ಕೊಟ್ಟೂರು
ಪಟ್ಟಣದ ವಿವಿಧ ಬಡಾವಣೆಯಲ್ಲಿ ರಸ್ತೆ ಪಕ್ಕದಲ್ಲಿ ನೆಟ್ಟಿರುವ ಗಿಡಗಳಿಗೆ ನೀರುಣಿಸುವುದು. ಗಿಡಗಳು ಬಾಗಿದ್ದರೆ ಆಸರೆ ಕೊಡುವುದು. ಬೇಲಿ ಕಟ್ಟುವುದು. ಸಸಿ ನೆಟ್ಟು ಪೋಷಿಸುವ ಕಾಯಕದಲ್ಲಿ ಹಸಿರು ಹೊನಲು ತಂಡ ನಿತ್ಯ ನಿರಂತರವಾಗಿದೆ.
ಸುಮಾರು 1066 ಗಿಡಗಳನ್ನು ಅರಣ್ಯ ಇಲಾಖೆ ನೆಟ್ಟಿದೆ. ಹಸಿರು ಹೊನಲು ತಂಡ 160 ಗಿಡಗಳನ್ನು ನೆಟ್ಟಿದ್ದು, ಇವುಗಳ ಬೆಳೆಸು ರಕ್ಷಿಸುವ ಹೊಣೆಯನ್ನು ಹೊತ್ತುಕೊಂಡಿದೆ.
ಕೊಟ್ಟೂರುನ್ನು ಹಸಿರು ಪಟ್ಟಣವನ್ನಾಗಿಸಬೇಕು ಎಂಬ ಸಂಕಲ್ಪದೊಂದಿದೆ ದೃಢ ಹೆಜ್ಜೆ ಇಟ್ಟಿರುವ ಸುಮಾರು 50 ಜನ ಯುವಕರಿರುವ ಈ ತಂಡ ಆರಂಭದಲ್ಲಿ ಬಿಂದಿಗೆಯಲ್ಲಿ ಗಿಡಗಳಿಗೆ ನೀರುಣಿಸುತ್ತಿದ್ದರು.
ಬಿಂದಿಗೆಯಲ್ಲಿ ನೀರು ತಂದು ಗಿಡಗಳಿಗೆ ಹಾಕುವುದು ಕಷ್ಟವೆಸಿದಾಗ, ತಮ್ಮ ಸದುದ್ದೇಶವನ್ನು ಪೇಸ್‍ಬುಕ್, ವ್ಯಾಟ್ಸಫ್‍ನಲ್ಲಿ ಹರಿಬಿಟ್ಟಿದಾಗ, ಅಭೂತಪೂರ್ವ ಬೆಂಬಲ ಸಿಕ್ಕಿತ್ತಲ್ಲದೆ. ಟ್ಯಾಂಕರ್ ಮೂಲಕ ಗಿಡಗಳಿಗೆ ನೀರುಣಿಸಿ ಟ್ಯಾಂಕರ್‍ನ ಹಣವನ್ನು ನಾವು ಕೊಡುತ್ತೇವೆ ಎಂದರಲ್ಲದೆ ಹಲವಾರು ಧಾನಿಗಳು ಮುಂದೆ ಬಂದರು.
ಮಲೆಷಿಯಾದಲ್ಲಿರುವ ಮಂಜುನಾಥ್, ಬೆಂಗಳೂರು, ತಮಿಳುನಾಡು ಇನ್ನೂ ಹಲವು ಕಡೆ ನೌಕರಿಯಲ್ಲಿರುವ ಇಲ್ಲಿಯವರು, ಪರಿಚಯಸ್ಥರು, ಪರಿಚಯ ಇಲ್ಲದವರು ಸಹಾ ಒಬ್ಬೊಬ್ಬರು ಮೂರು ಟ್ಯಾಂಕ್, ಐದು ಟ್ಯಾಂಕರ್‍ಗಳ ಬಾಡಿಗೆ ಕೊಡುವುದಾಗಿ ಹೇಳಿ, ಗೂಗಲ್ ಮೂಲಕ ಹಣವನ್ನು ಕಳುಹಿಸಿರುವುದು ನಮ್ಮ ತಂಡದ ಉಮ್ಮಸ್ಸು ಉತ್ಸಾಹ ಹೆಚ್ಚಿಸಿದೆ ಅನ್ನುತ್ತಾರೆ ಹಸಿರು ಹೊನಲು ತಂಡದ ನಾಗರಾಜ್ ಬಂಜಾರ್.
ಬೆಳಗ್ಗೆ ಆರು ಗಂಟೆಗೆ ಸಿದ್ದರಾಗುವ ಹಸಿರು ಹೊನಲು ತಂಡದ ಸದಸ್ಯರು ಆರು ರಿಂದ ಏಂಟು ಟ್ಯಾಂಕರ್‍ಗಳೊಂದಿಗೆ ಪಟ್ಟಣವನ್ನು ಸುತ್ತಿ ಗಿಡಗಳಿಗೆ ನೀರು ಬಿಡುತ್ತಾರೆ.
ಇಷ್ಟು ನೂರು, ಇಷ್ಟು ಸಾವಿರ ಗಿಡ ನೆಟ್ಟಿದ್ದೇವೆ ಎನ್ನುವುದಕ್ಕಿಂತ ಎಷ್ಟು ಗಿಡಗಳು ಬೆಳದಿವೆ. ಎಷ್ಟು ಗಿಡಗಳನ್ನು ಬೆಳಸಬೇಕು ಎಂಬ ತತ್ವ ನಮ್ಮ ತಂಡದ್ದು, ಇದಕ್ಕೆ ವಿ.ಎಫ್. ಹಾಸ್ಟಲ್ ವಿದ್ಯಾರ್ಥಿಗಳ ತಂಡ ನಮ್ಮೊಂದಿಗಿದೆ. ಎನ್.ಸಿ.ಸಿ. ಬಸವರಾಜ್ ಮಾರ್ಗದರ್ಶನದಿಂದ ಈ ಕಾರ್ಯಕೈಗೊಂಡಿದ್ದೇವೆ ಅನ್ನುತ್ತಾರೆ ಅವರು.
ಮೂರು ನೂರು ರು. ಒಂದು ಟ್ಯಾಂಕರ್ ನೀರು. ಬಾಡಿಗೆ ಬರುವ ಟ್ಯಾಂಕರ್‍ನವರು ನಮ್ಮ ಕಾರ್ಯಕ್ಕೆ ಮೆಚ್ಚಿ ದಿನವೂ ಎರಡು ಮೂರು ಟ್ಯಾಂಕರ್ ಉಚಿತವಾಗಿ ನೀರುಣಿಸುತ್ತಾರೆ. ಜೆಸಿಬಿ ಅಜ್ಜಪ್ಪ ಗಿಡನೆಡಲು ಉಚಿತವಾಗಿ ಗುಂಡಿತೋಡುತ್ತಾರೆ. ಸಾರ್ವಜನಿಕರಿಂದಲೂ ಉತ್ತಮ ಪ್ರಶಂಸೆ ಇದೆ. ಕೊಟ್ಟೂರುನ್ನು ಹಸಿರು ಪಟ್ಟಣವನ್ನಾಗಿಸುವ ಗುರಿ ನಮ್ಮದು ಅನ್ನುತ್ತಾರೆ ನಾಗರಾಜ್ ಬಂಜಾರ