ಪಾಕಿಸ್ಥಾನ ಪರ ಘೋಷಣೆ : ಘಟನೆ ಕ್ರಮ ಕೈಗೊಳ್ಳಲು ಮುಂದಾದ ಖಾಖಿ ಪಡೆ

ಬೆಂಗಳೂರು

    ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ಅಮೂಲ್ಯಾ ಹಾಗೂ ಫ್ರೀ ಕಾಶ್ಮೀರ್ ಬಿತ್ತಿಪತ್ರ ಪ್ರದರ್ಶಿಸಿದ ಅರ್ದ್ರಾ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ ಮುಂದೆ ಇಂತಹ ಘಟನೆಗಳು ನಡೆಯದಂತೆ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ.

    ಸಿಎಎ ವಿರೋಧಿ ಪ್ರತಿಭಟನೆಗಳ ವೇಳೆ ಮಾಧ್ಯಮಗಳಲ್ಲಿ ಮಿಂಚುವುದರ ಜತೆಗೆ ಕುಖ್ಯಾತಿ ಗಳಿಸಲು ದೇಶ ವಿರೋಧಿ ಘೋಷಣೆಗಳನ್ನು ಕೂಗುತ್ತಿರುವುದು ಕಂಡು ಬರುತ್ತಿದ್ದು, ಅದರ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗುವುದೆಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ಅಮೂಲ್ಯಾಳಿಗೆ ಕಠಿಣ ಶಿಕ್ಷೆ ವಿಧಿಸಿ ಸಾರ್ವಜನಿಕವಾಗಿ ಜಾಗೃತಿ ಮೂಡಿಸಲು ಮುಂದಾಗಿರುವ ಪೊಲೀಸರು, ಸಿಎಎ ಪರ ಹಾಗೂ ವಿರೋಧಿ ಪ್ರತಿಭಟನೆಗಳ ವೇಳೆ ಹದ್ದಿನ ಕಣ್ಣಿಟ್ಟು ಯಾವುದೇ ದೇಶ ವಿರೋಧಿ ಕೃತ್ಯಗಳು ನಡೆಯದಂತೆ ಎಚ್ಚರಿಕೆ ವಹಿಸಲಿದ್ದಾರೆ.

ಪ್ರತಿಭಟನೆ ಹುಚ್ಚು

    ಪುರಭವನದ ಬಳಿ ಶುಕ್ರವಾರ ಫ್ರೀ ಕಾಶ್ಮೀರ್ ಬಿತ್ತಿ ಪ್ರದರ್ಶಿಸಿದ ಅರ್ದ್ರಾ ಸಿಎಎ ಪ್ರತಿಭಟನೆಗಳಿಂದ ಪ್ರಚೋದನೆಗೊಳಗಾಗಿ ಸಿಎಎ ವಿರೋಧಿ ನಡೆದ 10ಕ್ಕೂ ಹೆಚ್ಚು ಪ್ರತಿಭಟನೆಗಳಲ್ಲಿ ಪಾಲ್ಗೊಂಡಿದ್ದೆ.ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದ ಅಮೂಲ್ಯಾಳಿಗೆ ಪರಿಚಿತಳಾಗಿದ್ದೆ ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ.

    ಸಿಎಎ,ಎನ್‌ಆರ್‌ಸಿ ಸಂವಿಧಾನದ 370ನೇ ವಿಧಿ ವಿರೋಧಿ ಪ್ರತಿಭಟನೆಗಳು ನಡೆಯುತ್ತಿದ್ದ ಸ್ಥಳಗಳಿಗೆ ಹೋಗಿ ಬಿತ್ತಿಪತ್ರಗಳನ್ನು ಪ್ರದರ್ಶಿಸಿ ಭಾಗಿಯಾಗುತ್ತಿದ್ದೆ. ಅಲ್ಲದೇ ತಥಿಯ ಲಿಂಗಿಗಳು ನಡೆಸುವ ಪ್ರತಿಭಟನೆಗಳಲ್ಲೂ ಪಾಲ್ಗೊಳ್ಳುತ್ತಿದ್ದೆ ಶುಕ್ರವಾರ ಕೂಡ ಸಿಎಎ ವಿರೋಧಿ ಪ್ರತಿಭಟನೆ ನಡೆಯುತ್ತಿದೆ ಎಂಬುದಾಗಿ ತಿಳಿದು ಅಲ್ಲಿಗೆ ಬಿತ್ತಿಪತ್ರ ಹಿಡಿದುಕೊಂಡು ಬಂದಿದ್ದೆ. ಆದರೆ,ಅಲ್ಲಿ ಅಮೂಲ್ಯಾ ಮಾಡಿದ ಘೋಷಣೆ ವಿರುದ್ಧ ಪ್ರತಿಭಟನೆ ನಡೆಯುತ್ತಿತ್ತು ಎಂದು ತಿಳಿಸಿದ್ದಾಳೆ.

   ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳುವ ವೇಳೆ ಅಮೂಲ್ಯಾ ನನಗೆ ಪರಿಚಿತಳಾಗಿದ್ದಳು. ಅದಕ್ಕೂ ಮುಂಚೆ ಆಕೆಯ ಜತೆ ನನಗೆ ಸ್ನೇಹವಾಗಲಿ, ಸಂಬಂಧವಾಗಲಿ ಇರಲಿಲ್ಲ. ಸಿಎಎ ವಿರೋಧಿ ಪ್ರತಿಭಟನಾಕಾರರ ಫ್ರೀ ಕಾಶ್ಮೀರ್, ಫ್ರೀ ಮುಸ್ಲಿಂ, ಫ್ರೀ ದಲಿತ್ ಘೋಷಣೆಗಳು ನನಗೆ ಪ್ರಚೋದನೆ ನೀಡಿದ್ದವು ಎಂದು ಆರ್ದ್ರಾ ಹೇಳಿಕೆ ನೀಡಿದ್ದಾಳೆ.

ಪಿಜಿಯಲ್ಲಿ ಬೋರ್ಡ್

    ಅಮೂಲ್ಯಾ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ನಾನು ಪಾಲ್ಗೊಂಡಿದ್ದೆ. ಅಮೂಲ್ಯಾ ಬಂಧನದ ರಾತ್ರಿಯೇ ಪಿಜಿಯಲ್ಲಿ ಕುಳಿತು ಫ್ರೀ ಕಾಶ್ಮೀರ್, ಫ್ರೀ ದಲಿತಿ, ಫ್ರೀ ಮುಸ್ಲಿಂ ಎನ್ನುವ ಕನ್ನಡ ಹಾಗೂ ಇಂಗ್ಲಿಷ್ ಬರಹಗಳನ್ನು ಬಣ್ಣ ತೆಗೆದುಕೊಂಡು ಬಂದಿದ್ದ ರಟ್ಟಿನ ಬಾಕ್ಸ್‌ನ್ನು ಬೋರ್ಡಿನಂತೆ ಮಾಡಿ ಬರೆದಿಟ್ಟುಕೊಂಡಿದ್ದೆ ಎಂದು ತಿಳಿಸಿದ್ದಾಳೆ.

    ಅಮೂಲ್ಯಾ ಪ್ರತಿಭಟನೆಗೆ ಹಿನ್ನಡೆಯಾಗುವಂತೆ ಬಿತ್ತಿಪತ್ರ ಪ್ರದರ್ಶಿಸಿದ್ದೆ ಎನ್ನುವುದು ಸರಿಯಲ್ಲ, ನಾನು ಅಲ್ಲಿ ಸಿಎಎ ವಿರೋಧಿ ಪ್ರತಿಭಟನೆ ನಡೆಯುತ್ತಿರುವ ಕಾರಣಕ್ಕೆ ಬಿತ್ತಿಪತ್ರ ಪ್ರದರ್ಶಿಸಿದ್ದು, ಪ್ರತಿಭಟನೆಯ ಗಂಭೀರತೆ ಅರ್ಥವಾಗಿರಲಿಲ್ಲ ಎಂದು ತಿಳಿಸಿದ್ದಾಳೆ.

ಪುರುಷ ವರ್ತನೆ

    ಅರ್ದ್ರಾ ಅವರ ಕುಟುಂಬ ಮಲ್ಲೇಶ್ವರಂನಲ್ಲಿ ನೆಲೆಸಿದ್ದು, ಅವರೆಲ್ಲರೂ ಸುಶಿಕ್ಷಿತ ಕುಟುಂಬದವರಾಗಿದ್ದಾರೆ. ಅಜ್ಜ ಎಸ್‌ಬಿಐನಲ್ಲಿ ಎಜಿಎಂ ಆಗಿ ನಿವೃತ್ತರಾಗಿದ್ದರೆ, ಅಜ್ಜಿ ಕೂಡ ಅಧಿಕಾರಿಯಾಗಿದ್ದವರು. ತಂದೆ ಟಿಸಿಹೆಚ್‌ನಲ್ಲಿ ಕೆಲಸ ಮಾಡಿದ್ದರೆ, ತಾಯಿ ಬ್ಯೂಟಿಷನ್ ಆಗಿದ್ದು ಅವರಿಗೆ ಅರ್ದ್ರಾ ಒಬ್ಬಳೇ ಮಗಳಾಗಿದ್ದಾಳೆ.

   ಮೂನಾಲ್ಕು ವರ್ಷಗಳಿಂದ ಅರ್ದ್ರಾ ವರ್ತನೆಯಲ್ಲಿ ಬದಲಾವಣೆ ಕಂಡು ಬಂದಿದ್ದು, ಆಕೆ ಮಹಿಳೆಯಾಗಿದ್ದರೂ ಪುರುಷರ ನಡವಳಿಕೆ ಹೊಂದಿದ್ದಳು. ದೈಹಿಕವಾಗಿಯೂ ಪುರುಷರಂತೆಯೇ ವರ್ತಿಸುತ್ತಿದ್ದು, ಇದರಿಂದಾಗಿ ಕುಟುಂಬದವರಲ್ಲಿ ಆಕೆಯ ಬಗ್ಗೆ ಅಸಹನೆ ಇತ್ತು. ಇದರಿಂದಾಗಿ ಅರ್ದ್ರಾ ಮನೆಗೆ ಬರುವುದನ್ನು ಕಡಿಮೆ ಮಾಡಿ ಪಿಜಿಯಲ್ಲಿ ವಾಸಿಸುತ್ತಿದ್ದಳು.

   ಅರ್ದ್ರಾ ಬಿತ್ತಿಪತ್ರ ಪ್ರದರ್ಶಿಸಿ ನಡೆಸಿದ ದೇಶ ವಿರೋಧಿ ಕೃತ್ಯಗಳ ಬಗ್ಗೆ ಅಗತ್ಯ ಕಾನೂನು ಕ್ರಮಕೈಗೊಳ್ಳಲು ಪೋಷಕರು ಒತ್ತಾಯಿಸಿದ್ದಾರೆ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಅವರ ಮನೆಯ ಸುತ್ತ ಬಿಗಿಭದ್ರತೆ ಒದಗಿಸಲಾಗಿದೆ.

ಎಸ್‌ಐಟಿ ರಚನೆ

    ಈ ನಡುವೆ ದೇಶ ವಿರೋಧಿ ಘೋಷಣೆ ಕೂಗಿದ ಅಮೂಲ್ಯಾ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡ(ಎಸ್‌ಐಟಿ)ವನ್ನು ರಚಿಸಲಾಗಿದ್ದು, ಚಿಕ್ಕಪೇಟೆ ಎಸಿಪಿ ಮಾಂತಾ ರೆಡ್ಡಿ, ಉಪ್ಪಾರಪೇಟೆ ಇನ್ಸ್ ಪೆಕ್ಟರ್ ಸುರೇಶ್ ಹಾಗೂ ಮಾರುಕಟ್ಟೆ ಠಾಣೆಯ ಇನ್ಸ್ ಪೆಕ್ಟರ್ ಸತೀಶ್ ನೇತೃತ್ವದ ತಂಡ ಅಮೂಲ್ಯಾಳ ಪೂರ್ವಾಪರ ಹಾಗೂ ಮಾನಸಿಕ ಸ್ಥಿತಿಗತಿಯ ಬಗ್ಗೆ ತನಿಖೆ ನಡೆಸಲಿದೆ.

    ಅಮೂಲ್ಯಾ ವಿಚಾರಣೆ ವೇಳೆ ನೀಡುತ್ತಿರುವ ಹೇಳಿಕೆಗಳು ಅಸ್ಪಷ್ಟವಾಗಿವೆ. ಆಕೆ ಫೇಸ್‌ಬುಕ್ ಬರಹದಲ್ಲಿ ಪಾಕಿಸ್ತಾನ್ ಜತೆಗೆ ಬಾಂಗ್ಲಾ, ನೇಪಾಳ, ಚೈನಾ ಇನ್ನಿತರ ದೇಶಗಳಿಗೂ ಜಿಂದಾಬಾದ್ ಎಂದು ಹಾಕಿದ್ದಾಳೆ. ಆಕೆಯ ನಡವಳಿಕೆ ಅನುಮಾನಗಳಿಂದ ಕೂಡಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.

ಹುಟ್ಟೂರಿಗೆ ತಂಡ

   ಈ ನಡುವೆ ಜೈಲು ಪಾಲಾಗಿರುವ ಅಮೂಲ್ಯಾ ಲಿಯೋನಾ ಹುಟ್ಟೂರು ಕೊಪ್ಪಗೆ ವಿಶೇಷ ತನಿಖಾ ತಂಡ(ಎಸ್‌ಐಟಿ) ಳ ತೆರಳಿ ತನಿಖೆ ನಡೆಸಲಿದೆ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚನೆ ಮಾಡಲಾಗಿದೆ. ಚಿಕ್ಕಪೇಟೆ ಎಸಿಪಿ ಮಾಂತಾ ರೆಡ್ಡಿ, ಉಪ್ಪಾರಪೇಟೆ ಇನ್ಸ್ ಪೆಕ್ಟರ್ ಸುರೇಶ್ ಹಾಗೂ ಮಾರುಕಟ್ಟೆ ಠಾಣೆಯ ಇನ್ಸ್ ಪೆಕ್ಟರ್ ಸತೀಶ್ ನೇತೃತ್ವದ ತಂಡದಿಂದ ಪ್ರಕರಣದ ತನಿಖೆ ಮಾಡಲಾಗುತ್ತಿದೆ. ಸದ್ಯ ಆರೋಪಿ ಅಮೂಲ್ಯಳ ನಿಕಟ ಸಂಪರ್ಕದಲ್ಲಿರುವ ಸ್ನೇಹಿತರ ವಿಚಾರಣೆ ಮಾಡಲಾಗುತ್ತಿದೆ. ಸ್ನೇಹಿತರ ವಿಚಾರಣೆ ಮಾಹಿತಿ ಕಲೆ ಹಾಕಿದ ಮೇಲೆ ಆರೋಪಿ ಅಮೂಲ್ಯಾಳ ಹುಟ್ಟೂರಿಗೆ ತೆರಳಲು ಸಜ್ಜಾಗಿದೆ.

   ಆರೋಪಿ ಬಂಧನವಾದ ಬಳಿಕ ಪೊಲೀಸರ ಮುಂದೆ ಹಲವು ವಿಚಾರಗಳ ಕುರಿತು ಮಾಹಿತಿ ನೀಡಿದ್ದು, ಸಿಎಎ ವಿರುದ್ಧ ಕಾರ್ಯಕ್ರಮದಲ್ಲಿ ಮಾತನಾಡಲು ಹೇಳಿಕೊಡಲು ಗಾಡ್ ಫಾದರ್ ಗಳು ಇದ್ದಾರೆ ಎಂದು ಹೇಳಿಕೊಂಡಿದ್ದಾಳೆ. ಆರೋಪಿಯ ಹಿಂದೆ ಕೆಲಸ ಮಾಡುತ್ತಿರುವವರು ಯಾರು ಎನ್ನುವುದನ್ನು ತಿಳಿದುಕೊಳ್ಳಲು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

   ವಿಡಿಯೋದಲ್ಲಿ ಮಾತನಾಡಿದ್ದ ಅಮೂಲ್ಯ, ನನ್ನ ಭಾಷಣದ ಹಿಂದೆ ಹಲವು ಮಂದಿ ಕೆಲಸ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ನನ್ನ ಬೆನ್ನ ಹಿಂದಿದ್ದಾರೆ. ಅವರೆಲ್ಲ ನಿಜವಾದ ಹೀರೋಗಳು. ಅವರ ಪ್ರತಿನಿಧಿಯಾಗಿ ನಾನು ಮಾತನಾಡುತ್ತಿದ್ದೇನೆ ಎಂದು ಹೇಳಿಕೆ ನೀಡಿದ್ದಳು.ಆರೋಪಿ ಅಮೂಲ್ಯ ಬಂಧನವಾದ ಬಳಿಕ ಅವರ ತಂದೆ ಪ್ರತಿಕ್ರಿಯಿಸಿ, ನನ್ನ ಮಗಳು ಕೆಲ ಮುಸ್ಲಿಮರೊಂದಿಗೆ ನಂಟು ಹೊಂದಿದ್ದಳು ಎಂದು ಹೇಳಿಕೆ ನೀಡಿದ್ದರು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ತನಿಖಾ ತಂಡ, ಕೊಪ್ಪಕ್ಕೆ ಹೋಗಿ ತಂದೆ ತಾಯಿಯನ್ನು ವಿಚಾರಣೆ ನಡೆಸಿ, ಕೆಲ ವಿಚಾರಗಳ ಬಗ್ಗೆ ಸ್ಪಷ್ಟನೆ ಪಡೆದುಕೊಳ್ಳಲಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link