ಹರಿಹರ:
ಭದ್ರಾ ಅಚ್ಚುಕಟ್ಟು ಪ್ರದೇಶದ ಕೊನೆ ಭಾಗದ ಗ್ರಾಮಗಳಿಗೆ ಭತ್ತಕ್ಕೆ ಸಮರ್ಪಕ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕೆಂದು ಶಾಸಕ ಎಸ್.ರಾಮಪ್ಪ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಭದ್ರಾ ಅಚ್ಚುಕಟ್ಟು ಪ್ರದೇಶದ ಕೊನೆ ಭಾಗದ ಗ್ರಾಮ ಗಳಾದ ಎಕ್ಕೆಗೊಂದಿ, ಭಾನುವಳ್ಳಿ, ಹೊಳೆ ಸಿರಿಗೆರೆ, ಕಮಲಾಪುರಗಳಲ್ಲಿ ಈಗ ಭತ್ತದ ಬೆಳೆಯು ಕಾಳುಕಟ್ಟುವ ಸಮಯವಾಗಿರುವುದರಿಂದ ನೀರಿನ ಅವಶ್ಯಕತೆ ಇದೆ. ಆದ್ದರಿಂದ ಶೀಘ್ರವೇ ಭದ್ರಾ ಜಲಾಶಯದ ನೀರು ಸಮರ್ಪಕವಾಗಿ ಸರಬರಾಜು ಮಾಡಬೇಕೆಂದು ತಾಕೀತು ಮಾಡಿದರು.
ಈ ವೇಳೆ ಎಂಜಿನಿಯರ್ ಗವಿಸಿದ್ದೇಶ್ವರ್ ಮಾತನಾಡಿ, ಮೇಲಿನ ಭಾಗದ ರೈತರುಗಳು ಕೊನೆಯ ಭಾಗದ ರೈತರಿಗೆ ನೀರು ಬಿಡದೆ ತಾವೇ ಉಪಯೋಗಿಸಿ ಕೊಳ್ಳುತ್ತಿರುವುದರಿಂದ ಈ ಸಮಸ್ಯೆ ಉದ್ಭವಿಸಿದೆ ಎಂದರು.ಆಗ ರೈತರು ತೀವ್ರ ವಿರೋಧ ವ್ಯಕ್ತ ಪಡಿಸಿದರು. ಹಿನ್ನೆಲೆಯಲ್ಲಿ ಶಾಸಕರು ಮಧ್ಯ ಪ್ರವೇಶಿಸಿ ರೈತರು ಹಾಗೂ ಅಧಿಕಾರಿಗಳಿಗೆ ಸಮಜಾಯಿಷಿ ನೀಡಿದರು. ಸಮಸ್ಯೆಗೆ ಸರಿಯಾದ ಕ್ರಮವನ್ನು ಆದಷ್ಟು ಬೇಗನೆ ಕೈಗೊಳ್ಳುವಂತೆ ಸೂಚನೆ ನೀಡಿ ರೈತರನ್ನು ಸಮಾಧಾನ ಪಡಿಸಿದರು.
ಈ ಸಮಯದಲ್ಲಿ ಈ ಭಾಗದ ರೈತರುಗಳಾದ ಪಾಲಾಕ್ಷಪ್ಪ,ಎಚ್.ಎಸ್.ಕರಿಯಪ್ಪ, ಮಂಜಪ್ಪ ಪವಾಡಿ ಹಾಗೂ ಇತರೆ ಅನೇಕ ರೈತರುಗಳು ಅಲ್ಲದೆ ಶಾಸಕರ ಆಪ್ತ ಸಹಾಯಕ ವಿಜಯ ಮಹಾಂತೇಶ್ ಹಾಗೂ ಅಶೋಕ್ ಮಾಸ್ತರ್ ಮತ್ತಿತರರು ಹಾಜರಿದ್ದರು.