ವೀರರಾಣಿ ಚಿತ್ತೂರು ಚನ್ನಮ್ಮ 195ನೇ ವಿಜಯೋತ್ಸವ

ಹಗರಿಬೊಮ್ಮನಹಳ್ಳಿ:

        ಸಮಾಜದಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮನ ಸಮುದಾಯ ಬಹುದೊಡ್ಡದು. ಆದರೆ, ಸಂಘಟನೆಯಲ್ಲಿ ಸ್ವಾಭಿಮಾನ ಅಡ್ಡಗೋಡೆಯಾಗಿ ನಿಲ್ಲುತ್ತದೆ. ಸ್ವಾಭಿಮಾನ ಬಿಟ್ಟು ಸಮುದಾಯದ ಸಂಘಟನೆಗೆ ಮುಂದಾಗಿ ಎಂದು ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಶಾಲಾ ಕಾರ್ಯದರ್ಶಿ ಎಸ್.ಬಸವನಗೌಡ್ರು ಕರೆ ನೀಡಿದರು.

       ಅವರು ಪಟ್ಟಣದ ಹರ ದೇಗುಲದ ಆವರಣದಲ್ಲಿರುವ ಪಂಚಮಸಾಲಿ ಸಮುದಾಯ ಭವನದಲ್ಲಿ ಮಂಗಳವಾರ ಸಮುದಾಯದ ತಾಲೂಕು ಘಟಕದಿಂದ ಹಮ್ಮಿಕೊಳ್ಳಲಾಗಿದ್ದ ವೀರರಾಣಿ ಕಿತ್ತೂರು ಚನ್ನಮ್ಮ 195ನೇ ವಿಜಯೋತ್ಸವದ ಸರಳ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಚನ್ನಮ್ಮ ಚಿಕ್ಕಂದಿನಿಂದಲೂ ಒಂದು ಪೌರುಷದ ಶಕ್ತಿಯಾಗಿ ಬೆಳೆಯುತ್ತಾಳೆ, ಬೆಳೆಯುತ್ತ ಕಿತ್ತೂರು ಆಡಳಿತವನ್ನು ವಹಿಸಿಕೊಂಡು ಉತ್ತಮ ಆಡಳಿತ ನೀಡುತ್ತಾಳೆ. ಆ ಸಮಯದಲ್ಲಿ ಬ್ರೀಟಿಷರ ದಬ್ಬಾಳಿಕೆ, ದಾಳಿ, ಅವರ ಮೋಸವಂಚನೆಗೆ ಬೇಸತ್ತ ಚನ್ನಮಾಜಿ ಕಿತ್ತೂರಿನ ಸ್ವಾಭಿಮಾನಕ್ಕೆ ದಕ್ಕೆ ಬಂದಾಗ ಬ್ರೀಟಿಷರ ವಿರುದ್ಧ ಸಿಡಿದೇಳುತ್ತ ಹೋರಾಡುತ್ತಾಳೆ. ಹೋರಾಟದ ಫಲವೇ ಕಿತ್ತೂರು ಸ್ವಾತಂತ್ರವಾಗುತ್ತದೆ. ಅಂತಹ ದಿಟ್ಟ, ಧೀರ ಮಹಿಳೆಯ ಸಮುದಾಯದವರಾದ ನಾವುಗಳು ಸಂಘಟನೆಯ ವಿಷಯದಲ್ಲಿ ಹಿಂದೆ ಬೀಳುವುದು ಬೇಡ. ಯುವಕರು ಸಂಘಟನೆಯೊಂದಿಗೆ ಸಮಾಜ ಸೇವೆ ಮಾಡಿ ಎಂದು ಕರೆ ನೀಡಿದರು.

      ಸಮುದಾಯದ ತಾಲೂಕು ಅಧ್ಯಕ್ಷ ಅಕ್ಕಿ ಶಿವಣ್ಣ ಮಾತನಾಡಿ, ಸಮುದಾಯದ ತಾಯಂದಿರೆಲ್ಲ ಚನ್ನಮಾಜಿಯಾಗುವುದು ಬೇಡ, ಕೊನೇ ಪಕ್ಷ ನಿಮ್ಮ ಮಕ್ಕಳನ್ನು ನೀವು ಚನ್ನಮಾಜಿಯವರ ಆದರ್ಶ, ಶೌರ್ಯ, ಶಕ್ತಿಗಳನ್ನು ತುಂಬುವ ಮೂಲಕ ಬೆಳಸಿ ಸಮಾಜ ಮುಖಿಯರನ್ನಾಗುವಂತೆ ಬೆಳಸಿ ಎಂದು ಕರೆ ನೀಡಿದರು.

      ಸಮುದಾಯದ ಗೌರವ ಅಧ್ಯಕ್ಷ ಬಾವಿ ಬೆಟ್ಟಪ್ಪ ಮಾತನಾಡಿ, ತಾಲೂಕಿನಲ್ಲಿ ಸಂಘಟನೆ ಬೆಳೆದುಬಂದ ವಿಷಯವನ್ನು ಪ್ರಸ್ತಾಪಿಸಿದರು.
ಪಂಚಮಸಾಲಿ ಬ್ಯಾಂಕ್‍ನ ಅಧ್ಯಕ್ಷರಾದ ಕೆ.ರೇವಣ್ಣ, ನಿರ್ದೇಶಕರಾದ ಬ್ಯಾಡ್ಗಿ ರಾಜೇಶ್, ಶಿವಶಂಕರಗೌಡ್ರು, ವೀರಬಸವನಗೌಡ, ಮುಖಂಡರಾದ ವೀರಭದ್ರಗೌಡ್ರು, ಸಂಚಿ ಬಸವರಾಜ್, ವಟಮ್ಮನಹಳ್ಳಿ ಕೊಟ್ರೇಶ, ಪಂಪಣ್ಣ, ಅಮೃತ್ ಪ್ರಿಂಟರ್ ಮಂಜುನಾಥ, ಗುರುಬಸವರಾಜ್, ಪೋಟೊ ವೀರೇಶ್, ಚಿಂತ್ರಪಳ್ಳಿ ಗುರುರಾಜ್, ಕೆ.ನಾಗಭೂಷಣ್, ತಂಬ್ರಹಳ್ಳಿ ಬಸವರಾಜ್, ಶಿಕ್ಷಕರಾದ ರವೀಂದ್ರ, ಎಂ.ಚನ್ನಬಸವರಾಜ, ಮಹಿಳಾ ಸಂಘದ ಜಿಲ್ಲಾ ಸದಸ್ಯರು ಮಂಗಳಮ್ಮ, ಅಧ್ಯಕ್ಷರು ಚನ್ನವೀರಮ್ಮ, ನಗರ ಘಟಕದ ಅಧ್ಯಕ್ಷರಾದ ನಿರ್ಮಲ ಬಣಕಾರ್, ದೇವಿರಮ್ಮ, ನಿರ್ಮಲ ಮೆಣಸಿಗಿ, ಬಾವಿ ಸುಜಾತ, ವಾಣಿಶ್ರೀ ಗೌಡ್, ಸೌಮ್ಯ ಅಯ್ಯನಗೌಡ್ರು ಮತ್ತಿತರರು ಇದ್ದರು.
ಸಮುದಾಯದ ತಾಲೂಕು ಕಾರ್ಯದರ್ಶಿ ಜೆ.ಬಿ.ಶರಣಪ್ಪ ಕಾರ್ಯಕ್ರಮ ನಿರ್ವಹಿಸದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap