ಬೆಂಗಳೂರು
ಟಿಪ್ಪು ಸುಲ್ತಾನ್ ಕುರಿತ ಪಠ್ಯವನ್ನು 7 ನೇ ತರಗತಿಯಿಂದ ಸರ್ಕಾರ ಕೈಬಿಟ್ಟಿರುವುದನ್ನು ಉಗ್ರವಾಗಿ ಟೀಕಿಸಿರುವ ಕಾಂಗ್ರೆಸ್, ಟಿಪ್ಪು ಬಗ್ಗೆ ಟಿಪ್ಪು ಇತಿಹಾಸ ಟಿಪ್ಪು ಸ್ವಾತಂತ್ರ ಹೋರಾಟದ ಬಗ್ಗೆ ಸಮಗ್ರವಾಗಿ ಅಧ್ಯಯನ ನಡೆಸಲು ಕೆಪಿಸಿಸಿ ನಿರ್ಧರಿಸಿದ್ದು, ಇದಕ್ಕಾಗಿ ಅಧ್ಯಯನ ಸಮಿತಿ ರಚಿಸಿ, ಟಿಪ್ಪು ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಬಿಜೆಪಿಯ ಕೇಸರೀಕರಣ ವಿರೋಧಿಸಿ ಹೋರಾಟ ಮಾಡಲು ಚಿಂತನೆ ನಡೆಸಿದೆ.
ಸರ್ಕಾರದ ಈ ತೀರ್ಮಾನವನ್ನು ಖಂಡಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಟಿಪ್ಪುವಿನ ಬಗ್ಗೆ ಪಠ್ಯವನ್ನು ಕೈಬಿಟ್ಟ ಮಾತ್ರಕ್ಕೆ ಇತಿಹಾಸವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಪ್ಪು ಜಯಂತಿ ಆಚರಣೆ ಮಾಡುವುದು, ಬಿಡುವುದು ಅವರಿಗೆ ಸೇರಿದ್ದು. ಪಠ್ಯಕ್ರಮದಿಂದ ಕೈಬಿಡುವುದು ಸರಿಯಲ್ಲ. ಪಠ್ಯಕ್ರಮದಿಂದ ಕೈಬಿಡದಂತೆ ಹಿಂದೆಯೂ ಒತ್ತಡ ಹೇರಲಾಗಿತ್ತಾದರೂ ಬಿಜೆಪಿ ತನ್ನ ಅಜೆಂಡಾ ಈಡೇರಿಸಲು ಹೀಗೆ ಮಾಡಿದೆ. ಪಠ್ಯದಿಂದ ಟಿಪ್ಪು ಪಾಠ ಕೈಬಿಟ್ಟ ಮಾತ್ರಕ್ಕೆ ಟಿಪ್ಪುಇತಿಹಾಸ ತಿರುಚಲು ಸಾಧ್ಯವಿಲ್ಲ. ಟಿಪ್ಪು ಹೈದರಾಲಿ ಬಗ್ಗೆ ಬ್ರಿಟಿಷರ ಬಳಿಯೇ ಹೋರಾಟ ಮಾಡಿದ ಬಗ್ಗೆ ದಾಖಲೆಗಳಿವೆ. ಇದು ಬಿಜೆಪಿಯವರಿಗೂ ಗೊತ್ತಿದೆ ಎಂದರು
ಸರ್ಕಾರದ ಎಲ್ಲಾ ತೀರ್ಮಾನಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಟಿಪ್ಪು ಬಗ್ಗೆ ಅಧ್ಯಯನ ಸಮಿತಿ ರಚನೆ ಮಾಡಿ, ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಹೋರಾಟ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
