ಬಳ್ಳಾರಿ
ಬಳ್ಳಾರಿ ಸಂಡೂರು ಪಟ್ಟಣದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದ ಮುಖ್ಯ ವೇದಿಕೆ ಬ್ಯಾನರ್ನಲ್ಲಿ ಉಚ್ಚಾಟಿತ ಶಾಸಕ ಜೆ.ಎನ್ ಗಣೇಶ್ ಭಾವಚಿತ್ರ ವಿರುವುದು ಕಂಡು ಬಂದಿದೆ. ಎಲ್ಲ ಬ್ಯಾನರ್ಗಳಲ್ಲೂ ಗಣೇಶ್ ಭಾವಚಿತ್ರ ರಾರಾಜಿಸುತ್ತಿವೆ. ವೇದಿಕೆ ಹೊರಗಿನ ಬ್ಯಾನರ್ಗಳಲ್ಲೂ ಗಣೇಶ್ ಅವರ ಭಾವಚಿತ್ರ ಕಂಡು ಬಂದಿದೆ. ಇತ್ತೀಚಿಗಷ್ಟೇ ರಾಮನಗರದ ಈಗಲ್ಟನ್ ರೆಸಾರ್ಟನಲ್ಲಿ ಉಚ್ಚಾಟಿತ ಶಾಸಕ ಜೆ. ಎನ್ ಗಣೇಶ್ ಹಾಗೂ ಶಾಸಕ ಆನಂದ್ ಸಿಂಗ್ ಬಡಿದಾಡಿಕೊಂಡಿದ್ದರು. ಬಡಿದಾಟದ ನಂತರ ಕಾಂಗ್ರೆಸ್ನಿಂದ ಕಂಪ್ಲಿ ಶಾಸಕ ಗಣೇಶ್ ಅವರನ್ನು ಉಚ್ಚಾಟಿಸಲಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








