ಕುಡಿತಿನಿ ಕೈಗಾರಿಕಾ ಪ್ರದೇಶಕ್ಕೆ ಸಚಿವ ಜಾರ್ಜ್ ಭೇಟಿ.!!

ಬಳ್ಳಾರಿ

      ಮದ್ಯಮ ಮತ್ತು ಬೃಹತ್ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್ ಅವರು ಕುಡಿತಿನಿ ಕೈಗಾರಿಕಾ ಪ್ರದೇಶಕ್ಕೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

     ಕುಡಿತಿನಿ ಕೈಗಾರಿಕಾ ಪ್ರದೇಶದಲ್ಲಿ 645 ಎಕರೆ ಪ್ರದೇಶದಲ್ಲಿ ಮೊದಲ ಹಂತದ ಕಾಮಗಾರಿ ಮುಕ್ತಾಯವಾಗಿದ್ದು, ಎರಡನೇ ಹಂತದಲ್ಲಿ 538 ಎಕರೆ ಪ್ರದೇಶದಲ್ಲಿ ಕಾಮಗಾರಿ ಆರಂಭವಾಗಿದ್ದು, ಅದನ್ನು ಸಹ ಸಚಿವರು ಪರಿಶೀಲಿಸಿದರು. ಇವರಿಗೆ ಕೆಐಎಡಿಬಿ ಸಿಇಒ ಉಮಾಶಂಕರ್ , ಚೀಫ್ ಎಂಜನಿಯರ್ ಸ್ವಾಮಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಇರ್ಫಾನ್ ಮತ್ತಿತರರು ಸಚಿವರಿಗೆ ಸಾಥ್ ನೀಡಿದರು. ಕುಡಿತಿನಿ ಕೈಗಾರಿಕಾ ಪ್ರದೇಶದಲ್ಲಿ ಕೈಗೊಳ್ಳಲಾಗುತ್ತಿರುವ ಕಾರ್ಯಚಟುವಟಿಕೆಗಳನ್ನು ವಿವರಿಸಿದರು.

     ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೆ.ಜೆ.ಜಾರ್ಜ್ ಅವರು ಮೊದಲ ಹಂತದ 645 ಎಕರೆ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕಾ ಸ್ಥಾಪಿಸಿಕೊಳ್ಳಲು 300 ಅರ್ಜಿಗಳು ಬಂದಿದ್ದು,ಹಂಚಿಕೆ ಮಾಡುವುದಕ್ಕೆ ಸಂಬಂಧಿಸಿದಂತೆ ಪರಿಸರ ಇಲಾಖೆಯ ಅನುಮತಿ ಪೆಂಡಿಂಗ್ ಇದೆ ಅದರ ಅನುಮತಿ ದೊರಕಿದ ತಕ್ಷಣ ಹಂಚಿಕೆ ಮಾಡಲಾಗುವುದು ಎಂದರು.

      ಕೆಐಎಡಿಬಿ ಭೂಸ್ವಾಧೀನ ವಶಪಡಿಸಿಕೊಂಡು ಈ ಎಲ್ಲ ಪ್ರಕ್ರಿಯೆಗಳು ಸ್ಟಾರ್ಟ್ ಮಾಡುವಾಗ ಕೆಲ ಸಮಸ್ಯೆಗಳು ಬರುವುದು ಸಹಜ. ಅವುಗಳನ್ನು ನಿವಾರಿಸಲಾಗುವುದು ಎಂದರು.

    ಕೈಗಾರಿಕೆಗಳು ರಾಜ್ಯದಲ್ಲಿ ಸ್ಥಾಪಿಸಬೇಕು ಎಂದು ಕೋರಿ ಅನೇಕ ರಾಜ್ಯಗಳು ರತ್ನಗಂಬಳಿ ಹಾಕಿ ಸ್ವಾಗತ ಕೋರುತ್ತಿವೆ. ಅಂತರದಲ್ಲಿ ಕೈಗಾರಿಕೆಗಳು ನಮ್ಮ ರಾಜ್ಯಕ್ಕೆ ಬರುವ ಸಂದರ್ಭದಲ್ಲಿ ಸಮಸ್ಯೆ ಮಾಡುವುದು ಸರಿಯಲ್ಲ ಎಂಬುದನ್ನು ತಮ್ಮ ಮಾತುಗಳಲ್ಲಿ ಸ್ಪಷ್ಟಪಡಿಸಿದ ಸಚಿವ ಜಾರ್ಜ್ ಅವರು, ಕೈಗಾರಿಕೆಗಳ ಸ್ಥಾಪನೆಗೆ ಭೂಮಿ ಹಂಚಿಕೆ ಮಾಡಿದ ನಂತರ ಕೈಗಾರಿಕೆ ಸ್ಥಾಪಿಸಲು ಸ್ವಲ್ಪ ಸಮಸ್ಯೆ ಇದೆ ಅಂದಾಗ ಮತ್ತಷ್ಟು ಅವಧಿ ನೀಡುತ್ತೇವೆ. ಅದರೂ ಕೈಗಾರಿಕೆ ಸ್ಥಾಪಿಸದಿದ್ದರೇ ಹಾಗೂ ಕೈಗಾರಿಕೆಗಾಗಿ ಭೂಮಿ ತೆಗೆದುಕೊಂಡು ರಿಯಲ್ ಎಸ್ಟೇಟ್ ಮಾಡುತ್ತಿರುವುದು ಗಮನಕ್ಕೆ ಬಂದಿದ್ದು ಇಂತವುಗಳನ್ನು ಸಹ ಮುಖ್ಯಮಂತ್ರಿಗಳ ನೇತೃತ್ವದ ಹೈ ಪವರ್ ಕಮಿಟಿ ನಿರ್ಧಾರ ಕೈಗೊಳ್ಳಲಿದೆ ಎಂದರು.

     ಜಿಂದಾಲ್ ಗೆ ಭೂಹಂಚಿಕೆ ಕ್ಯಾಬಿನೆಟ್ ನಿರ್ಧಾರಕ್ಕೆ ಬದ್ಧ: ಜಿಂದಾಲ್ ಗೆ ಭೂಮಿ ಹಂಚಿಕೆ ಮಾಡುವುದಕ್ಕೆ ಸಂಬಂಧಿಸಿದಂತೆ ಕ್ಯಾಬಿನೆಟ್ ಉಪಸಮಿತಿ ರಚಿಸಲಾಗಿದ್ದು, ಅದರ ವರದಿ ಕ್ಯಾಬಿನೆಟ್ ಮುಂದೆ ಬರಲಿದ್ದು, ಕ್ಯಾಬಿನೆಟ್ ತೀರ್ಮಾನಕ್ಕೆ ನಾನು ಬದ್ಧ ಎಂದರು.ಇದೇ ಸಂದರ್ಭದಲ್ಲಿ ಭೂಮಿ ಕಳೆದುಕೊಂಡ ಅನೇಕ ರೈತರು ಸಚಿವರಿಗೆ ಮನವಿ ಸಲ್ಲಿಸಿದರು.ಇದಕ್ಕೂ ಮುಂಚೆ ಅವರು ಮಿನೇರಾ ಸ್ಟೀಲ್ ಕಂಪನಿಗೆ ಹಾಗೂ ನಂತರ ಹಲಕುಂದಿ ಬಳಿಯ ಜಯರಾಜ್ ಇಸ್ಪಾತ್ ಕಂಪನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link