ಕೋಮು ಸೌಹಾರ್ದತೆಯಿಲ್ಲದೆ ದೇಶದ ಪ್ರಗತಿ ಅಸಾಧ್ಯ

ಗುಬ್ಬಿ:

        ಇತ್ತೀಚಿನ ದಿನಗಳಲ್ಲಿ ರಾಜಕೀಯವಾಗಿ ಮತ್ತು ಸಾಂಸ್ಕೃತಿಕವಾಗಿ ಬಹುತ್ವ ಮತ್ತು ಕೋಮು ಸೌಹಾರ್ದತೆಯ ಬಗೆಗೆ ಅತಿ ಹೆಚ್ಚಿನ ಚರ್ಚೆಗಳು ನಡೆಯುತ್ತಿವೆ. ದೇಶದಆಭಿವೃದ್ಧಿಯಕುರಿತು ಮಾತನಾಡುತ್ತಿರುವ ಪ್ರಭುತ್ವಕೋಮುಸೌಹಾರ್ದತೆಯ ಬಗ್ಗೆ ಮಾತನಾಡುವುದಿಲ್ಲ ಆದರೆ ಸೌಹಾರ್ದತೆಯಿಲ್ಲದೆ ದೇಶದ ಪ್ರಗತಿ ಅಸಾಧ್ಯವಾಗುತ್ತದೆ.ಎಂದು ಹಂಪಿ ವಿಶ್ವವಿದ್ಯಾನಿಲಯದ ಸಂಶೋಧನಾರ್ತಿ ಮರಿಯಾಂಬಿ ಹೇಳಿದರು.

      ಪಟ್ಟಣದ ಸ್ನೇಹ ಕೋಚಿಂಗ್‍ ಕೇಂದ್ರದಲ್ಲಿ ನೆಹರು ಯುವ ಕೇಂದ್ರವು ಏರ್ಪಡಿಸಿದ್ದ ಕೋಮು ಏಕತಾ ಸಪ್ತಾಹ ಆಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ದೇಶದಲ್ಲಿ ನೆಮ್ಮದಿ ನೆಲೆಸಲು ಮನುಷ್ಯರಲ್ಲಿರುವ ಜಾತಿ ಧರ್ಮ ಲಿಂಗ ಅಂತಸ್ಥು ಬಣ್ಣ ಎಂಬ ಅಂತರಗಳು ಕಡಿಮೆಯಾಗಿ ಎಲ್ಲರೂ ಸಮಾನರು ಎಂಬ ವಾತಾವರಣವೊಂದು ಏರ್ಪಟ್ಟರೆ ಜಗವೇ ಶಾಂತಿಯ ತಾಣವಾಗುತ್ತದೆ ಎಂದರು.

      ನೆಹರೂ ಯುವ ಕೇಂದ್ರದ ಯುವದಳ ಕಾರ್ಯಕರ್ತೆ ಶೈಲಜ ಮಾತನಾಡಿ ಬಹುತ್ವದ ಮತ್ತು ಸಾಮರಸ್ಯದ ಬಗ್ಗೆ ಕಾರ್ಯಕ್ರಮಗಳ ಮೂಲಕ ಜಾಗೃತಿ ಉಂಟುಮಾಡಿಸಬೇಕಾದ ಸಂದರ್ಭ ಬಂದಿರುವುದು ವಿಶಾದಕರ ಸಂಗತಿಯೆಂದು ನೆಹರು ಯುವ ಕೇಂದ್ರವು ಹಮ್ಮಿಕೊಂಡಿರುವಆರು ಅಂಶಗಳ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು .ಸ್ನೇಹ ಕೋಚಿಂಗ್‍ ಕೇಂದ್ರದ ಅಧ್ಯಕ್ಷರಾದ ಅಪ್ಸರ್ ಮಾತನಾಡಿ ರಾಜಕೀಯದ ಆಟಗಳಿಗೆ ಜನರಧರ್ಮ ಜಾತಿಗಳನ್ನು ಬಳಸಲಾಗುತ್ತಿದ್ದು ಯುವಜನತೆ ಪ್ರಭುತ್ವದ ನಡೆಗಳನ್ನು ಬಹು ಗಂಭೀರವಾಗಿ ಅರಿಯಬೇಕು ಎಂದರು.

      ನೆಹರು ಯುವ ಕೇಂದ್ರದ ಕಲ್ಲೂರು ಗೋವಿಂದರಾಜು ಕೋಮು ಏಕತಾ ಪ್ರತಿಜ್ಞಾವಿಧಿ ಬೋಧಿಸಿದರು. ವೀರಕೇಸರಿ ಯುವಕ ಸಂಘದ ರಂಜಿತ್, ಸುಧಾಕರ್, ಯತೀಶ್‍ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link