ಬೆಂಗಳೂರು :
ಅಲ್ ಹಿಂದ್ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದ ಐಸಿಸ್ ಉಗ್ರನನ್ನು ಎನ್ಐಎ ಅಧಿಕಾರಿಗಳು ಸಿನಿಮೀಯ ರೀತಿಯಲ್ಲಿ ಬಂಧಿಸಿದ್ದಾರೆ.
ಬಂಧಿತ ಉಗ್ರನನ್ನು ಫಜೀ ಉರ್ ರೆಹಮಾನ್ ಎಂಬುದಾಗಿ ಗುರುತಿಸಲಾಗಿದ್ದು, ಮೆಹಬೂಬ್ ಪಾಷಾ ಮತ್ತು ಖ್ವಾಜಿ ಟೀಂ ಜೊತೆಗೆ ಗುರುತಿಸಿಕೊಂಡು ಅಲ್ ಹಿಂದ್ ಸಂಘಟನೆಯಲ್ಲಿ ಸಕ್ರೀಯನಾಗಿದ್ದ ಈತನನ್ನು ಡಿಜಿ ಹಳ್ಳಿ ವ್ಯಾಪ್ತಿಯ ಟ್ಯಾನಿಟರಿ ರಸ್ತೆಯಲ್ಲಿ ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ.
ಉಗ್ರರ ಸುಳಿವನ್ನು ಆಧರಿಸಿ ಕಳೆದ 2 ದಿನಗಳಿಂದ 19 ಕಡೆಯಲ್ಲಿ ದೇಶದ ವಿವಿಧೆಡೆ ದಾಳಿ ನಡೆಸಿದ್ದ ಎನ್ ಐ ಎ ಅಧಿಕಾರಿಗಳು ಇಂದೂ ಕೂಡ ದಾಳಿಯನ್ನು ಮುಂದುವರೆಸಿದ್ದರು ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
