ಅಯೋಧ್ಯೆ ಪ್ರಕರಣ ತೀರ್ಪು : ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆಗೆ ಕ್ರಮ ಕೈಗೊಳ್ಳಿ

ಚಿತ್ರದುರ್ಗ:

     ಅಯೋಧ್ಯೆ ಸೂಕ್ಷ್ಮ ವಿವಾದ ಕುರಿತು ಸುಪ್ರೀಂಕೋರ್ಟ್‍ನಿಂದ ತೀರ್ಪು ಏನೆ ಬರಲು ದೇಶದ ಜನ ಶಾಂತಿ ಕಾಪಾಡಬೇಕಾಗಿರುವುದರಿಂದ ಸರ್ಕಾರ ದಿಟ್ಟ ಕ್ರಮ ಕೈಗೊಳ್ಳುವಂತೆ ಶಾಂತಿ ಮತ್ತು ನ್ಯಾಯಕ್ಕಾಗಿ ನಾವು ಸಂಘಟನೆಯವರು ಗುರುವಾರ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

      ಬಾಬ್ರಿ ಮಸೀದಿ ಮತ್ತು ರಾಮಂದಿರ ವಿವಾದ ಹಲವಾರು ವರ್ಷಗಳಿಂದಲೂ ನಡೆಯುತ್ತಿರುವುದನ್ನು ಕೆಲವರು ರಾಜಕೀಯ ಲಾಭ ಮಾಡಿಕೊಳ್ಳುತ್ತ ಜಾತಿ ಧರ್ಮಗಳ ನಡುವೆ ಕೋಮು ಭಾವನೆ ಕೆರಳಿಸಿ ದ್ವೇಷ ಬಿತ್ತುತ್ತಿರುವುದರ ಕುರಿತು ನಾವುಗಳು ಈಗಾಗಲೇ ಜಾಗೃತರಾಗಿದ್ದೇವೆ. ಹಿಂದೂ-ಮುಸ್ಲಿಂರು ಕೂಡ ತೀರ್ಪು ಏನೆ ಬರಲಿ ಸ್ವಾಗತಿಸಿ ಯಾವುದೇ ಕಾರಣಕ್ಕೂ ದೇಶದಲ್ಲಿ ಶಾಂತಿ ಕದಡುವುದಕ್ಕೆ ಅವಕಾಶ ಕೊಡಬಾರದು ಅದಕ್ಕಾಗಿ ಬಿಗಿ ಬಂದೊಬಸ್ತ್ ವಹಿಸುವಂತೆ ಅಪರ ಜಿಲ್ಲಾಧಿಕಾರಿ ಮೂಲಕ ಸರ್ಕಾರವನ್ನು ಆಗ್ರಹಿಸಿದರು.

     ಸುಪ್ರೀಂಕೋರ್ಟ್ ತೀರ್ಪನ್ನು ದೃಶ್ಯ ಮಾಧ್ಯಮಗಳು ವೈಭವೀಕರಿಸುವ ಮೂಲಕ ದೇಶದ ಜನರಲ್ಲಿ ಪ್ರಚೋಧನೆಯುಂಟು ಮಾಡುವುದರ ವಿರುದ್ದವೂ ಕಡಿವಾಣ ಹಾಕಬೇಕಿದೆ. ಕೂಡಲೆ ಸರ್ವ ಪಕ್ಷದ ಸಂಘಟನೆಗಳ ಸಭೆ ಕರೆದು ತೀರ್ಪಿಗೆ ತಲೆಬಾಗಿ ಶಾಂತಿ ಕಾಪಾಡುವಂತೆ ಸೂಚನೆ ನೀಡಬೇಕೆಂದು ವಿನಂತಿಸಿದರು.

       ಅಹಿಂದ ಹೋರಾಟಗಾರ ಮುರುಘರಾಜೇಂದ್ರ ಒಡೆಯರ್, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಟಿ.ಶಫೀವುಲ್ಲಾ, ಕರುನಾಡ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಸೈಯದ್ ಇಸ್ಮಾಯಿಲ್, ಓ.ನರಸಿಂಹಮೂರ್ತಿ, ಎನ್.ದೇವರಾಜ್, ಬಸವರಾಜ್ ಪಿ.ಬಚ್ಚಬೋರನಹಟ್ಟಿ, ಪ್ರಕಾಶ್ ರಾಮನಾಯ್ಕ, ಎ.ಜಾಕಿರ್‍ಹುಸೇನ್, ಸಿದ್ದಲಿಂಗಪ್ಪ, ವೈ.ಬಸವರಾಜ್ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link