ಆರನಕಟ್ಟೆ ಗ್ರಾಮದಲ್ಲಿ ಕಾನೂನು ಅರಿವು-ನೆರವು ಕಾರ್ಯಕ್ರಮ

ಹಿರಿಯೂರು :

     ಕಾನೂನುಗಳ ಮಾತೃ ಸಂವಿಧಾನವಾಗಿದೆ. ಸಂವಿಧಾನದ ಹೊರತಾಗಿ ಯಾವ ಕಾನೂನು ಇಲ್ಲ. ಕಾನೂನುಗಳು ನಮ್ಮ ರಕ್ಷಣೆಗಾಗಿವೆಯೇ ಹೊರತು ನಮ್ಮ ವಿರುದ್ಧವಲ್ಲ ಎಂಬುದಾಗಿ ನಿವೃತ್ತ ಡಿವೈಎಸ್‍ಪಿ ವೆಂಕಟಸ್ವಾಮಿ ಹೇಳಿದರು.

     ತಾಲ್ಲೂಕಿನ ಆರನಕಟ್ಟೆ ಗ್ರಾಮದಲ್ಲಿ ತಾಲ್ಲೂಕು ಕಾನೂನು ಸೇವಾಸಮಿತಿ ವಕೀಲರ ಸಂಘ, ಕೃಷಿ ತೋಟಗಾರಿಕೆ ಮಹಾವಿದ್ಯಾಲಯ ಹಿರಿಯೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಸೇವಾಯೋಜನೆ ವಾರ್ಷಿಕ ವಿಶೇಷ ಶಿಬಿರದಲ್ಲಿ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

     ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಷ್ಟ್ರೀಯ ಸೇವಾ ಯೋಜನಾ ಕಾರ್ಯಕ್ರಮದ ಅಧಿಕಾರಿ ಎಲ್.ಬಿ.ಅಶೋಕ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮೂಲ ಕಾನೂನುಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ವಕೀಲರಾದ ಎ.ಮಹಾಲಿಂಗಪ್ಪ ಮತ್ತು ಟಿ.ದೃವಕುಮಾರ್ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ನಾರಾಯಣಸ್ವಾಮಿ, ರಾಮಸ್ವಾಮಿ, ಶಿವಕುಮಾರಸ್ವಾಮಿ, ಶಿವಕುಮಾರ್, ವಾಸುದೇವ್ ಮತ್ತು ಇತರರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap