ಹೊಸಪೇಟೆ :
ದಾಸಶ್ರೇಷ್ಠ ಕನಕದಾಸರ ಜಯಂತಿಯನ್ನು ತಾಲೂಕಿನಾಧ್ಯಂತ ಅದ್ದೂರಿಯಾಗಿ ಹಾಗು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ತಹಶೀಲ್ದಾರ್ ಎಚ್.ವಿಶ್ವನಾಥ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ತಾಲೂಕು ಆಡಳಿತ ಹಾಗು ತಾಲೂಕು ಕುರುಬರ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಇದೇ ನವೆಂಬರ್ 26ರಂದು ಕನಕದಾಸರ ಜಯಂತಿಯನ್ನು ಅರ್ಥಪೂರ್ಣವಾಗಿ ತಾಲೂಕಿನಾಧ್ಯಂತ ಆಚರಿಸಲಾಗುವುದು. ಈ ಬಾರಿ ವೇದಿಕೆ ಕಾರ್ಯಕ್ರಮವನ್ನು ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಸಲಾಗುವುದು ಎಂದರು.
ಅಂದು ಬೆಳಿಗ್ಗೆ ಹಂಪಿಯಿಂದ ಜ್ಯೋತಿಯನ್ನು ತಂದು, ತಾಲೂಕು ಕುರುಬರ ಸಂಘದ ಕಚೇರಿಯಲ್ಲಿ ದಾಸಶ್ರೇಷ್ಠ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಬಳಿಕ ವೇದಿಕೆ ಕಾರ್ಯಕ್ರಮ ಸ್ಥಳಕ್ಕೆ ಕೊಂಡೊಯ್ಯಲಾಗುವುದು. ಈ ಬಾರಿ ಮೆರವಣಿಗೆ ಕಾರ್ಯಕ್ರಮವಿರುವುದಿಲ್ಲ. ಬದಲಿಗೆ ವೇದಿಕೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ನೆರವೇರಿಸಲು ತೀರ್ಮಾನಿಸಲಾಗಿದೆ. ಕಾರ್ಯಕ್ರಮದಲ್ಲಿ ಕನಕದಾಸರ ಕೀರ್ತನೆಗಳು, ಅವರ ಕುರಿತು ಉಪನ್ಯಾಸ, ಹಾಗು ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ತಾಲೂಕು ಕುರುಬರ ಸಂಘದ ಅಧ್ಯಕ್ಷ ಜಿ.ಭರಮನಗೌಡ, ಮಾಜಿ ಹುಡಾ ಅಧ್ಯಕ್ಷರಾದ ಆರ್.ಕೊಟ್ರೇಶ, ಅಯ್ಯಾಳಿ ತಿಮ್ಮಪ್ಪ, ಎಲ್.ಸಿದ್ದನಗೌಡ, ನಗರಸಭೆ ಸದಸ್ಯ ರಾಮಚಂದ್ರಗೌಡ, ಹಂಪಿ ಸಿಪಿಐ ಪಂಪನಗೌಡ, ಮುಖಂಡರಾದ ಚೆನ್ನಪ್ಪ, ತಾಯಪ್ಪ ನಾಯಕ, ಎಚ್.ಮಹೇಶ, ಕೆ.ರವಿಕುಮಾರ್, ಬಂಧಿ ಭರ್ಮಪ್ಪ, ದಲ್ಲಾಲಿ ಕುಬೇರ, ಡಿ.ರವಿಶಂಕರ, ಚಂದ್ರಕಾಂತ ಸೇರಿದಂತೆ ಸಮಾಜದ ಮುಖಂಡರು ಹಾಗು ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ