ಕಂಪ್ಲಿ
ಆರೋಗ್ಯಕ್ಕೆ ಸ್ವಚ್ಚತೆ ಮುಖ್ಯವಾಗಿದ್ದು ಪ್ರತಿಯೊಬ್ಬರೂ ಸ್ವಚ್ಚತೆ ಬಗ್ಗೆ ಖಾಳಜಿವಹಿಸಬೇಕು ಎಂದು ತಹಶೀಲ್ದಾರ್ ಎಂ.ರೇಣುಕಾ ಅವರು ಹೇಳಿದರು.
ಅವರು ಸಮೀಪದ ನಂ.10 ಮುದ್ದಾಪುರ ಗ್ರಾಮದಲ್ಲಿ ಕಂಪ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಹಮ್ಮಿಕೊಂಡ ಎನ್‍ಎಸ್‍ಎಸ್ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಗಾಂಧೀಜಿಯವರ ಕನಸಿನಂತೆ ದೇಶವನ್ನು ಸ್ವಚ್ಚಗೊಳಿಸಬೇಕಾಗಿದೆ.
ಎನ್.ಎಸ್.ಎಸ್.ಕ್ಯಾಂಪ್ ಮುದ್ದಾಪುರದಲ್ಲಿ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಂಡು ಕಾರ್ಯಪ್ರವೃತ್ತಿಯಾಗಿವುದು ಸ್ಲಾಗನೀಯ ಎಂದರು. ಪ್ರಾಚಾರ್ಯ ಅಮರೇಶ್ ಅಧ್ಯಕ್ಷತೆವಹಿಸಿದ್ದರು. ಅವರು ಮಾತನಾಡಿ ದತ್ತು ಪಡೆದು ಈ ಗ್ರಾಮದಲ್ಲಿ ಸ್ವಚ್ಚತಾ ಅಭಿಯಾನ ಆರಂಭಿಸಲಾಗಿದೆ. ಪ್ರತಿಯೊಬ್ಬರು ಸ್ವಚ್ಚತೆ ಕಡೆ ಹೆಚ್ಚಿನ ಜಾಗೃತಿ ತೋರಬೇಕಿದೆ. ಫೆ.11ರಿಂದ 17ವರೆಗೆ ಶಿಬಿರ ಹಮ್ಮಿಕೊಳ್ಳಲಾಗಿದ್ದು ಸ್ವಚ್ಚ ಭಾರತ್ ನಿರ್ಮಾಣದ ಬಗ್ಗೆ ಜಾಗೃತಿ, ಯೋಗ, ಧ್ಯಾನ, ಉತ್ತಮ ನಾಯಕತ್ವದ ಬಗ್ಗೆ ಜನತೆಯಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಸಿಪಿಐ ಡಿ.ಹುಲುಗಪ್ಪರು ಮಾತನಾಡಿ ಗ್ರಾಮಸ್ಥರು ಸ್ವಚ್ಚತೆ ಬಗ್ಗೆ ಮನಸ್ಸು ಮಾಡಬೇಕು ಎಂದು ಜಾಗೃತಿ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ಪಿಎಸ್‍ಐ ಕೆ.ಬಿ.ವಾಸುಕುಮಾರ್, ಗ್ರಾಪಂ ಅಧ್ಯಕ್ಷೆ ಎಂ.ಎಸ್.ಮಾಂತಮ್ಮ, ಉಪಾಧ್ಯಕ್ಷ ವೈ.ಉಮೇಶ್, ಪಿಡಿಒ ಬೀರಲಿಂಗ, ಮುಖ್ಯಶಿಕ್ಷಕಿ ಲಕ್ಷ್ಮೀದೇವಿ, ಶಿಬಿರಾಧಿಕಾರಿ ಥಾವರ್ಯ ನಾಯ್ಕ, ಸಹ ಶಿಬಿರಾಧಿಕಾರಿ ಅರುಣ್‍ಕುಮಾರ್, ಮಹಿಳಾ ಶಿಬಿರಾರ್ಥಿಗಳ ಸಹಾಯಕಿ ಬಿ.ಎಸ್.ಶಬಾನ, ಉಪನ್ಯಾಸಕರಾದ ಪಾಲಾಕ್ಷಿಗೌಡ, ಆನಂದ, ಮಲ್ಲಿಕಾರ್ಜುನ, ರುದ್ರೇಶ್ ಸೇರಿದಂತೆ ಮುಖಂಡರು ಹಾಗೂ ವಿದ್ಯಾರ್ಥಿಗಳು ಪಾಳ್ಗೊಂಡಿದ್ದರು.