ರಾಣೆಬೆನ್ನೂರಿನಲ್ಲಿ ‘ಕರ್ನಾಟಕ ಕರಿಯರ್ ಯಾತ್ರ’

ರಾಣೆಬೆನ್ನೂರು

        ಮಂಗಳೂರಿನ ದಿ ಕ್ಯಾಂಪಸ್ ಕರಿಯರ್ ಅಕಾಡೆಮಿಯು ಮಂಗಳೂರಿನ ಕರಾವಳಿ ಕಾಲೇಜುಗಳ ಸಮೂಹದ ಸಹಯೋಗದೊಂದಿಗೆ ರಾಜ್ಯದಾದ್ಯಂತ ಹಮ್ಮಿಕೊಂಡಿರುವ ‘ಕರ್ನಾಟಕ ಕರಿಯರ್ ಯಾತ್ರ’ ಇಂದು (ಜ.4) ಹಾವೇರಿ ಜಿಲ್ಲೆ ತಲಪಿದ್ದು, ಯಾತ್ರದ ಭಾಗವಾಗಿ ರಾಣೆಬೆನ್ನೂರಿನ ಸರಕಾರಿ ಸ್ವತಂತ್ರ ಪ.ಪೂ. ಕಾಲೇಜು ಮತ್ತು ನಾಗಶಾಂತಿ ಉನ್ನತಿ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳಿಗೆ ಕರಿಯರ್ ಗೈಡೆನ್ಸ್ ಶಿಬಿರ ನಡೆಯಿತು. ಎಸ್‍ಎಫ್‍ಐ ರಾಣೆಬೆನ್ನೂರು ಘಟಕ ಶಿಬಿರ ಸಂಘಟಿಸಿತ್ತು.

          ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ, ಮಂಗಳೂರಿನ ಕರಿಯರ್ ಗೈಡೆನ್ಸ್ ಆಂಡ್ ಇನ್ಫೊರ್ಮೇಶನ್ ಸೆಂಟರ್‍ನ ಸ್ಥಾಪಕಾಧ್ಯಕ್ಷ ಮತ್ತು ಕಳೆದ ಹದಿನಾರು ವರ್ಷಗಳಿಂದ ಕರಿಯರ್ ಗೈಡ್/ಕರಿಯರ್ ಕೌನ್ಸಿಲರ್ ಆಗಿ ಸೇವೆ ಸಲ್ಲಿಸುತ್ತಿರುವ ಉಮರ್ ಯು.ಹೆಚ್. ಮಾತನಾಡಿ ವಿದ್ಯಾರ್ಥಿಗಳಿಗೆ ಕಲಿಕಾ ಕೌಶಲ, ಕರಿಯರ್ ಗೈಡೆನ್ಸ್‍ನ ಮಹತ್ವ, ಕರಿಯರ್ ಪ್ಲಾನಿಂಗ್‍ನ ವಿಧಾನ, ಪಿಯುಸಿ ಬಳಿಕ ಕಲಿಕೆಗಿರುವ ಅವಕಾಶಗಳು/ಕೋರ್ಸ್‍ಗಳು ಹಾಗೂ ಸಿಇಟಿ ಮತ್ತು ನೀಟ್ ಪ್ರವೇಶ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಿಗೆ ನಡೆಯಲಿರುವ ಆನ್‍ಲೈನ್ ಕೌನ್ಸಿಲಿಂಗ್‍ನ ವಿಧಾನ/ಹಂತಗಳ ಕುರಿತಂತೆ ಶಿಬಿರದಲ್ಲಿ ಮಾರ್ಗದರ್ಶನ ನೀಡಿದರು.

       ಎಸ್‍ಎಫ್‍ಐ ರಾಣೆಬೆನ್ನೂರು ಘಟಕದ ಸಂಚಾಲಕ ಬಸವರಾಜ್ ಬೋವಿ ಹಾಗೂ ಮುಖಂಡರಾದ ಮೋಹನ್ ಆರ್.ಬಿ., ಲಕ್ಷಣ್ ಎಂ.ಕೆ., ದೀಪಕ್ ಲಮಾಣಿ, ಚೇತನ್ ಲಮಾಣಿ, ಪ್ರಮೋದ್ ಮತ್ತು ಕುಮಾರ್ ಎನ್.ಬಿ. ಮತ್ತಿತರರು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link