗ್ರಾಮ ಯೋಜನೆ ಸಿಇಒ ಬಿ.ಸಿ.ವಿಶ್ವನಾಥ ಅವರು ಮಾತನಾಡಿ ಪ್ರತಿ ರೈತರು 10 ಸೆಂಟ್ಸ್ ಜಮೀನಿನಲ್ಲಿ 38 ಕಲ್ಲು ಕಂಬಗಳನ್ನು ನೆಟ್ಟು ಕೈ ತೋಟ ಅಭಿವೃದ್ದಿ ಪಡಿಸಿ ಸ್ವಾವಲಂಬಿ ಜೀವನ ನಡೆಸಬಹುದಾದ ವಿಭಿನ್ನ ಕಾರ್ಯಕ್ರಮ ಇದಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಪಲಾನುಭವಿಗಳಿಗೆ ಉಜ್ವಲ ಯೋಜನೆಯಲ್ಲಿ ಗ್ಯಾಸ್ ಒಲೆಗಳನ್ನು ವಿತರಿಸಲಾಯಿತು. ತಾ.ಪಂ ಸದಸ್ಯ ಹುಣ್ಸಿಹಳ್ಳಿ ಪ್ರಕಾಶ, ಮುಖಂಡರಾದ ಜಿ.ನಂಜನಗೌಡ, ಕಡಬಗೇರಿ ನಾಗನಗೌಡ, ಬಂದೋಳು ಮಂಜುನಾಥ, ಪಿ.ಷಣ್ಣೂಖಪ್ಪ, ಕೆ.ಆರ್ .ಸುಧಾಕರ, ಶಿವಕುಮಾರ, ಜಿ.ಲಿಂಗರಾಜು, ಸವಿತಾ ಮಲ್ಕಪ್ಪ, ಕಡ್ಲೇಬಾಳು ಧನಂಜಯ, ಓಂಕಾರಗೌಡರು, ಉಪಸ್ಥ್ತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
