ಹಾವೇರಿ :
ಕರವೇ ಜಿಲ್ಲಾ ಘಟಕದ ವತಿಯಿಂದ ರಾಷ್ಟ್ರಕವಿ, ವರಕವಿ, ರಸಋಷಿ ವಿಶ್ವ ಮಾನವ ಜಗದ ಕವಿ ಕುವೆಂಪು ರವರ 24 ನೇ ಪುಣ್ಯ ಸ್ಮರಣೋತ್ಸವವನ್ನು ನಗರದ ಪ್ರವಾಸಿ ಮಂದಿರದಲ್ಲಿ ಆಚರಿಸಲಾಯಿತು.
ಜಿಲ್ಲಾ ಅಧ್ಯಕ್ಷರಾದ ಸತೀಶಗೌಡ ಮುದಿಗೌಡ್ರ ಮಾತನಾಡಿ ಈ ನಾಡಿನ ಕನ್ನಡ ನಾಡು ನುಡಿ ಭಾಷೆ ಬಗ್ಗೆ ಅಪಾರ ಗೌರವ ಹೊಂದಿರುವ ಕರ್ನಾಟಕ ರಕ್ಷಣಾ ವೇದಿಕೆಯ ಆದರ್ಶ ಪುರುಷ ಕುವೆಂಪು ರವರ ಆದರ್ಶಗಳು ಹಾಗೂ ಕನ್ನಡದ ಬಗ್ಗೆ ನೀಡಿದ ಕೊಡುಗೆಗಳನ್ನು ಕನ್ನಡಿಗರಾದ ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕೆಂದು ಕರವೇ ಕಾರ್ಯಕರ್ತರಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಶವಂತಗೌಡ ದೊಡ್ಡಗೌಡ್ರ, ಜಿಲ್ಲಾ ಉಪಾಧ್ಯಕ್ಷ ನಂದೀಶ ಗೊಡ್ಡೆಮ್ಮಿ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮಿ ಗುಡಮಿ,ಜಹಿರುದ್ದೀನ ಬೆಂಕೀಪುರ,ಬಸಮ್ಮ ಬಾದಾಮಿಗಟ್ಟಿ, ಗಿರೀಶ ಬಾರ್ಕಿ,ಸಂತೋಷಗೌಡ ಪಾಟೀಲ, ಕರಿಯಪ್ಪ ಕೊರವರ, ಬಸವರಾಜ ಹೊಂಭರಡಿ.ಟಿಪ್ಪುಸುಲ್ತಾನ ಮಕಾನದಾರ. ಸಿಕಂದರ ವಾಲೀಕಾರ. ಹಾನಗಲ್ ತಾಲೂಕು ಅಧ್ಯಕ್ಷ ಸಂತೋಷ ಗಾಣಿಗೇರ ರಿಯಾಜ ಅಹ್ಮದ ಲೋಹಾರ ಹಾಗೂ ಮುಂತಾದ ಕಾರ್ಯಕರ್ತರು ಹಾಜರಿದ್ದರು.