ಹರಿಹರ
ಕಾರ್ಗಿಲ್ ಕಂಪನಿಯಲ್ಲಿ ಸ್ಥಳೀಯರಿಗೆ ಆಧ್ಯತೆ ನೀಡಿಲ್ಲ. ಸ್ಥಳಿಯರನ್ನು ಕೆಲಸಕ್ಕೆ ತೆಗೆದುಕೊಳ್ಳುವವರೆಗೂ ಉಗ್ರ ಹೋರಾಟ ಮಾಡುವುದಾಗಿ ಶಾಸಕ ಎಸ್.ರಾಮಪ್ಪ ಹೇಳಿದರು.
ನಗರದ ರಚನಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮತನಾಡಿದ ಅವರು, ತಾಲೂಕಿನ ಬೆಳ್ಳೂಡಿ ಗ್ರಾಮದ ಹೊರವಲಯದಲ್ಲಿರುವ ಕಾರ್ಗಿಲ್ ಕಂಪನಿಯ ಪ್ರಾರಂಭಕ್ಕೆ ಜಮ್ಮಿನ್ನು ನೀಡಿದವರು ಸ್ಥಳಿಯ ಜನರಾಗಿದ್ದು, ಅವರಿಗೆ ಮೊದಲು ಕೆಲಸಕ್ಕೆ ಸೇರಿಸಿಕೊಳ್ಳಬೇಕು. ಈ ಕಂಪನಿಯಲ್ಲಿ ನಮ್ಮ ರಾಜ್ಯಕಿಂತ ಬೇರೆ ಬೇರೆ ರಾಜ್ಯದವರೆ ಕಾಯಂ ಕೆಲಸಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ನಮ್ಮ ಜಾಗ, ನಮ್ಮ ಅನ್ನ ತಿನ್ನುತ್ತಿರುವ ಕಂಪನಿಯವರೆ ಸ್ಥಳಿಯರಿಗೆ ಉದ್ಯೋಗ ಅವಕಾಶಗಳನ್ನು ನೀಡಿ, ಇಲ್ಲದಿದ್ದರೆ ಕಂಪನಿಯ ಮುಂದೆ ಪ್ರತಿಭಟನೆ ಮಾಡುವುದಾಗಿ ಹೇಳಿದರು.
ತಾಲೂಕಿನ ಅಗಸನಕಟ್ಟೆ ಕೆರೆ ಮತ್ತು ಕೊಮರನಹಳ್ಳಿ ಕೆರೆಗಳಲ್ಲಿನ ಹೂಳನ್ನು ತೆಗೆಸಿಕೊಡುವಂತೆ ಭರವಸೆ ನೀಡಿದ್ದರು. ಆದರೆ ಪ್ರಸ್ತುತ ದಿನದಲ್ಲಿ ಕಂಪನಿಯ ಮುಖ್ಯಸ್ಥರು ಇಲ್ಲಸಲ್ಲದ ಕಾರಣಗಳನ್ನು ನೀಡಿ, ಕೆಲಸಗಳನ್ನು ಮಾಡಿಕೊಡದೆ ಸತಾಯಿಸುತ್ತಿದ್ದಾರೆ. ಈ ಕಾರಣದಿಂದ ಇನ್ನು ಕೆಲವೇ ದಿನಗಳಲ್ಲಿ ಕಂಪನಿಯ ಮುಂಭಾಗ, ಸಾವಿರಾರು ಜನರ ನೇತೃತ್ವದಲ್ಲಿ ಉಗ್ರ ಪ್ರತಿಭಟನೆಯನ್ನು ನಡೆಸುವುದಾಗಿ ಹೇಳಿದರು.
ನಾನು ಅಧಿಕಾರಕ್ಕೆ ಬಂದಮೇಲೆ ಎಷ್ಟು ಕೆಲಸ ಮಾಡಿಸಿದ್ದೇನೆ ಎಂದು ನಾನು ಹೇಳುತ್ತೇನೆ, ಮಾಜಿ ಶಾಸಕ ಎಚ್.ಎಸ್ ಶಿವಶಂಕರ್ ತಮ್ಮ ಐದು ವರ್ಷದ ಅವದಿಯಲ್ಲಿ ತಂದ 350 ಕೋಟಿ ಅನುದಾನವನ್ನು ಎಲ್ಲಿ ಹಾಕಿದ್ದಾರೆ ಮೊದಲು ಇದಕ್ಕೆ ಉತ್ತರ ನೀಡಲಿ ಎಂದು ಶಾಸಕ ಎಸ್.ರಾಮಪ್ಪ ಪ್ರಶ್ನಿಸಸಿದರು.
ನಾನು ಶಿವಶಂಕರ್ ಅವರ ಅನುದಾನವನ್ನು ಬಳಸುತ್ತಿಲ್ಲ, ಸರ್ಕಾರ ನೀಡಿರುವ ಅನುದಾನದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದೇನೆ. ಮಾಜಿ ಶಾಸಕ ವೈ. ನಾಗಪ್ಪ ಅವರ ಆಡಳಿತ ಅವದಿಯಲ್ಲಿ ಜಾರಿಯಾದ ಅನುದಾನವನ್ನು, ಮಾಜಿ ಶಾಸಕ ಬಿ.ಪಿ ಹರಿಶ್ ಅವದಿಯಲ್ಲಿ ಕಾಮಗಾರಿಗಳು ನಡೆದವು. ಅದೇ ರೀತಿ ಹರೀಶ್ ಅವರ ಆಡಳಿತದಲ್ಲಿ ಜಾರಿಯಾದ ಕಾಮಗಾರಿಗಳು ಶಿವಶಂಕರ್ ಆಡಳಿತದಲ್ಲಿ ನಡೆದಿವೆ. ಅದೇ ರೀತಿ ಶಿವಶಂಕರ್ ಆಡಳಿತದಲ್ಲಿ ಸಲ್ಲಿಸಿದ ಪ್ರಸ್ತಾವನೆಗಳ ಕಾಮಗಾರಿಗಳನ್ನು ನಮ್ಮ ಅಧಿಕಾರದ ಅವದಿಯಲ್ಲಿ ನಡೆಸುತ್ತಿದ್ದೇವೆ. ಇದು ಲೋಕರೂಡಿಯಾಗಿದ್ದು, ಯಾರೇ ಶಾಸಕರಾದರೂ ಇದೇ ಕೆಲಸ ಮಾಡಬೇಕಾಗುತ್ತದೆ ಎಂದು ಉತ್ತರಿಸಿದರು.
ನಾನು ನನ್ನ ಕ್ಷೇತ್ರದಲ್ಲಿ ಮಾಡುತ್ತಿರುವ ಅಭಿವೃದ್ಧಿ ಕೆಲಸಗಳ ಸಂಪೂರ್ಣ ಮಾಹಿತಿಯನ್ನು ಶಿವಶಂಕರ್ ಅವರಿಗೆ ಸರಿಯಾದ ವೇದಿಕೆಯಲ್ಲಿ ತಕ್ಕ ಉತ್ತರವನ್ನು ಕೊಡುತ್ತೇನೆ. ತಾಲೂಕಿನ ಸುತ್ತಮುತ್ತಲಿನ ತಾಲೂಕುಗಳಾದ ಹೊನ್ನಾಳಿ, ಹರಪನಹಳ್ಳಿ ಹಾಗೂ ರಾಣೆಬೆನ್ನೂರಿನಲ್ಲಿ ಮರಳು ಮಾರಾಟಕ್ಕೆ ಸರ್ಕಾರ ಪಾಸ್ ಗಳನ್ನು ನೀಡಿದೆ. ಆದರೆ ನಮ್ಮ ತಾಲೂಕಿನಲ್ಲಿ ಪಾಸ್ ನೀಡಲು ತಾಂತ್ರಿಕ ಸಮಸ್ಯೆ ಇರುವ ಕಾರಣ ತಡವಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಪಾಸ್ ದೊರೆಯುವಂತೆ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ ಎಂದು ಭರವಸೆ ನಿಡಿದರು.
ಪತ್ರಿಕಾಗೋಷ್ಠಿಯಲ್ಲಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್.ಬಿ ಹನುಮಂತಪ್ಪ, ನಗರಸಭೆ ಸದಸ್ಯ ಕೆ. ಮರಿದೇವ್ ಹಾಗೂ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ







