ತಾಲ್ಲೂಕಿನಲ್ಲಿಯೂ ಸಹ ಕನಕ ಭವನ ನಿರ್ಮಾಣಕ್ಕೆ ಮನವಿ

0
30

ಕೊರಟಗೆರೆ ;-

        ಜಿಲ್ಲಾ ಕೇಂದ್ರಗಳಲ್ಲಿ ನಿರ್ಮಾಣ ಮಾಡಲಾಗಿರುವ ಕನಕ ಭವನ ಮಾದರಿಯಲ್ಲಿಯೆ ಕೊರಟಗೆರೆ ತಾಲ್ಲೂಕಿನಲ್ಲಿಯೂ ಸಹ ಕನಕ ಭವನ ನಿರ್ಮಾಣಕ್ಕೆ ಜನಾಂಗ ಮುಖಂಡರುಗಳು ಸಹಕಾರ ನೀಡಬೇಕು ಎಂದು ತಾಲ್ಲೂಕ್ ಕುರುಬ ಸಂಘದ ಅದ್ಯಕ್ಷರಾದ ಮೈಲಾರಪ್ಪ ಸಮುದಾಯದಕ್ಕೆ ಮನವಿ ಮಾಡಿಕೊಂಡರು.

        ಪಟ್ಟಣದ ಬೈಲಾಂಜನೇಯ ಸ್ವಾಮಿ ದೇವಸ್ಥಾನದ ಬಳಿ ಕುರುಬ ಸಮುದಾಯಕ್ಕೆ ಸರ್ಕಾರದಿಂದ ಮುಂಜುರಾದ 2 ಎಕರೆ ಜಮೀನಿನಲ್ಲಿ ಕನಕ ಭವನ ನಿರ್ಮಾನಕ್ಕೆ ಗುದ್ದಲಿ ಪೂಜೆಗೆ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಹಾಲಿ ಉಪ ಮುಖ್ಯಮಂತ್ರಿಗಳಾದ ಡಾ,ಜಿ ಪರಮೇಶ್ವರ್ ಆಹ್ವಾನಿಸಲು ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡುತ್ತಾ, ಜಿಲ್ಲಾ ಕೇಂದ್ರಗಳಲ್ಲಿ ನಿರ್ಮಾಣವಾಗಿರುವ ಕನಕ ಭವನ ಮಾದರಿಯಲ್ಲೆ ಸುಸಜ್ಜಿತವಾಗಿ ನಿರ್ಮಿಸಲು ಜನಾಂಗದವರು ಸಹಕರಿಸಬೇಕೆಂದು ಮನವಿ ಮಾಡಿಕೊಂಡರು.

       ಕೊರಟಗೆರೆ ಪಟ್ಟಣದಲ್ಲಿ 2 ಎಕರೆ ಜಮೀನು ಮುಂಜೂರು ಮಾಡಿದ ಪ್ರಮುಖ ಮುಖಂಡರನ್ನು ವೇದಿಕೆಯಲ್ಲಿ ಸನ್ಮಾನಿಸಲು ಹಾಗೂ ಕನಕ ಭವನ ಸಮುದಾಯ ಭವನಕ್ಕೆ ಈಗಾಗಲೆ 50 ಲಕ್ಷ ರೂ ಅನುದಾನ ಮುಂಜೂರಾಗಿದ್ದು, 5 ಕೋಟಿ ರೂ ವೆಚ್ಚದಲ್ಲಿ ಕನಕ ಭವನ ನಿರ್ಮಾಣಕ್ಕೆ ಕ್ರಿಯಾ ಯೋಜನೆ ಇರುವ ಕಾರಣ ಉಳಿದ ಅನುದಾನ ತಂದು ಸಮುದಾಯ ಭವನ ಪೂರ್ಣಗೊಳಿಸಲು ಸಮುದಾಯದವರ ಸಹಕಾರ ಬಹುಮುಖ್ಯವಾಗಲಿದೆ ಎಂದರು.

       ಕುರುಬ ಸಮುದಾಯದ ಹಿರಿಯ ಮುಖಂಡರಾದ ಈರಣ್ಣ ಮಾತನಾಡಿ ಕೊರಟಗೆರೆಯಲ್ಲಿ ಕನಕ ಭವನ ಪೂರ್ಣಗೊಂಡರೆ ಜನಾಂಗಕ್ಕೆ ಗೌರವ ಬರಲಿದ್ದು, ಗುದ್ದಲಿ ಪೂಜೆಗೆ ಅತಿಹೆಚ್ಚು ಜನಸಂಖ್ಯೆ ಸೇರಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಲು ಪ್ರತಿಯೊಬ್ಬರು ಶ್ರಮವಹಿಸಬೇಕು, ಜನಾಂಗದ ಅಭಿವೃಧ್ಧಿ ವಿಚಾರ ಬಂದಂತಹ ಸಂಧರ್ಭದಲ್ಲಿ ತಾಲ್ಲೂಕಿನ ಮುಖಂಡರುಗಳು ಸ್ವಾರ್ಥ ಹಾಗೂ ಸ್ವ ಪ್ರತೀಷ್ಟೆ ಬಿಟ್ಟು ಜನಾಂಗದ ಏಳಿಗೆಗೆ ಕೈ ಜೋಡಿಸಬೇಕು ಎಂದರು.

      ತಾಲ್ಲೂಕ್ ಕುರುಬ ಸಂಘದ ಉಪಾದ್ಯಕ್ಷರಾದ ಲಕ್ಷ್ಮಿಕಾಂತ್ ಮಾತನಾಡಿ ಜಮೀನು ಮುಂಜುರಾತಿ ವಿಚಾರದಲ್ಲಿ ತಾಲ್ಲೂಕ್ ಅದ್ಯಕ್ಷರಾದ ಮೈಲಾರಪ್ಪನವರ ಪಾತ್ರ ಪ್ರಮುಖವಾಗಿದ್ದು, ಇವರ ಹೆಸರು ಈ ಹಿಂದೆ ಜಿಲ್ಲೆಯ ಕುರುಬ ಸಮುದಾಯಕ್ಕೆ ಸಂಬಂಧಿಸಿದಂತೆ ಒಂದು ಸ್ಥಿರ ಆಸ್ತಿ ಹಾಗೂ ವಿದ್ಯಾ ಸಂಸ್ಥೆ ಸ್ಥಾಪಿಸಿದ ಹಲವು ಮುಖಂಡರು ಶ್ರಮ ವಹಿಸಿ ಹೆಸರುಗಳಿಸಿದಂತೆ ಇವರ ಹೆಸರು ಅಜರಾಮರವಾಗಲಿದೆ ಜೊತೆಗೆ ಕೊರಟಗೆರೆ ಪಟ್ಟಣದಲ್ಲಿ ಕನಕ ಭವನ ಪೂರ್ಣಗೊಳಿಸು ವಿಚಾರದಲ್ಲಿ ಇವರು ಹೆಚ್ಚು ಆಸಕ್ತಿ ವಹಿಸಿ ಪೂರ್ಣಗೊಳಿಸಬೇಕು ಎಂದರು.

          ತಾಲ್ಲೂಕ್ ಕುರುಬ ಸಂಘದ ಕಾರ್ಯದರ್ಶಿ ಚಿಕ್ಕಹನುಮಯ್ಯ ಮಾತನಾಡಿ ಕನಕ ಭವನ ಗುದ್ದಲಿ ಪೂಜೆ ಕಾರ್ಯಕ್ರಮಕ್ಕೆ ಕುರುಬ ಸಮುದಾಯದ ಪ್ರಮುಖ ನಾಯಕರುಗಳಾದ ಸಿದ್ದರಾಮಯ್ಯ, ಈಶ್ವರಪ್ಪ, ಹೆಚ್,ಎಂ ರೇವಣ್ಣ, ಬಂಡೆಪ್ಪ ಕಾಶೆಂಪೂರ್, ಹೆಚ್,ವಿಶ್ವನಾಥ್, ವರ್ತೂರ್ ಪ್ರಕಾಶ್, ಭೈರತಿ ಬಸವರಾಜ್, ಭೈರತಿ ಸುರೇಶ್, ಎಂ,ಟಿ,ಬಿ ನಾಗರಾಜ್, ಶಿವಳ್ಳಿ, ಹೆಚ್,ವೈ ಮೇಟಿ, ರಾಘವೇಂದ್ರ ಹಿಟ್ನಾಳ್, ತರಿಕೆರೆ ಶ್ರೀನಿವಾಸ್ ಸೇರಿದಂತೆ ಜಿಲ್ಲೆಯ ಮಾಜಿ ಶಾಸಕ ಸುರೇಶ್ ಬಾಬು, ಮಾಜಿ ವಿಧಾನ ಪರಿಷತ್ ಸದಸ್ಯ ಡಾ,ಹುಲಿನಾಯ್ಕರ್, ಪ್ರತಿಷ್ಟಿತ ಪತ್ರಿಕಾ ಸಂಪಾದಕರಾದ ಎಸ್ ನಾಗಣ್ಣ, ಸೇರಿದಂತೆ ಹಲವರನ್ನು ಆಹ್ವಾನಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವುದಲ್ಲದೆ ಪ್ರಮುಖ ನಾಯಕರ ಆಶಯದಂತೆ ಒಂದು ಸುಸಜ್ಜಿತ ಕನಕ ಭವನ ನಿರ್ಮಾಣ ಮಾಡಲು ಸಹಕಾರ ನೀಡಬೇಕು ಎಂದರು.

       ಪೂರ್ವಭಾವಿ ಸಭೆಯಲ್ಲಿ ತಾಲ್ಲೂಕ್ ಉಪಾದ್ಯಕ್ಷರಾದ ಕುರುಡುಗಾನ ಹಳ್ಳಿ ರಂಗಣ್ಣ, ಪ್ರಧಾನ ಕಾರ್ಯಧರ್ಶಿ ಟಿ,ಜಿ ಲಕ್ಷ್ಮಣ್, ನಿರ್ದೇಶಕರಾದ ರಂಗಧಾಮಯ್ಯ, ರಂಗನಾಥ್, ಸಹಕಾರ್ಯದರ್ಶಿ ಮೈಲಾರಪ್ಪ, ಗ್ರಾ,ಪಂ ಸದಸ್ಯರುಗಳಾದ ಸಿದ್ದಲಿಂಗಪ್ಪ, ವೀರನಾಗಯ್ಯ, ಪ್ರಸನ್ನಕುಮಾರ್, ಮುಖಂಡರಾದ ರಾಮಮೂರ್ತಯ್ಯ, ರಾಮಲಿಂಗಯ್ಯ, ಕೆಂಚಪ್ಪ, ಅಕ್ಕಣ್ಣ, ವೀರಣ್ಣ, ಮಲ್ಲೇಶಪ್ಪ, ಸೇರಿದಂತೆ ಹಲವರು ಉಪಸ್ಥಿತರಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

LEAVE A REPLY

Please enter your comment!
Please enter your name here