ತುಮಕೂರು ಲೋಕಸಭಾ ಕ್ಷೇತ್ರ:ಹೊತ್ತಿಳಿದಂತೆ ಬಿರುಸಾದ ಮತದಾನದ ಪ್ರಮಾಣ

ತುಮಕೂರು

      ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಗುರುವಾರ ನಡೆದ “2019ರ ಲೋಕಸಭಾ ಚುನಾವಣೆ”ಯಲ್ಲಿ ಹೊತ್ತೇರಿದಂತೆ ಮಂದಗತಿಯಲ್ಲಿದ್ದ ಮತದಾನ ಪ್ರಮಾಣವು, ಹೊತ್ತಿಳಿದಂತೆ ಬಿರುಸಾಗಿ ನಡೆದಿರುವುದು ಸ್ವಾರಸ್ಯಕರವಾಗಿದೆ.

      ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಒಟ್ಟು 8 ವಿಧಾನಸಭಾ ಕ್ಷೇತ್ರಗಳು ಇವೆ. ಗುರುವಾರ ಬೆಳಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭಗೊಂಡು, ಸಂಜೆ 6 ಗಂಟೆಗೆ ಮುಕ್ತಾಯಗೊಂಡಿತು. ಪ್ರತಿ 2 ಗಂಟೆಗಳಿಗೊಮ್ಮೆ ಮತದಾನ ಪ್ರಮಾಣವನ್ನು ಲೆಕ್ಕಹಾಕಲಾಗಿದೆ. ಆ ಅಂಕಿ ಅಂಶಗಳ ಪ್ರಕಾರ ಮಧ್ಯಾಹ್ನದವರೆಗೂ ಮತದಾನ ಪ್ರಮಾಣ ಮಂದಗತಿಯಲ್ಲಿದೆ. ಮಧ್ಯಾಹ್ನ 3 ಗಂಟೆಯಲ್ಲಿ ಇದ್ದ ಮತದಾನ ಪ್ರಮಾಣ ಶೇ. 54.03 ರಷ್ಟು ಮಾತ್ರ. ಮಧ್ಯಾಹ್ನ 3 ಗಂಟೆ ಬಳಿಕ ಸಂಜೆ 6 ಗಂಟೆಯವರೆಗೆ ಮತದಾನವು ಬಿರುಸುಗೊಂಡಿದ್ದು, ಮತದಾನದ ಪ್ರಮಾಣ ಶೇ.77.03 ರಷ್ಟು ತಲುಪಿದೆ.

      ಇಡೀ ಲೋಕಸಭಾ ಕ್ಷೇತ್ರದಲ್ಲಿ ಬೆಳಗ್ಗೆ 9 ಗಂಟೆಯಲ್ಲಿ ಒಟ್ಟಾರೆ ಸರಾಸರಿ ಶೇ.8.15 ರಷ್ಟು ಮಾತ್ರ ಮತದಾನ ಆಗಿತ್ತು. 11 ಗಂಟೆ ಹೊತ್ತಿಗೆ ಶೇ.22.80 ರಷ್ಟು ಆಯಿತು. ಮಧ್ಯಾಹ್ನ 1 ಗಂಟೆಯಲ್ಲಿ ಕೇವಲ ಶೇ. 37.94 ರಷ್ಟಿತ್ತು. ಆವರೆಗೂ ಮತದಾನ ಮಂದಗತಿಯಲ್ಲೇ ಸಾಗಿತ್ತು. ಮಧ್ಯಾಹ್ನಾನಂತರ ಮತದಾನ ಚುರುಕು ಪಡೆದುಕೊಂಡಿದೆ. ಮಧ್ಯಾಹ್ನ 3 ಗಂಟೆಯಲ್ಲಿ ಶೇ. 54.03 ಕ್ಕೆ ಏರಿತು. ಸಂಜೆ 5 ಗಂಟೆ ಹೊತ್ತಿಗೆ ಶೇ. 70.24 ಕ್ಕೆ ತಲುಪಿದೆ. ಸಂಜೆ 6 ಗಂಟೆಗೆ ಮತದಾನ ಪ್ರಕ್ರಿಯೆ ಕೊನೆಗೊಳ್ಳುವ ಹೊತ್ತಿಗೆ ಶೇ.77.03 ರಷ್ಟು ಮತದಾನ ಆಗಿದೆ.ಅಂದರೆ, ಒಟ್ಟು 16,08,000 ಮತಗಳ ಪೈಕಿ 12,38,624 ಮತಗಳು ಚಲಾವಣೆಯಾಗಿವೆ.

ವಿಧಾನಸಭಾ ಕ್ಷೇತ್ರವಾರು ವಿವರ

     ತುಮಕೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ 8 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿ 2 ಗಂಟೆಗಳಿಗೊಮ್ಮೆ ದಾಖಲಾಗಿರುವ ಮತದಾನ ಪ್ರಮಾಣದಲ್ಲಿ ಯಾವ ರೀತಿ ಏರಿಕೆಯಾಯಿತೆಂಬ ಅಂಕಿಅಂಶದ ವಿವರ ಈ ಕೆಳಕಂಡಂತಿದೆ:-

1)ಚಿಕ್ಕನಾಯಕನಹಳ್ಳಿ ಕ್ಷೇತ್ರ:- ಬೆಳಗ್ಗೆ 9 ರಲ್ಲಿ ಶೇ.5.29, ಬೆಳಗ್ಗೆ 11 ರಲ್ಲಿ ಶೇ.25.19, ಮಧ್ಯಾಹ್ನ 1 ರಲ್ಲಿ ಶೇ.33.39, ಮಧ್ಯಾಹ್ನ 3 ಗಂಟೆಯಲ್ಲಿ ಶೇ.54.33, ಸಂಜೆ 5 ಗಂಟೆಯಲ್ಲಿ ಶೇ. 67.91, ಅಂತಿಮವಾಗಿ ಶೇ.78.12.

2)ತಿಪಟೂರು ಕ್ಷೇತ್ರ:- ಬೆಳಗ್ಗೆ 9 ರಲ್ಲಿ ಶೇ.6.8, ಬೆಳಗ್ಗೆ 11 ರಲ್ಲಿ ಶೇ.20.36, ಮಧ್ಯಾಹ್ನ 1 ರಲ್ಲಿ ಶೇ.39.01, ಮಧ್ಯಾಹ್ನ 3 ಗಂಟೆಯಲ್ಲಿ ಶೇ.56.09, ಸಂಜೆ 5 ಗಂಟೆಯಲ್ಲಿ ಶೇ. 72.04, ಅಂತಿಮವಾಗಿ ಶೇ.80.27.

3)ತುರುವೇಕೆರೆ ಕ್ಷೇತ್ರ:-ಬೆಳಗ್ಗೆ 9 ರಲ್ಲಿ ಶೇ.6, ಬೆಳಗ್ಗೆ 11 ರಲ್ಲಿ ಶೇ.23, ಮಧ್ಯಾಹ್ನ 1 ರಲ್ಲಿ ಶೇ.41.26, ಮಧ್ಯಾಹ್ನ 3 ಗಂಟೆಯಲ್ಲಿ ಶೇ.58.99, ಸಂಜೆ 5 ಗಂಟೆಯಲ್ಲಿ ಶೇ. 72.92, ಅಂತಿಮವಾಗಿ ಶೇ.80.

4)ತುಮಕೂರು ನಗರ ಕ್ಷೇತ್ರ:- ಬೆಳಗ್ಗೆ 9 ರಲ್ಲಿ ಶೇ.10.59, ಬೆಳಗ್ಗೆ 11 ರಲ್ಲಿ ಶೇ.21.54, ಮಧ್ಯಾಹ್ನ 1 ರಲ್ಲಿ ಶೇ.36.03, ಮಧ್ಯಾಹ್ನ 3 ಗಂಟೆಯಲ್ಲಿ ಶೇ.47.14, ಸಂಜೆ 5 ಗಂಟೆಯಲ್ಲಿ ಶೇ. 60.84, ಅಂತಿಮವಾಗಿ ಶೇ.65.42.

5)ತುಮಕೂರು ಗ್ರಾಮಾಂತರ ಕ್ಷೇತ್ರ:- ಬೆಳಗ್ಗೆ 9 ರಲ್ಲಿ ಶೇ.9.56, ಬೆಳಗ್ಗೆ 11 ರಲ್ಲಿ ಶೇ.26.07, ಮಧ್ಯಾಹ್ನ 1 ರಲ್ಲಿ ಶೇ.37.96, ಮಧ್ಯಾಹ್ನ 3 ಗಂಟೆಯಲ್ಲಿ ಶೇ.60.88, ಸಂಜೆ 5 ಗಂಟೆಯಲ್ಲಿ ಶೇ. 75.41, ಅಂತಿಮವಾಗಿ ಶೇ.81.87.

6)ಕೊರಟಗೆರೆ ಕ್ಷೇತ್ರ:-ಬೆಳಗ್ಗೆ 9 ರಲ್ಲಿ ಶೇ.4, ಬೆಳಗ್ಗೆ 11 ರಲ್ಲಿ ಶೇ.20, ಮಧ್ಯಾಹ್ನ 1 ರಲ್ಲಿ ಶೇ.37.41, ಮಧ್ಯಾಹ್ನ 3 ಗಂಟೆಯಲ್ಲಿ ಶೇ.55.26, ಸಂಜೆ 5 ಗಂಟೆಯಲ್ಲಿ ಶೇ. 73.21, ಅಂತಿಮವಾಗಿ ಶೇ.79.67.

7)ಗುಬ್ಬಿ ಕ್ಷೇತ್ರ:-ಬೆಳಗ್ಗೆ 9 ರಲ್ಲಿ ಶೇ.8.38, ಬೆಳಗ್ಗೆ 11 ರಲ್ಲಿ ಶೇ.23.39, ಮಧ್ಯಾಹ್ನ 1 ರಲ್ಲಿ ಶೇ.41.71, ಮಧ್ಯಾಹ್ನ 3 ಗಂಟೆಯಲ್ಲಿ ಶೇ.50.61, ಸಂಜೆ 5 ಗಂಟೆಯಲ್ಲಿ ಶೇ. 73.46, ಅಂತಿಮವಾಗಿ ಶೇ.80.29.

8)ಮಧುಗಿರಿ ಕ್ಷೇತ್ರ:-ಬೆಳಗ್ಗೆ 9 ರಲ್ಲಿ ಶೇ.14, ಬೆಳಗ್ಗೆ 11 ರಲ್ಲಿ ಶೇ.20, ಮಧ್ಯಾಹ್ನ 1 ರಲ್ಲಿ ಶೇ.38.39, ಮಧ್ಯಾಹ್ನ 3 ಗಂಟೆಯಲ್ಲಿ ಶೇ.51.04, ಸಂಜೆ 5 ಗಂಟೆಯಲ್ಲಿ ಶೇ. 69.45, ಅಂತಿಮವಾಗಿ ಶೇ.74.32.

ಪುರುಷರ ಮೇಲುಗೈ

    ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಒಟ್ಟಾರೆ ಶೇ. 77.03 ರಷ್ಟು ಮತದಾನ ಆಗಿದೆ. ಪುರುಷರ ಮತದಾನ ಪ್ರಮಾಣವು ಶೇ. 78.36 ರಷ್ಟಿದ್ದರೆ, ಮಹಿಳೆಯರ ಮತದಾನದ ಪ್ರಮಾಣವು ಶೇ. 75.71 ರಷ್ಟಿದೆ. ಇತರೆಯವರ ಮತದಾನದ ಪ್ರಮಾಣವು ಶೇ. 11.67 ರಷ್ಟಿದೆ. ಮತದಾನ ಪ್ರಮಾಣದಲ್ಲಿ ಪುರಷರು ಮೇಲುಗೈ ಸಾಧಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link