ವೈಭವದ ಕೊಟ್ಟೂರೇಶ್ವರ ಸ್ವಾಮಿಯ ಬೆಳ್ಳಿರಥೋತ್ಸವ

ಕೊಟ್ಟೂರು:

       ಪ್ರಸಿದ್ದ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಕೊಟ್ಟೂರು ಶ್ರೀ ಗುರುಕೊಟ್ಟೂರೇಶ್ವರ ಸ್ವಾಮಿಯ ಬೆಳ್ಳಿ ರಥೋತ್ಸವವು ಸೋಮವಾರ ಮಧ್ಯರಾತ್ರಿ ಭಕ್ತ ಸಾಗರದ ನಡುವೆ ವೈಭವೋಪೇತವಾಗಿ ನೆರವೇರಿತು.

        ಕಾರ್ತಿಕಮಾಸದುದ್ದಕ್ಕೂ ಕೊಟ್ಟೂರಿನಲ್ಲಿ ನಡೆಯುವ ಏಕೈಕ ರಥೋತ್ಸವ ಎಂದೇ ಹೇಳಲಾಗುವ ಅಪರೂಪದ ಬೆಳ್ಳಿ ರಥೋತ್ಸವವನ್ನು ವೀಕ್ಷಿಸಲು ನಾಡಿನಲ್ಲೆಡೆಯಿಂದ ಬಂದ ಎಲ್ಲಾ ಜನಾಂಗದ ಭಕ್ತರು ಕೊರೆಯುವ ಚಳಿಯನ್ನು ಲೆಕ್ಕಿಸದೇ ಉತ್ಸವದಲ್ಲಿ ಪಾಲ್ಗೊಂಡಿದ್ದರು.

         ಶ್ರೀಗುರುಕೊಟ್ಟೂರೇಶ್ವರ ಸ್ವಾಮಿಯ ಕಾರ್ತೀಕ ಉತ್ಸವ ದೀಪಾವಳಿ ಪಾಡ್ಯದಿಂದ ಆರಂಭಗೊಂಡು ಪ್ರತೀ ಸೋಮವಾರ ಮತ್ತು ಗುರುವಾರದ ರಾತ್ರಿಯಂದು ಶ್ರೀ ಸ್ವಾಮಿಯನ್ನು ಬೆಳ್ಳಿ ಪಲ್ಲಕ್ಕಿಯಲ್ಲಿ ಉತ್ಸವ ನಡೆಯುತ್ತಿತ್ತು. ಒಟ್ಟು 13 ಪಲ್ಲಕ್ಕಿ ಉತ್ಸವಗಳು ನಡೆದು 14 ನೇ ಕೊನೇಯ ಉತ್ಸವವಾಗಿ ಬೆಳ್ಳಿ ರಥೋತ್ಸವ ನಡೆಯಿತು. ಈ ಉತ್ಸವದುದ್ದಕ್ಕೂ ಶ್ರೀ ಸ್ವಾಮಿಯ ಮೂಲ ಮೂರ್ತಿಯನ್ನು ಇರಿಸಲಾಗುತ್ತಿದ್ದುದು ಈ ಮಹೋತ್ಸವದ ವಿಶೇಷ ಅಂಶ.

          ಸೋಮವಾರ ರಾತ್ರಿ ಕೊಟ್ಟೂರೇಶ್ವರ ಸ್ವಾಮಿಗೆ ಪೂಜೆ ನೆರವೇರಿಸಿದ ನಂತರ ರಾತ್ರಿ 11.40 ರ ನಂತರ ಸ್ವಾಮಿಯನ್ನು ಸಕಲ ಬಿರುದಾವಳಿಗಳೊಂದಿಗೆ ಹಿರೇಮಠದಿಂದ ಹೊರಗೆ ತಂದ ಧರ್ಮಕರ್ತ ಬಳಗದವರು ಅಲಂಕೃತಗೊಂಡ ಬೆಳ್ಳಿರಥದಲ್ಲಿ ವಿರಾಜಮಾನಗೊಳಿಸಿದರು. ಕ್ರಿಯಾಮೂರ್ತಿ ಶಿವಪ್ರಕಾಶ ಕೊಟ್ರದೇವರು ರಥದಲ್ಲಿ ಆಸೀನರಾಗುತ್ತಿದ್ದಂತೆ ರಾತ್ರಿ 11.45 ರ ಸುಮಾರಿಗೆ ಬೆಳ್ಳಿರಥೋತ್ಸವಕ್ಕೆ ಚಾಲನೆ ನೀಡಲಾಯಿತು. ನೆರೆದಿದ್ದ ಭಕ್ತರು ಬಾಳೆಹಣ್ಣುಗಳನ್ನು ರಥಕ್ಕೆ ತೂರಿ ಜಯಘೋಷಗಳನ್ನು ಕೂಗಿ ಕಣ್ತುಂಬಿಸಿಕೊಂಡರು.

         ವಿವಿಧ ವಾದ್ಯಗಳ ನಿನಾದದೊಂದಿಗೆ ಬೆಳ್ಳಿ ರಥೋತ್ಸವ ತೊಟ್ಟಿಲು ಮಠ, ಊರಮ್ಮನ ಬಯಲು ಮುಖಾಂತರ ಗಚ್ಚಿನಮಠಕ್ಕೆ ತೆರಳಿ, ಅಲ್ಲಿಂದ ಪುನಃ ವಾಪಾಸ್ ಸಾಗಿಬಂದ ರಥೋತ್ಸವ ಮಂಗಳವಾರ ಬೆಳಗಿನಜಾವ 3.50ರ ಸಮಯಕ್ಕೆ ಮೂಲ ಹಿರೇಮಠಕ್ಕೆ ಬಂದು ಸೇರಿತು.

         ದೀಪೋತ್ಸವಕ್ಕೆ ಚಾಲನೆ : ಬೆಳ್ಳಿ ರಥೋತ್ಸವದ ಆರಂಭಕ್ಕೆ ಮುನ್ನ ಸೋಮವಾರ ಸಂಜೆ 6.00 ಸುಮಾರಿಗೆ ಕಾರ್ತಿಕೋತ್ಸವ ಆರಂಭಗೊಂಡಿತು. ಹಿರೇಮಠದ ಬಳಿ ಕ್ರಿಯಾಮೂರ್ತಿ ಶಂಕರಸ್ವಾಮೀಜಿ, ಧರ್ಮಕರ್ತ ಸಿ.ಎಚ್.ಎಂ.ಗಂಗಾಧರಯ್ಯ ಹಿಂದಿನ ಧರ್ಮಕರ್ತ ಎ.ಎಂ.ಬಿ. ಕೊಟ್ರಯ್ಯ, ಆಯಗಾರ ಬಳಗದ ಆರ್.ಎಂ.ಗುರುಬಸವಸ್ವಾಮಿ, ಮಂಜುನಾಥಗೌಡ,ಕೆ.ಸಿದ್ದನಗೌಡ, ಪ್ರೇಮಾನಂದಗೌಡ ,ನಾಗರಾಜಗೌಡ, ಅಜ್ಜಪ್ಪ, ಬಿ.ಈರಣ್ಣ, ಕೂಡ್ಲಿಗಿ ರೇವಣ್ಣ, ಕೆಂಪೆಳ್ಳಿ ಸಿದ್ದನಗೌಡ,ಸಿದ್ದೇಶ, ಸೋಗಿ ಈರಣ್ಣ, ದೀಪು, ಮತ್ತಿತರರು ಪಾಲ್ಗೊಂಡಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap