ಬಳ್ಳಾರಿ:
ಶಾಸಕ ಕಂಪ್ಲಿ ಗಣೇಶ್ ಜೈಲಲ್ಲಿದ್ದರೂ ನನಗೆ ಸಪೋರ್ಟ್ ಮಾಡಿದ್ದಾರೆ ಎಂದು ಬಳ್ಳಾರಿ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿವಿ.ಎಸ್.ಉಗ್ರಪ್ಪ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಡೀ ಕ್ಷೇತ್ರದ ತುಂಬಾ ನಾಲ್ಕಾರು ಬಾರಿ ಸುತ್ತಾಡಿದ್ದೇನೆ. ಕಳೆದ ಬಾರಿಗಿಂತ ಉತ್ತಮ ಬಹುಮತ ಬರುತ್ತೆ. ಸೂರ್ಯ ನಾರಾಯಣರೆಡ್ಡಿ ಸೇರಿದಂತೆ ಎಲ್ಲರೂ ನಮ್ಮ ಜೊತೆ ಹಾಗೂ ಪಕ್ಷದ ಜೊತೆ ಇದ್ದಾರೆ. ಎಲ್ಲ ಕೈ ಹಾಲಿ ಶಾಸಕರು ನನ್ನೊಂದಿಗೆ ಇದ್ದಾರೆ ಎಂದರು ಮೋದಿ ಮುಖ ನೋಡಿ ಓಟ್ ಹಾಕೋದಾದ್ರೆ ಬಿಜೆಪಿಯವರಿಗೆ ಆಮದು ಕ್ಯಾಂಡಿಡೇಟ್ ಯಾಕೆ ಬೇಕಿತ್ತು..? ಅವರ ಪಕ್ಷದ ನಿಷ್ಟಾವಂತ ಕಾರ್ಯಕರ್ತರನ್ನು ನಿಲ್ಲಿಸಬಹುದಿತ್ತು. ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪ ಬಳಿ ಧನಲಕ್ಷ್ಮೀ ಇದ್ದಾಳೆ. ಕ್ಷೇತ್ರವ್ಯಾಪಿ ಹಣಕ್ಕಾಗಿ ಬೇರೆ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಇಲ್ಲಿ ಬಂದಿದ್ದಾರೆ.
ಬಳ್ಳಾರಿ ಜಿಲ್ಲೆ ಮತದಾರರು ಸ್ವಾಭಿಮಾನಿಗಳು. ಕೆಲ ಲಾಡ್ಜ್ ಗಳಲ್ಲಿ ಬೇರೆಯವರು ಬಂದು ಉಳಿದು ಹಣ ಹಂಚುತ್ತಿದ್ದಾರೆ. ಅವರ ಮೇಲೆ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ. ಬಳ್ಳಾರಿ ಜನ ಇದಕ್ಕೆಲ್ಲ ಮಣೆ ಹಾಕಲ್ಲ. ನಾಳೆ ಹಾಗೂ ನಾಡಿದ್ದು ಮಾಜಿ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್? ಪ್ರಚಾರಕ್ಕಾಗಿ ಬಳ್ಳಾರಿಗೆ ಬರಲಿದ್ದಾರೆ ಅಂತಾ ಇದೆ ವೇಳೆ ಉಗ್ರಪ್ಪ ಹೇಳಿದರು.
ಇದೆ ವೇಳೆ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಕೈ ಶಾಸಕ ನಾಗೇಂದ್ರ ಮಾತನಾಡಿ, ನಾನು ಕಾಂಗ್ರೆಸ್ ಪಕ್ಷದಿಂದ ಗೆದ್ದಿರುವೆ, ನಾನು ಕಾಂಗ್ರೆಸ್?ನಲ್ಲೇ ಇರುವೆ.
ಕೆಲವರು ನನ್ನ ಮನಸ್ಸು ಬೇರೆ ಕಡೆ ಇದೆ, ದೇಹ ಮಾತ್ರ ಕಾಂಗ್ರೆಸ್ ನಲ್ಲಿದೆ ಅಂತಾರೆ, ಅವು ಎಲ್ಲ ಹೇಳೋರು ಹೇಳ್ತಾರೆ, ಅದು ಸಹಜ ಮಾತುಗಳು. ಆದರೆ ನಾನು ಮಾತ್ರ ಕಾಂಗ್ರೆಸ್ ನಲ್ಲೇ ಇರುವೆ. ಗ್ರಾಮೀಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇವೆ. ನಮಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಇದೆ. ಚುನಾವಣೆಯಲ್ಲಿ ಉಗ್ರಪ್ಪ ಅವರು ಗೆಲ್ತಾರೆ, ಅದರಲ್ಲಿ ಯಾವುದೇ ಅನುಮಾನ ಇಲ್ಲ ಅಂತಾ ಹೇಳಿದರು,ಈ ಸಂದರ್ಭದಲ್ಲಿ ಕಾಂಗ್ರೆಸಿನ ಎಲ್ಲಾ ಕಾರ್ಯಕರ್ತರು ಹಾಜರಿದ್ದರು.