ಹಗರಿಬೊಮ್ಮನಹಳ್ಳಿ
ನಾಶವಾಗುತ್ತಿರುವ ಪರಿಸರವನ್ನು ಉಳಿಸಿ ಹಸಿರನ್ನು ಬೆಳೆಸಬೇಕಾಗಿದೆ ಎಂದು ವಾಸವಿ ಯುವಜನ ಸಂಘದ ಗೌರವ ಅಧ್ಯಕ್ಷ ಕೋರ್‍ಗಲ್ ಗಿರಿರಾಜ್ ಹೇಳಿದರು.
ಪಟ್ಟಣದ ಶ್ರೀ ಕನ್ನಿಕಾಪರಮೇಶ್ವರಿ ದೇಗುಲದ ಆವರಣದಲ್ಲಿ ಆರ್ಯವೈಶ್ಯ ಸಂಘ ಟ್ರಸ್ಟ್, ವಾಸವಿ ಯುವಜನ ಸಂಘ, ವಾಸವಿ ಮಹಿಳಾ ಮಂಡಳಿ ಹಾಗೂ ವಾಸವಿ ವನಿತಾ ಸಂಘದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮನುಷ್ಯನ ಸ್ವಾರ್ಥ ಜೀವನಕ್ಕಾಗಿ ಆಕಾಶದಲ್ಲಿನ ಓಝೋನ್ ಪದರಿಗೆ ಇಂದು ಧಕ್ಕೆ ಬಂದಿದೆ ಪರಿಸರ ಅಂಚಿನತ್ತ ಸಾಗುತ್ತಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ, ಆದ್ದರಿಂದ ಪರಿಸರವನ್ನು ಮುಂದಿನ ಯುವ ಜನತೆಗಾಗಿ ಅನಿವಾರ್ಯವಾಗಿ ಹಸಿರನ್ನು ಬೆಳಸಿ ಉಳಿಸಬೇಕಾಗಿದೆ ಎಂದರು.
ಆರ್ಯವೈಶ್ಯ ಸಂಘ ಟ್ರಸ್ಟ್‍ನ ಜಿ.ಲಕ್ಷೀಪತಿ ಮಾತನಾಡಿ, ಪರಿಸರ ದಿನಾಚರಣೆ ಎಂಬುದು ಕೇವಲ ಹೆಸರಿಗೆ ಮಾತ್ರವಾದರೆ ಸಾಧ್ಯವಿಲ್ಲ. ಅದು ನಮ್ಮ ದೈನಂದಿನ ಕ್ರಿಯೆಯಾಗಬೇಕು. ಸಸಿಗಳನ್ನು ನೆಡುವ ಜೊತೆಗೆ ಅವುಗಳ ಲಾಲನೆ ಪಾಲನೆ ನಮ್ಮ ಕತವ್ಯ ವಾಗಬೇಕು ಎಂದು ಕರೆ ನೀಡಿದರು.
ಇದೇ ವೇಳೆ ಕನ್ನಿಕಾಪರಮೇಶ್ವರಿ ದೇಗುಲದ ಸುತ್ತ ವಿವಿಧ ಜಾತಿಯ ಸಸಿಗಳನ್ನು ನೆಡುವ ಮೂಲಕ ಪರಿಸರ ದಿನಾಚರಣೆ ಆಚರಿಸಿದರು.ಈ ಸಂದರ್ಭದಲ್ಲಿ ವಾಸವಿಯುವಜನ ಸಂಘದ ಅಧ್ಯಕ್ಷ ಸಂದೀಪ, ಜಿ.ಭರತ್, ಪ್ರವೀಣ್, ಡಿ.ರಮೇಶ್, ರಾಘವೇಂದ್ರ, ವಿಷ್ಣು, ಸಂಜೀವ, ಪ್ರೇಮನಾಥ, ರಾಜೇಂದ್ರ, ಮಹಿಳಾ ಮಂಡಳಿ ಅಧ್ಯಕ್ಷೆ ಬಿ.ಪಾರ್ವತಮ್ಮ, ಚಿದ್ರಿ ಮಾಧವಿ, ಸ್ವಾತಿ, ಕಾರ್ಯದರ್ಶಿ ಶಿಲ್ಪಾ ಬಾಲಾಜಿ, ಮೈತ್ರಿ ನಾಣ್ಯಪುರ ಮತ್ತಿತರರು ಉಪಸ್ಥಿತರದಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ