ವಿಜೃಂಭಣೆಯಿಂದ ಜರುಗಿದ ಶ್ರೀಕಲ್ಲೇಶ್ವರ ರಥೋತ್ಸವ

ಹಗರಿಬೊಮ್ಮನಹಳ್ಳಿ

        ಪಟ್ಟಣದ ಹಳೇ ಊರಿನ ಐತಿಹಾಸಿಕ ಶ್ರೀಕಲ್ಲೇಶ್ವರ ಸ್ವಾಮಿಯ ರಥೋತ್ಸವವು ಸಹಸ್ರಾರು ಭಕ್ತರ ಸಮೂಹದಲ್ಲಿ ಶನಿವಾರ ಪಾಲ್ಗುಣ ಶುದ್ಧ ತದಿಗಿ ದಿನದಂದು ಸಾಯಂಕಾಲ ಸಕಲ ಭಕ್ತಾದಿಗಳ ಸಹಕಾರದೊಂದಿಗೆ 16ನೇ ವರ್ಷದ ರಥೋತ್ಸವ ವಿಜೃಂಭಣೆಯಿಂದ ಜರುಗಿತು.
ರಥೋತ್ಸವದ ಬಳಿಕ ತಂಬ್ರಹಳ್ಳಿ ವೃತ್ತದ ಬಳಿ ಶ್ರೀಸ್ವಾಮಿಯ ರಥೋತ್ಸವದ ಆಚರಣೆಯ ಸಮಿತಿಯ ಮುಖಂಡರಾದ ಹಾಲ್ದಾಳ್ವಿ

        ಜಯಕುಮಾರ್ ಪತ್ರಿಕೆಯೊಂದಿಗೆ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವು ಸಹ ಕಲ್ಲೇಶ್ವರ ರಥೋತ್ಸವವು ಸಂಭ್ರಮ ಸಡಗರದಿಂದ ಜರುಗಿತು. ಮಾ.4ರ ಸೋಮವಾರ ಸಂಜೆ ಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀಕಲ್ಲೇಶ್ವರ ಸ್ವಾಮಿಗೆ ವಿಶೇಷ ಪೂಜೆ ನೆರವೇರಿತು. ಮಾ.7ರ ಗುರುವಾರ ರಥದ ಕಳಸಸ್ಥಾಪನೆ, 8ರ ಶುಕ್ರವಾರ ರಾತ್ರಿ ಶ್ರೀಕಲ್ಲೇಶ್ವರ ಉತ್ಸವ ಮೂರ್ತಿ ಕಾರ್ಯಕ್ರಮ ಜರುಗಿತು. ಇಂದು ರಥೋತ್ಸವ ಕೂಡ ವಿಜೃಂಭಣೆಯಿಂದ ಜರುಗಿತು ಎಂದು ತಿಳಿಸಿದರು.

        ಬೆಳಿಗ್ಗೆಯಿಂದಲೇ ಶ್ರೀಸ್ವಾಮಿಗೆ ವಿಶೇಷ ಪೂಜೆ ಹಾಗೂ ಅಭಿಷೇಕ ನೆರವೇರಿತು. ಸಾಯಂಕಾಲ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಟಾಪಿಸಲಾಗಿತ್ತು. ಸಮಾಳ, ನಂದಿಕೋಲು, ಡೊಳ್ಳು ಹಾಗೂ ಮಂಗಳವಾದ್ಯಗಳ ಮೂಲಕ ಸಾಗಿ, ರಥದ ಸುತ್ತ ಪಲ್ಲಕ್ಕಿಯನ್ನು ಸುತ್ತ ಪ್ರದಕ್ಷಣಿ ಹಾಕಿ, ಸ್ವಾಮಿಯ ಮೂರ್ತಿ ರಥವನ್ನೇರಿತು. ಶ್ರೀಸ್ವಾಮಿಯ ಪತಾಕೆಯನ್ನು ಕೋಗಳಿಯ ಮಹಾಂತೇಶ 51 ಸಾವಿರ ರೂ.ಗಳಿಗೆ ಭಕ್ತಿ ಪೂರ್ವಕವಾಗಿ ಪಡೆದುಕೊಂಡರು. ಸೇರಿದ ಸಹಸ್ರಾರು ಭಕ್ತರು ಹೂ ಹಣ್ಣು ರಥಕ್ಕೆ ಎಸೆಯುವ ಮೂಲಕ ಹರಕೆ ತೀರಿಸಿದರು.

         ಪಶುಸಂಗೋಪನೆ ಇಲಾಖೆಯ ಹತ್ತಿರದ ಪಾದಗಟ್ಟೆಯವರೆಗೂ ರಥವೂ ಸಾಗಿ ನಂತರ ಪುನ: ಸ್ವಸ್ಥಾನಕ್ಕೆ ರಥವನ್ನು ಎಳೆದು ತಂದು ಕರತಾಳಗಳೊಂದಿಗೆ ಹರ್ಷೋದ್ಗಾರ ವ್ಯಕ್ತಪಡಿಸಿದರು.ರಥೋತ್ಸವ ಸಾಗುತ್ತಿದ್ದರೆ, ವಿವಿಧ ವಾಧ್ಯಗಳೊಂದಿಗೆ ಕೊಟ್ಟೂರಿನ ಕಿಂಗ್‍ಭೀಮ್ ನಾಸಿಕ್ ಡೋಲ್‍ನವರ ಕುಣಿತ ಮತ್ತು ವಾಧ್ಯ ಪಾಲ್ಗೊಂಡಿದ್ದ ಭಕ್ತ ಸಮೂಹದ ಆಕರ್ಷಣೆಯಾಗಿತ್ತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link