ಕನ್ನಡವನ್ನೂ ಅನ್ನಕೊಡುವ ಭಾಷೆಯಾಗಿ ರೂಪಿಸುವ ಅಗತ್ಯವಿದೆ : ಹಾಲ್ಕುರಿಕೆ ಶಿವಶಂಕರ್

ತಿಪಟೂರು :

     ಕನ್ನಡ ಭಾಷೆಗೂ ನಮ್ಮ ಬದುಕಿಗೂ ಅಧಿಕ ಸಂಬಂಧವಿದೆ, ನಮ್ಮ ಭಾಷೆಗೆ ಅನ್ಯಭಾಷೆಗಳೊಂದಿಗೆ ಸರಿಸಮಾನವಾಗಿ ಕಾಣಲು ಅಧ್ಯಯನ ಅಗತ್ಯವಿಲ್ಲ ಕನ್ನಡವನ್ನು ಅನ್ನಕೊಡುವ ಭಾಷೆಯಾಗಿ ರೂಪಿಸುವ ಅಗತ್ಯವಿದೆ ಎಂದು ಹಾಲ್ಕುರಿಕೆ ಶಿವಶಂಕರ್ ತಿಳಿಸಿದರು.

       ತಾಲ್ಲೂಕಿನ ಹೊನ್ನವಳ್ಳಿಯಲ್ಲಿ ಆಯೋಜಿಸಿದ್ದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದ ರಂಗವಿಜ್ಞಾನಿ ಹಾಲ್ಕುರಿಕೆ ಶಿವಶಂಕರ್ ಅಧ್ಯಕ್ಷೀಯ ನುಡಿ ನುಡಿದ ಅವರು ಭಾಷೆ ಎನ್ನುವುದು ಬಂದು ವಿಜ್ಞಾನವಿದ್ದಂತೆ ಭಾಷೆಯ ಬೆಳವಣಿಗೆಗೆ ಅಗತ್ಯವಾದ ಪ್ರಯೋಗಗಳು ನಡೆಯಬೇಕು ಇಂಗ್ಲೀಷ್ ಸೇರಿದಂತೆ ಇತರೆ ಜಾಕತಿಕ ಭಾಷೆಯೊಂದಿಗೆ ನಮ್ಮ ಕನ್ನಡ ಸಮಾನವಾಗಿ ನಿಲ್ಲಬೇಕು. ಇತರೆ ಭಾಷೆಗೆ ನಮ್ಮ ಭಾಷೆಕಡಿಮೆಇಲ್ಲದಂತೆ ವೈಜ್ಞಾನಿಕವಾಗಿ ಅನ್ವೇಷಣೆಗಳಿಗೆ ಚಾಚಿಕೊಂಡಾಗ ಭಾಷೆಯಾಗಿ ಅನ್ನುಕೊಡುವ ಆಡಳಿತ ಭಾಷೆಯಾಗುತ್ತದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮ್ಮ ಮಕ್ಕಳಿಗೆ ಜಾಗತೀಕ ಶಿಕ್ಷಣದ ಅಗತ್ಯವಿದೆ ಮಕ್ಕಳ ಭಾಷಾಭಿವೃದ್ಧಿಗೆ ಪೋಷಕರು ಉತ್ತುನೀಡಬೇಕೆಂದರು.

        ಕಾರ್ಯಕ್ರಮದಲ್ಲಿ ದಿವ್ಯ ಸಾನಿದ್ಯವಹಿಸಿದ್ದ ಹೊನ್ನವಳ್ಳಿ ಶ್ರೀ ಕರಿಸಿದ್ದೇಶ್ವರ ಮಠದ ಶ್ರೀಶ್ರೀಶ್ರೀ ಶಿವಾಚಾರ್ಯ ಮಹಾಸ್ವಾಮೀಜಿಗಳು ಮಾತನಾಡಿ ಹೊನ್ನವಳ್ಳಿ ತಾಲ್ಲೂಕಿನ ಹಿಂದುಳಿದ ಹಾಗೂ ಬರ ಪೀಡಿತ ತಾಲ್ಲೂಕು ಕಳೆದ ನಲವತ್ತು ವರ್ಷಗಳಿಂದ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ನೀರಾವರಿ ಯೋಜನೆಗಳಿಂದ ವಂಚಿತವಾಗಿದ್ದು ಕುಡಿಯುವ ನೀರಿಗೂ ಆಹಾಕಾರಪಡುವಂತಾಗಿದೆ ಹೊನ್ನವಳ್ಳಿಗೆ ನೀರು ದೊರಕಿಸಲು ನನ್ನ ಪ್ರಾಣವನ್ನೇ ನೀಡಲು ಸಿದ್ಧ. ಈ ಭಾಗದ ನೀರಿನ ಸಮಸ್ಯೆ ಪರಿಹರಿಸಲು ಸರ್ಕಾರ ಮುಂದಾಗ ಬೇಕು ನಮ್ಮ ದೇಶದ ಪ್ರತಿಯೊಂದಕ್ಕೂ ಜಾತಿಯೇ ಮಾನದಂಡವಾಗಿದ್ದು ಮೊದಲು ಈ ಜಾತಿಯ ಮಾನದಂಡ “ತೊಲಗಿ ಮಾನವಕುಲ ತಾನೊಂದೇ ವಲಂ” ಎನ್ನುವಂತಾಗಬೇಕೆಂದರು.

         ಇದಕ್ಕೆ ಪ್ರತಿಕ್ರಿಯಿಸಿದ ತಾ.ಪಂ ಸದಸ್ಯ ಜಿ.ನಾರಾಯಣ್ ನಾನೂ ಸಹ ಈ ಭಾಗಕ್ಕೆ ನೀರೊದಗಿಸಲು ನನ್ನ ಪ್ರಾಣವನ್ನು ಮುಡಿಪಾಗಿಟ್ಟು ಎಲ್ಲರೂ ವಿಧಾನಸೌಧಕ್ಕೆ ಹೋಗಿ ಪ್ರತಿಭಟನೆ ಮಾಡೋಣ ಎಂದರು.

         ಇದೇ ಸಂದರ್ಭದಲ್ಲಿ ಹೊನ್ನವಳ್ಳಿ ಹೋಬಳಿ ಘಟಕದ ಪ್ರಥಮ ಸಾಹಿತ್ಯ ಸಮ್ಮೇಳನದ ನೆನಪಿಗಾಗಿ “ಹೊನ್ನಸಿರಿ” ಎಂಬ ಸ್ಮರಣ ಸಂಚಿಕೆಯನ್ನು ತಾ.ಪಂ ಅಧ್ಯಕ್ಷ ನ್ಯಾಕೆನಹಳ್ಳಿ ಸುರೇಶ್ ಮತ್ತು ಗಣ್ಯರು ಬಿಡುಗಡೆಗೊಳಿಸಿ ಮಾತನಾಡಿದ ಅವರು ಕನ್ನಡದ ಭಾಷೆಯ ಉಳಿವಿಗಾಗಿ ಹೋಬಳಿ ಮಟ್ಟದಲ್ಲಿಯೇ ಕನ್ನಡ ಸಾಹಿತ್ಯ ಅಗತ್ಯಗತ್ಯವಾಗಿದೆ ಇಂತಹ ಸಂದರ್ಭದಲ್ಲಿ ಹೊನ್ನವಳ್ಳಿ ಹೋಬಳಿಯ ಘಟಕದ ಈ ಕಾರ್ಯವನ್ನು ಶ್ಲಾಘಿಸುವಂತಹದ್ದು. ಕರ್ನಾಟಕದ ಹಾಸ್ಯ ಚಕ್ರವರ್ತಿ, ಕರ್ನಾಟಕದ ಚಾರ್ಲಿಚಾಂಪ್ಲಿನ್ ಎಂದು ಹೆಸರಾಗಿರುವ ದಿವಂಗತ ನರಸಿಂಹರಾಜುರವರ ಸ್ವಗ್ರಾಮ ಇಂದು ಅವರು ವಾಸಿಸುತ್ತಿದ್ದ ಮನೆಯು ಇಂದು ಹಾಳುಬಿದ್ದು ಒತ್ತುವರಿಯಾಗುತ್ತಿದೆ ಆದ್ದರಿಂದ ಇಂದು ನಾವು ಅವರ ಮನೆಯನ್ನು ಒಂದು ಸ್ಮಾರಕವಾಗಿ ಉಳಿಸಿ ಅದನ್ನು ಪ್ರವಾಸಿ ಕೇಂದ್ರವಾಗಿ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

         “ಹೊನ್ನಸಿರಿ” ಪುಸ್ತಕದಲ್ಲಿನ ವ್ಯಾಕರಣ ಕಾಗುಣಿತ ಆ ಪರಮೇಶ್ವರನಿಗೆ ಪ್ರೀತಿ ಎಂಬಂತಿದೆ.ಸಮ್ಮೇಳನದಲ್ಲಿ ಇಂದು ಸಾಂಕೇತಿಕವಾಗಿ ಬಿಡುಗಡೆಗೊಂಡ ಸ್ಮರಣ ಸಂಚಿಕೆ ಹೊನ್ನಸಿರಿಯಲ್ಲಿ ಬಹಳಷ್ಟು ವ್ಯಾಕರಣ, ಕಾಗುಣಿತಗಳು, ಅಲ್ಪವಿರಾಮ, ಪೂರ್ಣವಿರಾಮವೇ ಇಲ್ಲ ಇನ್ನು ಉದಾಹರಣೆಗೆ ಸಮ್ಮೇಳನಾಧ್ಯಕ್ಷರ ನುಡಿ ಇರಬೇಕಾಗಿದ್ದ ಕಡೆ ಸಮೇಳನಾಧ್ಯಕ್ಷರ ನುಡಿ ತಪ್ಪಾಗಿದ್ದು ಇಂತಹ ತಪ್ಪುಗಳು ಎಲ್ಲಾ ಪುಟಗಳಲ್ಲೂ ಸಾಮಾನ್ಯವಾಗಿದೆ. ಮುಂದೆ ಮುದ್ರಣವಾಗುವ ಇತರೆ ಸಂಚಿಕೆಗಳಲ್ಲಿ ಇದನ್ನು ಸರಿಪಡಿಸ ಬೇಕು. ಇಲ್ಲವಾದರೆ ಕನ್ನಡ ಸಾಹಿತ್ಯ ಪರಿಷತ್ತಿನ ಕೃತಿಗಳನ್ನು ಮಾದರಿಯಾಗಿಟ್ಟುಕೊಳ್ಳುತ್ತಾರೆ ಆದರೆ ಈ ಪುಸ್ತಕವು ಅದೇ ರೀತಿಯಾದರೆ ಉತ್ತಮವಾಗುತ್ತದೆ ಆದ್ದರಿಂದ ಪುಸ್ತಕದಲ್ಲಿನ ತಪ್ಪುಗಳನ್ನು ತಿದ್ದಿಕೊಳ್ಳುವುದೆಂದು ಪುಸ್ತಕವನ್ನು ಓದಿದ ಸಾಹಿತ್ಯಾಭಿಮಾನಿಗಳ ಆಶಯವಾಗಿದೆ.

        ಬೆಳಗ್ಗೆ 9 ಗಂಟೆಗೆ ಬೆಳ್ಳಿ ರಥದಲ್ಲಿ ಶ್ರೀ ಭುವನೇಶ್ವರಿ ಹಾಗೂ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಗ್ರಾಮದೇವತೆಯ ದೇವಾಲಯದಿಂದ ಹೊರಟು ಗಂಗಪಾನಿ ಕಲ್ಪವೃಕ್ಷವೇದಿಕೆಯನ್ನು ತಲುಪಿದ ನಂತರ ಕಾರ್ಯಕ್ರಮಗಳು ಜರುಗಿದವು. ಊಟದವ್ಯವಸ್ಥೆಯನ್ನು ಮಾಡಲಾಗಿತ್ತು ಊಟದ ನಂತರ ಇದ್ದ ಕವಿಗೋಷ್ಠಿಯ ಜೊತೆಗೆ ಕೃಷಿಗೋಷ್ಠಿಯನ್ನು ಏರ್ಪಡಿಸಿದ್ದರು ಸಾಹಿತ್ಯಾಭಿಮಾನಿಗಳ ಬರವಿತ್ತು.

        ಕಾರ್ಯಕ್ರಮದಲ್ಲಿ ತಾ.ಕ.ಸಾ.ಪ ಅಧ್ಯಕ್ಷ ಕೆ.ಬಾಲಕೃಷ್ಣ, ಶ್ರೀಮತಿ ಬಾ.ಹ.ರಮಾಕುಮಾರಿ, ಅಧ್ಯಕ್ಷರು ತುಮಕೂರು ಜಿ.ಕ.ಸಾ.ಪ ಶ್ರೇ ಧರ್ಮರಾಜೇ ಅರಸ್, ಚಲನಚಿತ್ರನಟರು, ಸಾರ್ಥವಳ್ಳಿ ನಾರಾಯಣಸ್ವಾಮಿ, ನಿರೂಪಕರು ಹೆಚ್.ಡಿ.ಪರಶುರಾಮನಾಯಕ್, ಮಲ್ಲಪ್ಪಚಾರ್ ಮತ್ತು ಸಾಹಿತ್ಯಾಭಿಮಾನಿಗಳಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link