ಕೆಪಿಎಲ್ ಬುಕ್ಕಿ ಬಂಧನ..!

ಬೆಂಗಳೂರು

   ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಪಂದ್ಯಾವಳಿ ವೇಳೆ ನಡೆದಿದ್ದ ಮ್ಯಾಚ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್‌ಗೆ ಸಂಬಂಧಿಸಿದಂತೆ ಓರ್ವ ಬುಕ್ಕಿಯನ್ನು ಬಂಧಿಸಿರುವ ಸಿಸಿಬಿ ಪೊಲೀಸರು ಮತ್ತೊಬ್ಬನಿಗಾಗಿ ತೀವ್ರ ಶೋಧ ನಡೆಸಿದ್ದಾರೆ.ಬುಕ್ಕಿ ಭಾವೇಶ್ ಭಾಫ್ನಾ ಬಂಧಿತ ಆರೋಪಿಯಾಗಿದ್ದು ಮ್ಯಾಚ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ದಂಧೆಯಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಬುಕ್ಕಿ ಸನ್ಯಾಮ್ ತಲೆಮರೆಸಿ ಕೊಂಡಿದ್ದು ಆತನಿಗಾಗಿ ತೀವ್ರ ಶೋಧ ನಡೆಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

   ಬಳ್ಳಾರಿ ಟಸ್ಕರ್ಸ್ ತಂಡದ ಬೌಲರ್ ಭವೇಶ್ ಗುಳೆಚ್ಚಾರನ್ನು ಸಂಪರ್ಕಿಸಿದ್ದ ಬುಕ್ಕಿಗಳು ಓವರ್‌ಗೆ ೧೦ಕ್ಕೂ ಹೆಚ್ಚು ರನ್ ನೀಡುವಂತೆ ಆಮಿಷ ಒಡ್ಡಿದ್ದರು. ಈ ಮೂಲಕ ಮ್ಯಾಚ್‌ಫಿಕ್ಸ್ ಮಾಡಲು ಮುಂದಾಗಿದ್ದರು. ಆಮಿಷಕ್ಕೆ ಒಳಗಾಗದ ಗುಳೆಚ್ಚಾ ಫಿಕ್ಸಿಂಗ್‌ಗೆ ನಿರಾಕರಿಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.ಸದ್ಯ ಭವೇಷ್ ಬಫ್ನಾನನ್ನು ಬಂಧಿಸಲಾಗಿದ್ದು, ದೆಹಲಿ ಮೂಲದ ಸನ್ಯಾಮ್ ಪತ್ತೆಗೆ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

೯ ಲಕ್ಷ ರೂ. ಮುಂಗಡ

    ಭವೇಶ್ ಗುಳೆಚ್ಚಾ ಸಂಪರ್ಕ ಸಾಧಿಸಿರುವ ಬುಕ್ಕಿಗಳು ಮೊದಲು ಜೆ.ಪಿ. ನಗರದ ಡಾ.ಶಿಷಾ ಕೆಫೆಯಲ್ಲಿ ಫಿಕ್ಸಿಂಗ್ ಆಮಿಷ ಒಡ್ಡಿದ್ದಾರೆ. ಮುಂಗಡವಾಗಿ ೯ ಲಕ್ಷ ರೂಪಾಯಿ, ಅಡ್ವಾನ್ಸ್ ನೀಡುವುದಾಗಿಯೂ, ಬಳಿಕ ಓವರ್?ಗೆ ೧೦ಕ್ಕೂ ಅಧಿಕ ರನ್ ಬಿಟ್ಟುಕೊಟ್ಟರೆ ಹೆಚ್ಚುವರಿ ಹಣ ನೀಡುವುದಾಗಿ ಆಮಿಷ ಒಡ್ಡಿದ್ದಾರೆ. ಆಮಿಷಕ್ಕೆ ಬಲಿಯಾಗದ ಗುಳೆಚ್ಚಾ ನೋ ಎಂದಿದ್ದಾರೆ.

    ಶಿಷಾ ಕೆಫೆಯಲ್ಲಿ ಡೀಲ್ ವಿಫಲವಾದಾಗ ಮತ್ತೊಮ್ಮೆ ವಿಮಾನ ನಿಲ್ಡಾಣ ರಸ್ತೆಯಲ್ಲಿರುವ ತಾಜ್ ಹೊಟೆಲ್‌ನಲ್ಲಿ ಡೀಲ್ ಕುದುರಿಸಲು ಮುಂದಾಗಿದ್ದಾರೆ. ಈ ವೇಳೆ ಭವೇಶ್ ಬಫ್ನಾ ಮತ್ತೊಬ್ಬ ಬುಕ್ಕಿ ಸಾನ್ಯಾಮ್‌ನನ್ನು ಭೇಟಿ ಮಾಡಿಸಿದ್ದಾನೆ. ಬುಕ್ಕಿಗಳ ಎಲ್ಲ ಡೀಲ್‌ಗಳಿಗೂ ನೋ ಎಂದಿರುವ ಗುಳೆಚ್ಚಾ ದೂರು ದಾಖಲಿಸಿದ್ದಾರೆ.

    ಬಂಧಿತ ಬುಕ್ಕಿ ಭಾವೇಶ್ ಭಾಫ್ನಾಯನ್ನು ತೀವ್ರ ವಿಚಾರಣೆಗೊಳಪಡಿಸಲಾಗಿದ್ದು ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ ಮ್ಯಾಚ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ದಂಧೆಯಲ್ಲಿ ಭಾಗಿಯಾಗಿರುವ ಇನ್ನು ಕೆಲವು ಮಂದಿಯ ಮಾಹಿತಿ ಪತ್ತೆಯಾಗಿದ್ದು ಅಗತ್ಯಬಿದ್ದರೆ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುವುದು ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link