ಹಾವೇರಿ :
ಬಿಜೆಪಿ ಪಕ್ಷದಲ್ಲಿರುವ ಮಾದಿಗ ಸಮಾಜದ ನಾಯಕರು ಸಮಾಜದ ಎಲ್ಲಾ ಜನರು ಬಿಜೆಪಿ ಪರವಾಗಿದ್ದಾರೆ. ಮಾದಿಗ ಜನರ ಸಂಪೂರ್ಣ ಬೆಂಬವಿ ವಿದೆ ಎಂದು ಹೇಳಿಕೆ ನೀಡಿರುವುದು ಸಮಾಜದ ಜನರಿಗೆ ಆಘಾತವನ್ನುಂಟು ಮಾಡಿದ್ದು, ಮಾದಿಗ ಸಮಾಜದ ಬೆಂಬಲ ಕಾಂಗ್ರೇಸ್ ಪಕ್ಷಕ್ಕೆ ಎಂದು ಮಾದಿಗ ಸಮಾಜದ ಮುಖಂಡ ಮಾಜಿ ತಾ.ಪಂ ಅಧ್ಯಕ್ಷ ನೀಲಕಂಟಪ್ಪ ಕೂಸನೂರ ಸ್ಪಷ್ಟಪಡಿಸಿದರು.
ನಗರದ ಖಾಸಗಿ ಹೊಟಲಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದಲಿತರಲ್ಲಿರುವ ಎಡಗೈ ಮಾದಿಗ ಜನಾಂಗ ಉದ್ದಾರ ಕಂಡಿದ್ದು ಕಾಂಗ್ರಸ್ ಪಕ್ಷದಲ್ಲಿ ಬಿಜೆಪಿ ಅಖಂಡ ಧಾರವಾಡ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಬಿಜೆಪಿ ಪಕ್ಷ ಮಾದಿಗೆ ಸಮಾಜಕ್ಕೆ ಹೇಳುವಂತಹ ಯಾವುದೇ ಕೊಡುಗೆ ನೀಡಿಲ್ಲ. ದಲಿತರ ರಕ್ಷಣೆ ಕಾಂಗ್ರೇಸ್ ಪಕ್ಷದಿಂದ ಮಾತ್ರ ಸಾಧ್ಯ ಸಮಾಜದ ಮಹಿಳೆಯರು, ಯುವಕರು, ನಿಮ್ಮ ಮತವನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡಬೇಕು ಎಂದು ಮನವಿ ಮಾಡಿದರು.
ಡಿಎಸ್‍ಎಸ್ ರಾಜ್ಯ ಸದಸ್ಯ ಉಡಚಪ್ಪ ಮಾಳಗಿ ಮೀಸಲಾತಿ ರದ್ದುಪಡಿಸುವ ಕೂಗು ಬಿಜೆಪಿಯಿಂದ ಈಗಾಗಲೇ ಹೊರಬಂದಿದೆ ಇವರಿಂದ ದಲಿತರ ರಕ್ಷಣೆ ಅಸಾಧ್ಯ. ಅಲ್ಲದೇ ಬಾಬಾ ಸಾಹೇಬ ಅಂಬೇಡ್ಕರ ಪ್ರತಿಭೆಯನ್ನೇ ಕೆಡುವುದಾಗಿ ಹೇಳಿದ, ಸಂವಿಧಾನ ಬದಿಲಿಸಲು ಹೊರಟಿರುವ ದಲಿತ ವಿರೋಧಿ ಬಿಜೆಪಿ ಪಕ್ಷಕ್ಕೆ ಮಾದಿಗ ಜನಾಂಗ ಎಂದು ಬೆಂಬಲ ನೀಡಲ್ಲ ನಮ್ಮ ಬೆಂಬಲ ಏನೇ ಇದ್ದರೂ ಕಾಂಗ್ರೆಸ ಪಕ್ಷಕ್ಕೆ ಮಾತ್ರ ಎಂದು ಹೇಳಿದರು.
ಡಿಎಸ್‍ಎಸ್ ರಾಜ್ಯ ಮುಖಂಡ ಹೊನ್ನಪ್ಪ ತಗಡಿನಮನಿ ಜಿಲ್ಲೆಯಲ್ಲಿ ಮಾದಿಗ ಸಮಾಜದ ಬಿಜೆಪಿ ನಾಯಕರು ಚುನಾವಣೆ ಸಮೀಪ ಸಮಯದಲ್ಲಿ ಇಲ್ಲ ಸಲ್ಲದ ಹೇಳಿಕೆ ನೀಡಿ ಸಮಾಜದ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಸಮಾಜದ ಜನರಿಗೆ ಇವರ ಮೋಸದಾಟ ತಿಳಿದು ಬಂದಿದೆ. ಬಿಜೆಪಿ ಪರ ಮತ ಕೇಳಲು ಬಂದರೆ ಇವರನ್ನು ನಮ್ಮ ಜನರು ಕಟ್ಟಿಹಾಕುತ್ತಾರೆ. ದಲಿತ ವಿರೋಧಿ ಪಕ್ಷಕ್ಕೆ ದಿಕ್ಕಾರ ಕೂಗುತ್ತಾರೆ ಮಾದಿಗ ಸಮಾಜ ಕಾಂಗ್ರೆಸ್ ಪರವಾಗಿದೆ ತಿಳಿಸಿದರು.
ಮುಖಂಡ ಸಂಜಯ ಗಾಂಧಿ ಸಂಜೀವಣ್ಣನವರ ಬಿಜೆಪಿ ಪಕ್ಷದಿಂದ ಮಾದಿಗ ಸಮಾಜಕ್ಕೆ ಯಾವುದೇ ಲಾಭವಿಲ್ಲ. ಪುರೋಹಿತಷಾಹಿ ಬಿಜಿಪಿ ಪಕ್ಷಕ್ಕೆ ಗೊತ್ತಿರುವುದು ಕೋಮುಗಲಭೆ ಹಚ್ಚಿ ದೇಶದಲ್ಲಿ ಜಾತಿ ವಿಷ ಬೀಜ ಬಿತ್ತಿ ಮೇಳು ಕೀಳು ಎಂಬ ಭಾವನೆ ಹುಟ್ಟು ಹಾಕಿ ಅಧಿಕಾರ ಮಾಡುವ ಕೆಲಸ ಮಾತ್ರ ಅವರಿಮದ ದಲಿತರ ಉದ್ದಾರಕ್ಕಾಗಿ ಭಾವನೆಗಳೇ ಇಲ್ಲ ಎಂದು ಕಿಡಿಕಾರಿದರು.
ಎಸ್.ಸಿ ಘಟಕದ ಕಾಂಗ್ರೇಸ್ ಅಧ್ಯಕ್ಷ ಎಸ್. ಎಪ್ ಮನಿಕಟ್ಟಿ ಮಾತನಾಡಿ ಬಿಜೆಪಿ ಪಕ್ಷದವರಿಗೆ ಸಂವಿಧಾನದ ಬಗ್ಗೆ ಜ್ಞಾನವಿಲ್ಲ. ದೇಶದಲ್ಲಿ ಇವರಿಂದ ದಲಿತರಿಗೆ ರಕ್ಷಣೆ ಇಲ್ಲ. ದಲಿತ ಮಾದಿಗ ಜನರು ಉದ್ದಾರ ಮಾಡಲು ಕಾಂಗ್ರೆಸ್ ಪಕ್ಷ ಅನೇಕ ಜನಪರ ಕೆಲಸ ಮಾಡಿದೆ ಹರಿಜನ ಕಲ್ಯಾಣಕ್ಕಾಗಿ ಸಾಕಷ್ಟು ಅನುದಾನ ನೀಡಿದೆ. ಇದು ಬಿಜೆಪಿಯಿಂದ ಸಾಧ್ಯವಿಲ್ಲ ಮಾದಿಗ ಸಮಾಜದ ಜನ ಕಾಂಗ್ರೆಸ್ ಪರ ಬೆಂಬಲಕ್ಕೆ ನಿಂತು ಹಾವೇರಿ-ಗದಗ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಡಿ.ಆರ್ ಪಾಟೀಲ್ ಗೆಲುವಿಗೆ ಸಾಕ್ಷಿಯಾಗಲಿದ್ದಾರೆ ಎಂದು ಹೇಳಿದರು. ಈ ಸಮಯದಲ್ಲಿ ಜಿಲ್ಲಾ ಸಂಚಾಲಕರಾದ ಮಾಲತೇಶ ಯಲ್ಲಾಪೂರ, ಡಿಎಸ್‍ಎಸ್ ಜಿಲ್ಲಾಧ್ಯಕ್ಷ ಹನುಮಂತಪ್ಪ ದೊಡ್ಡಮನಿ ಅನೇಕರಿದ್ದರು.
