ಹಾವೇರಿ
ಹಾವೇರಿ ನಗರದ ಇಂದಿರಾ ಕ್ಯಾಂಟಿಗೆ ಸೋಮವಾರ ಅನಿರೀಕ್ಷಿತ ಭೇಟಿ ನೀಡಿದ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಅಹಾರದ ಗುಣಮಟ್ಟ ಮತ್ತು ಸ್ವಚ್ಛತೆಯ ಕುರಿತಂತೆ ಪರಿಶೀಲನೆ ನಡೆಸಿದರು.
ಸಾಮಾನ್ಯ ಉಡುಪಿನಲ್ಲಿ ಮುಂಜಾನೆ ಯಾವ ಅಧಿಕಾರಿಗಳಿಗೂ ಮಾಹಿತಿ ನೀಡದೇ ಸಾಮಾನ್ಯರಂತೆ ಇಂದಿರಾ ಕ್ಯಾಂಟಿನ್‍ಗೆ ಭೇಟಿ ನೀಡಿ ಪೊಂಗಲ್ ಮತ್ತು ಇಡ್ಲಿ-ವಡಾ ಪಡೆದು ಸೇವಿಸಿದರು. ಆ ಮೂಲಕ ಆಹಾರದ ರುಚಿ ಹಾಗೂ ಗುಣಮಟ್ಟವನ್ನು ಪರೀಕ್ಷಿಸಿ ಗುಣಮಟ್ಟವನ್ನು ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಕ್ಯಾಂಟಿನ್‍ನ ಆಹಾರ ಸಿದ್ಧಪಡಿಸುವ ಕೊಣೆ, ಆಹಾರ ದಾಸ್ತಾನು ಕೊಠಡಿ ಕ್ಯಾಂಟಿನ್ ಒಳ ಹಾಗೂ ಹೊರ ಭಾಗದಲ್ಲಿ ಸ್ವಚ್ಛತೆ ಕುರಿತಂತೆ ಪರಿಶೀಲನೆ ನಡೆಸಿದರು. ಜಿಲ್ಲಾಧಿಕಾರಿಗಳು ಇಂದಿರಾ ಕ್ಯಾಂಟಿನ್‍ಗೆ ಭೇಟಿನೀಡಿದ ಸುದ್ದಿ ತಿಳಿದು ಪರಿಸರ ಅಭಿಯಂತರ ಚಂದ್ರಕಾಂತ, ಆರೋಗ್ಯ ನಿರೀಕ್ಷಕ ಸೋಮಶೇಖರ ಕ್ಯಾಂಟಿನ್‍ಗೆ ಆಗಮಿಸಿ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
