ಹಗರಿಬೊಮ್ಮನಹಳ್ಳಿ
ರಾಯಚೂರಿನಲ್ಲಿ ವಕೀಲರ ಸಂಘದ ಸದಸ್ಯ ಪಿ.ಎಸ್.ವೀರಯ್ಯನವರ ಮೇಲೆ ಅಲ್ಲಿಯ ಪಿ.ಎಸ್.ಐ ನಾಗರಾಜ್ ಮೇಕಾ ಎನ್ನುವವರು ಅಮಾನುಷ್ಯವಾಗಿ ವರ್ತಿಸುವ ಮೂಲಕ ಹಲ್ಲೆ ಮಾಡಿರುವುದನ್ನು ತಾಲೂಕು ವಕೀಲರ ಸಂಘದಿಂದ ಘಟನೆಯನ್ನು ಖಂಡಿಸಿ ಶುಕ್ರವಾರ ಕಾರ್ಯಕಲಾಪಗಳಿಂದ ದೂರ ಉಳಿದು, ಪಟ್ಟಣದ ತಾಲೂಕು ಕಚೇರಿಯ ಮುಂದೆ ಪ್ರತಿಭಟನೆ ಮಾಡಿದರು.
ಪ್ರತಿಭಟನೆಯನ್ನುದ್ದೇಶಿಸಿ ವಕೀಲರ ಸಂಘದ ಕಾರ್ಯದರ್ಶಿ ಟಿ.ಜಿ.ಎಂ.ಕೊಟ್ರೇಶ್ ಮಾತನಾಡಿ, ವಕೀಲರಾದ ವೀರಯ್ಯನವರನ್ನು ಪಿ.ಎಸ್.ಐ ನ್ಯಾಯಾಲಯದ ಆವರಣದಿಂದ ಎಳೆದುಕೊಂಡು ಹೋಗಿದ್ದು ಅಲ್ಲದೆ, ಅವರ ಬಟ್ಟೆಗಳನ್ನು ಬಿಚ್ಚಿ ಮನಬಂದಂತೆ ತಳ್ಳಿಸಿ, ಅವಚ್ಛ ಶಬ್ದಗಳಿಂದ ನಿಂದಿಸುತ್ತ ಮನುಷ್ಯತ್ವವನ್ನು ಮರೆತವರಂತೆ ವರ್ತಿಸಿದ್ದಾರೆ ಎಂದು ಕಿಡಿಕಾರಿದರು. ಕೂಡಲೆ ಘಟನೆಗೆ ಕಾರಣರಾದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ಅಮಾನತ್ತುಗೊಳಿಸಬೇಕು ಎಂದು ಪಟ್ಟು ಹಿಡಿದರು.
ಇದರೊಂದಿಗೆ ಪಶ್ಚಿಮ ಬಂಗಾಳದ ಹೌರದ ನ್ಯಾಯಾಲಯದ ಆವರಣದಲ್ಲಿಯೇ ಹಿರಿಯ, ಕಿರಿಯ ಮತ್ತು ಮಹಿಳಾ ವಕೀಲರ ಮೇಲೆ ಅಲ್ಲಿಯ ಪೊಲೀಸರು ವಿನಾಕಾರನ ಲಾಠಿ ಪ್ರಹಾರ ನಡೆಸಿದ್ದು ಕೂಡ ಖಂಡಿಸುತ್ತೇವೆ ಎಂದು ಹೇಳಿದ ಅವರು ಕೂಡಲೆ ಈ ಎರಡು ಪ್ರಕರಣಗಳಿಗೆ ಕಾರಣರಾದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಉಪತಹಸೀಲ್ದಾರ್ ಎಚ್.ಎಂ.ಶ್ವೇತಾರವರಿಗೆ ಸಂಘದಿಂದ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ವಿಶಾಲಾಕ್ಷಮ್ಮ, ಮಾಜಿ ಕಾರ್ಯದರ್ಶಿ ಕೊಟ್ರೇಶ್ ಶೆಟ್ಟರ್, ಜಗದೀಶ, ಆಂಜನೇಯ, ಶ್ರೀನಿವಾಸ, ಟಿ.ಪ್ರಹ್ಲಾದ್, ಕಾತ್ರಿಕಿ ಸುಜಾತ, ವಿ.ಆಂಜನೇಯ, ಹಾಲೇಶ್, ಚಂದ್ರಶೇಖರ್ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
