ಹಗರಿಬೊಮ್ಮನಹಳ್ಳಿ
ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನಂತೆ ಆದರ್ಶ ಮಹಿಳೆಯಾಗಿ ಅಲ್ಲದಿದ್ದರೂ ಸಮಾಜ ಮೆಚ್ಚುವಂತ ಮಹಿಳೆಯರಾಗಿ ಜೀವನ ನಿರ್ವಹಿಸಿ ಎಂದು ಹಂಪಸಾಗರ ಉಘಾಮಠದ ಶಿವರುದ್ರಮುನಿ ಸ್ವಾಮೀಜಿ ಮಹಿಳೆಯರಿಗೆ ಕರೆ ನೀಡಿದರು.ತಾಲೂಕಿನ ಕನ್ನಿಹಳ್ಳಿ ಗ್ರಾಮದಲ್ಲಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನ ಟ್ರಸ್ಟ್‍ನಿಂದ ಹಮ್ಮಿಕೊಳ್ಳಲಾಗಿದ್ದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನ 592ನೇ ಜಯಂತ್ಯುತ್ಸವ ಹಾಗೂ 15ನೇ ವರ್ಷದ ಸಾಮೂಹಿಕ ವಿವಾಹ ಮಹೋತ್ಸವ ಮತ್ತು 13ನೇ ವರ್ಷದ ಶ್ರೀಮಲ್ಲಿಕಾರ್ಜುನ ಸ್ವಾಮಿಯ ರಥೋತ್ಸವ ಕಾರ್ಯಕ್ರಮದ ಧರ್ಮಸಭೆಯ ಸಾನ್ನೀಧ್ಯವಹಿಸಿ ಅವರು ಮಾತನಾಡಿದರು. ಮದುವೆಯಾಗುವ ದಂಪತಿಗಳು ಹಿರಿಯರಿಗೆ ಗೌರವ ನೀಡಿ, ಮಧು ಸಹನಮೂರ್ತಿಯಾಗಿ ಬಾಳಬೇಕು ಎಂದು ಹಿತವಚನ ಹೇಳಿದರು.
ಜಮಖಂಡಿಯ ಮಾತೆ ಶ್ರೀದೇವಿ ಮಾತನಾಡಿ, ಮದುವೆ ಎನ್ನುವ ಬಗ್ಗೆ ವಿವರಿಸಿದರು. ಜೀವನದಲ್ಲಿ ಟೀಕೆ ಟಿಪ್ಪಣಿಗಳು ಬರುತ್ತವೆ. ಅವುಗಳನ್ನು ಮೆಟ್ಟಿನಿಂತು ಸಂಸಾರವನ್ನು ಸುಗಮವಾಗಿ ತೂಗಿಸಿಕೊಂಡು ಹೋಗುವುದೇ ಸುಖಸಾಗರ ಎಂದರು.
ಇದೇ ವೇದಿಕೆಯಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಗ್ರಾಮದ ವಸಂತ ಕುಮಾರ್ ರೆಡ್ಡಿ ಹಾಗೂ ಸ್ನೇಹಿತರು ಸೇರಿ ಸನ್ಮಾನಿಸಿ ಗೌರವ ಸಲ್ಲಿಸಲಾಯಿತು. ಅಲ್ಲದೆ 40ಜೋಡಿ ವಧುವರರು ಹೊಸಬಾಳಿಗೆ ಪಾದರ್ಪಣೆಮಾಡಿದ ದಂಪತಿಗಳಿಗೆ ಗ್ರಾಮದ ಭಜರಂಗಿ ಯುವ ಸಂಘಟನೆಯಿಂದ ಹಣ್ಣಿನ ಸಸಿಗಳನ್ನು ನೀಡಿ ಇವುಗಳನ್ನು ರಕ್ಷಿಸಿ ಬೆಳೆಸುವಂತೆ ವಿನಂತಿಸಿಕೊಂಡರು.
ನಂದಿಪುರದ ಮಹೇಶ್ವರ ಸ್ವಾಮೀಜಿ, ಹಡಗಲಿ ಗವಿಮಠದ ಡಾ.ಶಾಂತವೀರ ಸ್ವಾಮೀಜಿ, ಹ.ಬೊ.ಹಳ್ಳಿಯ ಹಾಲಸ್ವಾಮಿ ಮಠದ ಹಾಲಶಂಕರ ಸ್ವಾಮೀಜಿ, ಬೆನ್ನಿಹಳ್ಳಿಯ ಪಂಚಾಕ್ಷರಿ ಶಿವಚಾರ್ಯರು ಸಾನ್ನೀಧ್ಯ ವಹಿಸಿದರು.
ಆಮಖಂಡಿಯ ಎಸ್.ಎಸ್.ಹಿರೇಮಠ್ ಗವಾಯಿಗಳು, ಇಟ್ಟಿಗಿಯ ಬಳಿಗಾರ ಸೋಶೇಖರ್, ಟ್ರಸ್ಟ್‍ನ ಅಧ್ಯಕ್ಷ ಕೊಟ್ರೇಶ್, ನಿ.ಶಿಕ್ಷಕ ಶಿವಪ್ಪ, ಹಾಲಪ್ಪ ಕೆಂಚಮ್ಮನಹಳ್ಳಿ, ನಿ.ಪೊಲೀಸ್ ಷಡಕ್ಷರಿ ಪಾಟೀಲ್, ಸೈನಿಕ ಎಸ್.ಪ್ರಭಕರ, ಹೇಮರೆಡ್ಡಿ ಮಲ್ಲಮ್ಮ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ಕೇಶವರೆಡ್ಡಿ, ಮೋಹನ್‍ರೆಡ್ಡಿ, ತಿಗರಿ ಜಾತಪ್ಪ, ರೆಡ್ಡಿಬಸವನಗೌಡ, ಜಿ.ಕೊಟ್ರೇಶ್, ಎಸ್.ವಿ.ಕೊಟ್ರೇಶಪ್ಪ, ಹನುಮಗೌಡ್ರು, ಕೆ.ಟಿ.ಮಹಾಬಲೇಶ್ವರಪ್ಪ, ಬಿ.ಮಲ್ಲಿಕಾರ್ಜುನ, ಅರಸಿಕೆರೆ ಅಜ್ಜಯ್ಯ, ಕೊಚಾಲಿ ಮಂಜುನಾಥ, ಪಿ.ಎಸ್.ಐ ರಾಘವೇಂದ್ರ, ಕಾಡಪ್ಪನವರ ಮೂಗಜ್ಜ, ಶಿವಾನಂದ, ಎಸ್.ಎಂ.ಚಂದ್ರಯ್ಯ, ಪಕ್ಕೀರೆಡ್ಡಿ, ಕನ್ನಿಹಳ್ಳಿ ಚಂದ್ರಶೇಖರ್, ಕಿರಣ್‍ರೆಡ್ಡಿ, ಆರ್.ಲೋಕಪ್ಪ, ಆರ್.ಕೃಷ್ಣಪ್ಪ, ಅಳವುಂಡಿ ವೆಂಕಣ್ಣ, ಬನ್ನಿಗೋಳವೆಂಕಣ್ಣ, ಕಲದಗಿ ಬಸವರಾಜ್, ಆನಂದರೆಡ್ಡಿ ಸೇರಿದಂತೆ ಅನೇಕರು ಇದ್ದರು.
ಪಂಚಾಕ್ಷರಿ ಸಂಗೀತ ಪಾಠಶಾಲೆಯ ವೃಂದದಿಂದ ಪ್ರಾಥಣೆ ಜರುಗಿತು. ಶಿಕ್ಷಕರಾದ ಮಲ್ಲಿಕಾರ್ಜುನ, ಯೋಗೀಶ್, ಗಂಗಾಧರರೆಡ್ಡಿ ಹಾಗೂ ಗ್ರಾಮಲೆಕ್ಕಾಧಿಕಾರಿ ವೆಂಕಾರೆಡ್ಡಿ ಕಾರ್ಯಕ್ರಮ ನಿರ್ವಹಿಸಿದರು.