ಬೆಂಗಳೂರು
ನಗರದ ಕೇಂದ್ರ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವುದಾಗಿ ಘೋಷಿಸಿರುವ ಬಹುಭಾಷ ನಟ ಚಿಂತಕ ಪ್ರಕಾಶ್ ರೈ ಅವರು ನಗರದಲ್ಲಿ ಭಾನುವಾರ ಮತದಾರರೊಂದಿಗೆ `ಪ್ರಣಾಳಿಕೆ ಚರ್ಚೆ’ ಕಾರ್ಯಕ್ರಮವನ್ನು ಆರಂಭಿಸಿದ್ದಾರೆ. .
ನಗರದ ಎಂಜಿ ರಸ್ತೆಯ ಮಹಾತ್ಮಗಾಂಧಿ ಪಾರ್ಕ್‍ನಲ್ಲಿ ಅಭಿಮಾನಿ ಬಳಗ ಹಾಗೂ ಕೇಂದ್ರ ಲೋಕಸಭಾ ಕ್ಷೇತ್ರದ ನಾಗರಿಕರೊಂದಿಗೆ ಜೊತಗೂಡಿ, ಎಂಟು ಆಟೋಗಳ ಮೂಲಕ `ಪ್ರಣಾಳಿಕೆ ಚರ್ಚೆ’ ಮೆರವಣಿಗೆಗೆ ಚಾಲನೆ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರೈ ಇಂದಿನಿಂದ ಸತತ ಹತ್ತು ದಿವಸಗಳ ಕಾಲ ಬೆಂಗಳೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಉದ್ದಕ್ಕೂ ಪ್ರಣಾಳಿಕೆ ಚರ್ಚೆ ಮಾಡಲಿದ್ದು, ಈ ವ್ಯಾಪ್ತಿಗೆ ಬರುವ 8 ವಿಧಾನಸಭೆ ಕ್ಷೇತ್ರಗಳಿಗೆ ಒಂದೊಂದು ಆಟೋದಂತೆ ಎಲ್ಲಾ 8 ಕ್ಷೇತ್ರಗಳಲ್ಲಿ ಸಂಚರಿಸಲು 8 ಆಟೋಗಳಿಗೆ ಚಾಲನೆ ನೀಡಲಾಗಿದೆ ಎಂದರು.
ಕ್ಷೇತ್ರದ ಎಲ್ಲ ಭಾಗಗಳಲ್ಲಿಯೂ ಸಹ ತಮ್ಮ ತಂಡದೊಂದಿಗೆ ಸಂಚರಿಸಿ ಅಲ್ಲಿನ ನಾಗರಿಕರ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ಪ್ರಜಾ ಪ್ರಣಾಳಿಕೆಯ ತಯಾರಿ ನಡೆಸಲಿದ್ದೇವೆ ಎಂದ ಅವರು, ಇದರ ಜೊತೆಗೆ ಸಿ.ವಿ ರಾಮನ್ ನಗರದಲ್ಲಿ ಸಾರ್ವಜನಿಕರಿಂದ ಪ್ರಣಾಳಿಕೆ ಕುರಿತು ಇಂದು ಅಭಿಪ್ರಾಯ ಸಂಗ್ರಹಣೆ ಮಾಡಲಿದ್ದೇವೆ ಎಂದು ತಿಳಿಸಿದರು.
ಪ್ರಣಾಳಿಕೆ ಸಿದ್ಧ ಮಾಡಲು ತಜ್ಞರು ಮುಖ್ಯ. ಜತೆಗೆ, ಈ ಕ್ಷೇತ್ರದ ಓರ್ವ ಮತದಾರನೊ ಸೇರಿದಂತೆ ಎಲ್ಲರ ನಾಡಿ ಮಿಡಿತ ಅರಿಯಬೇಕು.ಅದೇ ರೀತಿ, ದಿನ ನಿತ್ಯದ ಸಮಸ್ಯೆಗಳಿಗೆ ನಾವು ಪರಿಹಾರ ಒದಗಿಸಬೇಕು. ಈ ನಿಟ್ಟಿನಿಂದಲೇ ನೇರವಾಗಿ ಮತದಾರರೊಂದಿಗೆ ಮಾತನಾಡಲು ಮುಂದಾಗಿದ್ದೇನೆ ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ