ಹಗರಿಬೊಮ್ಮನಹಳ್ಳಿ:

ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಸರ್ಕಾರಗಳು ಲಾಕ್‍ಡೌನ್ ಆದೇಶವಿದ್ದರೂ, ಕೆಲವರು ಅನಗತ್ಯವಾಗಿ ರಸ್ತೆಗಿಳಿದು ಸಾಮಾಜಿಕ ಸ್ವಸ್ಥವನ್ನು ಕೆಣಕುತ್ತಿದ್ದಾರೆ. ಅನಗತ್ಯ ಓಡಾಟ ನಿಯಂತ್ರಿಸಲು ಪಟ್ಟಣದ ಬೈಪಾಸ್ ರಸ್ತೆಗೆ ಬ್ಯಾರಿಕೇಡ್‍ಗಳನ್ನು ಶನಿವಾರ ಅಳವಡಿಸಲಾಗಿದೆ.
ಹಳೇ ಊರಿನಿಂದ ಹೊಸಪೇಟೆ ರಸ್ತೆಗೆ ಕೂಡಿಕೊಳ್ಳುವ ಬೈಪಾಸ್ ರಸ್ತೆ, ತಾಲೂಕಿನ ಹಂಪಸಾಗರ, ಬ್ಯಾಸಗಿದೇರಿ, ಬನ್ನಿಕಲ್ಲು, ಗದ್ದಿಕೆರೆ ಸೇರಿದಂತೆ 20ಕ್ಕೂ ಹೆಚ್ಚು ಹಳ್ಳಿಗಳಿಂದ ಪಟ್ಟಣಕ್ಕೆ ಆಗಮಿಸುವ ಸವಾರರು, ಬಸವೇಶ್ವರ ಬಜಾರ್ ಸೇರಿದಂತೆ ಹೊಸಪೇಟೆ, ಕೊಟ್ಟೂರು, ಕೂಡ್ಲಿಗಿಗಳಿಗೆ ನೇರವಾಗಿ ಶ್ರೀಹಾಲಸ್ವಾಮಿ ಮಠದ ಮುಂದಿನಿಂದ ಬೈಪಾಸ್ ರಸ್ತೆಯ ಮೂಲಕ ಹಾದು ಹೋಗುತಿದ್ದರು.
ಲಾಕ್‍ಡೌನ್ ನಿಮ್ಮಿತ್ತ ಪೊಲೀಸ್ ಸಿಬ್ಬಂದಿಗೆ ಜನತೆಯನ್ನು ನಿಯಂತ್ರಿಸಲು ಸಾಧ್ಯವಾಗದೆ, ಸವಾರರು ಪೊಲೀಸರ ಕಣ್ಣು ತಪ್ಪಿಸಿ ಮುಖ್ಯರಸ್ತೆ, ಬಸವೇಶ್ವರ ಬಜಾರ್ ಇನ್ನೂ ಅನೇಕ ಕಡೆ ಕದ್ದುಮುಚ್ಚಿ ಅನಗತ್ಯವಾಗಿ ಓಡಾಡುವುತಿದ್ದರು. ಇದರಿಂದ ತಾಲೂಕು ಆಡಳಿತಕ್ಕೆ ತಲೆನೋವು ಆಗಿ ಪರಿಣಾಮಿಸಿತ್ತು. ಆದ್ದರಿಂದ ಒಂದು ರಸ್ತೆಯನ್ನು ಸಂಪೂರ್ಣ ಬಂದ್ ಮಾಡಿದರೆ, ಸಾರ್ವಜನಿಕರ ಓಡಾಟವನ್ನು ನಿಯಂತ್ರಿಸಬಹುದೆನ್ನುವ ಹಿನ್ನೆಲೆಯಲ್ಲಿ ಈ ಬೈಪಾಸ್ ರಸ್ತೆಯನ್ನು ಸಂಪೂರ್ಣ ಬಂದ್ ಬ್ಯಾರಿಕೇಡ್ ಅಳವಡಿಸಿ ಬಂದ್ ಮಾಡಲಾಗಿದೆ. ಈ ಕ್ರಮದಿಂದ ಜನರ ಓಡಾಟ ನಿಯಂತ್ರಿಸಲು ಸುಲಭವಾಗಿದೆ ಎಂದು ಪೊಲೀಸ್ ಸಿಬ್ಬಂದಿಯವರು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
