ತಿಪಟೂರು :
ತಾಲ್ಲೂಕಿನ ಕಸಬಾ ಹೋಬಳಿಯ ಕರೀಕೆರೆ ಗ್ರಾಮದ ಸರ್ವೆ ನಂಬರ್ 157 ರ ಮಂಜುನಾಥ ಮತ್ತು ರಾಜಶೇಖರ ಎಂಬ ರೈತನ ತೋಟಕ್ಕೆ ಬೆಂಕಿ ಅವಘಡ ಸಂಭವಿಸಿದ್ದು ಲಕ್ಷ ಕ್ಕೂ ಹೆಚ್ಚು ಸಂಭವಿಸಿದೆ.
ಮಂಜುನಾಥ್ ಅವರ ತೋಟದ ಮನೆಯಲ್ಲಿ ಇದ್ದ ಒಂದು ಸಬ್‍ಮರ್ಸಿಬಲ್ ಮೋಟರ್ ಪಂಪ್, ಸ್ವಿಚ್‍ಬೋರ್ಡ್ ಹಾಗೂ ಸಾವಿರಕ್ಕೂ ಹೆಚ್ಚು ತೆಂಗಿನಕಾಯಿಗಳು, ಹನಿ ನೀರಾವರಿಗೆ ಸಂಬಂಧ ಪಟ್ಟ ಸುಮಾರು 30 ಸಾವಿರಕ್ಕೂ ಹೆಚ್ಚಿನ ಪರಿಕರಗಳು ಬೆಂಕಿಯಲ್ಲಿ ಬೆಂದು ನಷ್ಟ ಉಂಟಾಗಿದೆ ಹಾಗೂ ಸುಮಾರು ಹತ್ತುಕ್ಕೂ ಹೆಚ್ಚು ತೆಂಗಿನ ಮರಗಳಿಗೆ 2 ಹಲಸಿನ ಮರಕ್ಕೆ ಬೆಂಕಿ ತಗುಲಿ ಬಾಗಶಃ ಸುಟ್ಟುಹೋಗಿದ್ದು ವಿಷಯ ತಿಳಿಯುತಿದ್ದಂತೆ ಗ್ರಾಮಸ್ಥರು ತೋಟದ ಮಾಲೀಕರು ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರೂ ಅಪಾರ ನಷ್ಟ ಸಂಭವಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
