ಬೆಂಗಳೂರು:
ಸಿದ್ದರಾಮಯ್ಯ ಸರ್ಕಾರ ಅಧಿಕಾರದಲ್ಲಿದಾಗ ತಿರಸ್ಕರಿಸಿದ್ದ ಬಸವೇಶ್ವರ ಮಿನಿ ಹೈಡಲ್ ಪ್ರಾಜೆಕ್ಟ್ ಗೆ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಅನುಮೋದನೆ ನೀಡಿದೆ. ಈ ಯೋಜನೆಯಿಂದ ಸುಮಾರು 24.75 ಮೆಗಾ ವ್ಯಾಟ್ ಹೆಚ್ಚುವರಿ ವಿದ್ಯುತ್ ಉತ್ಪಾದನೆಯಾಗಲಿದ್ದು , ಈ ಯೋಜನೆ ಈಗಿರುವ 24.75 ಮೆಗಾ ವ್ಯಾಟ್ ಸಾಮರ್ಥ್ಯದ ರಂಗನಾಥ ಸ್ವಾಮಿ ಮಿನಿ ಹೈಡಲ್ ಯೋಜನೆಯ ಪಕ್ಕದಲ್ಲಿ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲ್ಲೂಕಿನ ಶಿವನಸಮುದ್ರದಲ್ಲಿ ತಲೆಯೆತ್ತಲಿದ್ದು ಒಟ್ಟಾಗಿ 49.5 ಮೆಗಾ ವ್ಯಾಟ್ ವಿದ್ಯುತ್ ಸಾಮರ್ಥ್ಯವನ್ನು ಹೊಂದಲಿದೆ ಎಂದು ತಿಳಿಸಿದ್ದಾರೆ.
ಯೋಜನೆಯಲ್ಲಿ ಅಕ್ರಮ ನಡೆದಿದೆ ಮತ್ತು ಹೈಕೋರ್ಟ್ ಆದೇಶಕ್ಕೆ ವಿರುದ್ಧವಾಗಿದೆ ಎಂದು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈ ಯೋಜನೆಯನ್ನು ವಿರೋಧಿಸಿತ್ತು. ಈ ಪ್ರದೇಶದಲ್ಲಿ 8 ಮಿನಿ ಹೈಡಲ್ ಪ್ರಾಜೆಕ್ಟ್ ಗಳಿದ್ದು ಅದರಿಂದ ನದಿಯ ಸುರಕ್ಷತೆಗೆ ಧಕ್ಕೆಯುಂಟಾಗಲಿದೆ ಎಂದು ಹೈಕೋರ್ಟ್ ನೇಮಿಸಿದ್ದ ಪರಿಸರ ತಜ್ಞರ ಸಮಿತಿ ವರದಿ ನೀಡಿತ್ತು. ಈ ಹಿನ್ನಲೆಯಲ್ಲಿ ಯೋಜನೆಯನ್ನು ಹಿಂದಿನ ಸರ್ಕಾರ ಕೈಬಿಟ್ಟಿತ್ತು
2018 ಏಪ್ರಿಲ್ 13 ರಂದು ಬೆಂಗಳೂರಿನ ಎಂಒಇಇ ಸಮಿತಿ ಸರ್ಕಾರದ ಯೋಜನೆಯನ್ನು ತಿರಸ್ಕರಿಸಿತ್ತು.ಅಲ್ಲದೆ ಪಯೊನೀರ್ ಪವರ್ ಕಾರ್ಪೊರೇಷನ್ ಲಿಮಿಟೆಡ್ ನಿಂದ 0.5 ಎಕರೆ ಅರಣ್ಯ ಪ್ರದೇಶವನ್ನು ವಶಪಡಿಸಿಕೊಂಡು ರಂಗನಾಥಸ್ವಾಮಿ ಯೋಜನೆಗೆ ಗಡಿರೇಖೆಯನ್ನು ಹಾಕುವಂತೆ ಆದೇಶ ನೀಡಿತ್ತು. ಆದರೆ ನಿಲುವನ್ನು ಬದಲಿಸಿದ ಎಂಒಇಇ ಜುಲೈ 31ರಂದು ಯೋಜನೆಗೆ ಅನುಮೋದನೆ ನೀಡಿತು. ಅರಣ್ಯ ಇಲಾಖೆ ನಂತರ ಅನುಮೋದನೆಗೆ ಯೋಜನೆಯ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಸೂಚಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








