ಬೆಂಗಳೂರು:
ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ -19 ಗೃಹ ಸಮೀಕ್ಷೆಗಾಗಿ ಅನಾರೋಗ್ಯ ಪೀಡಿತರಾಗಿರುವವರು ಹಾಗು 50 ವರ್ಷಕ್ಕಿಂತ ಮೇಲ್ಪಟ್ಟ ಮಹಿಳಾ ಶಿಕ್ಷಕರು ಮತ್ತು 55 ವರ್ಷಕ್ಕಿಂತ ಪುರುಷ ಶಿಕ್ಷಕರನ್ನು ಕೈಬಿಡುವಂತೆ ಬೆಂಗಳೂರು ಶಿಕ್ಷಕರ ಕ್ಷೇತ್ರದ ಮೇಲ್ಮನೆ ಸದಸ್ಯ ಪುಟ್ಟಣ್ಣ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್‌ಗೆ ಪತ್ರ ಬರೆದು ಮನವಿ ಮಾಡಿದ್ದಾರೆ
ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ – 19 ಗೃಹ ಸಮೀಕ್ಷೆಗಾಗಿ ಸರ್ಕಾರಿ , ಅನುದಾನಿತ , ಅನುದಾನ ರಹಿತ ಶಾಲೆಗಳ ಶಿಕ್ಷಕರನ್ನು ನೇಮಕ ಮಾಡಿದ್ದು ಅದರಲ್ಲಿ 50 ವರ್ಷ ಮೇಲ್ಪಟ್ಟ ಮಹಿಳಾ ಶಿಕ್ಷಕರು ಮತ್ತು 55 ವರ್ಷ ಮೇಲ್ಪಟ್ಟ ಪುರುಷ ಶಿಕ್ಷಕರು ಹಾಗು ಅನಾರೋಗ್ಯ ಪೀಡಿತರಿಂದ ದೂರದ ಸ್ಥಳಗಳಿಗೆ ಕೋವಿಡ್ – 19 ಗೃಹ ಸಮೀಕ್ಷೆ ಮಾಡಿಸಲಾಗುತ್ತಿದ್ದು ,ನಿವೃತ್ತಿ ಅಂಚಿನಲ್ಲಿರುವ ಶಿಕ್ಷಕರನ್ನು ನೇಮಕ ಮಾಡಲಾಗಿದೆ
ಶಿಕ್ಷಕರು ವಾಸ ಮಾಡುವ ಸ್ಥಳದಿಂದ ದೂರದ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸಲು ಆದೇಶ ಮಾಡಲಾಗಿದೆ. ಇದರಿಂದ ಶಿಕ್ಷಕರು ತುಂಬಾ ಆತಂಕಕ್ಕೊಳಗಾಗಿದ್ದಾರೆ.ಆದ್ದರಿಂದ ತಾವು ಕೂಡಲೇ ಶಿಕ್ಷಕರ ವಾಸಸ್ಥಳದಲ್ಲಿಯೇ ಕೋವಿಡ್ – 19 ಗೃಹ ಸಮೀಕ್ಷೆಗಾಗಿ ನೇಮಕ ಮಾಡಬೇಕು ಹಾಗೂ ವಯಸ್ಸಾದವರನ್ನು ಸಮೀಕ್ಷೆಯಿಂದ ವಿನಾಯಿತಿ ನೀಡುವಂತೆ ಪುಟ್ಟಣ್ಣ ಮನವಿ ಮಾಡಿದ್ದಾರೆ