ಬೆಂಗಳೂರು
ಜೆಡಿಎಸ್ ಶಾಸಕ ಗೋಪಾಲಯ್ಯ ಅವರ ಸಹೋದರನ ಪುತ್ರಿಯನ್ನು ವಿವಾಹವಾಗಿದ್ದ ಮನು ಅಲಿಯಾಸ್ ಸೀಡಿ ಮನು ಮರ್ಯಾದಾ ಹತ್ಯೆಯಾಗೀಡಾಗಿದ್ದು, ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಬಿಜೆಪಿ ಒತ್ತಾಯಿಸಿದೆ.
ಬಿಜೆಪಿ ಮುಖಂಡ ಹಾಗೂ ವಿಧಾನಪರಿಷತ್ ಮಾಜಿ ಸದಸ್ಯ ಅಶ್ವತ್ಥನಾರಾಯಣ ನೇತೃತ್ವದಲ್ಲಿ ರಾಜ್ಯದ ಪೆÇಲೀಸ್ ಮಹಾನಿರ್ದೇಶಕರಿಗೆ ದೂರು ಸಲ್ಲಿಸಿದ್ದು, ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ರಾಜಕೀಯ ರುರುದ್ದೇಶಕ್ಕೆ ಮನು ಅವರನ್ನು ಕೊಲೆಗೈಯ್ಯಲಾಗಿದೆ. ಹೀಗಾಗಿ ಹತ್ಯಾ ಪ್ರಕರಣದಲ್ಲಿ ಭಾಗಿಯಾದವರನ್ನು ಶಿಕ್ಷಿಸಬೇಕೆಂದು ಒತ್ತಾಯಿಸಿದೆ. ಮನು ಅವರನ್ನು ಇತ್ತೀಚೆಗೆ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಶ್ವತ್ಥನಾರಾಯಣ, ಮನು ಹತ್ಯೆ ಮರ್ಯಾದಾ ಹತ್ಯೆ ಎನ್ನುವುದರಲ್ಲಿ ಸಂಶಯವಿಲ್ಲ. ಶಾಸಕ ಗೋಪಾಲಯ್ಯ ಸಹೋದರ ಬಸವರಾಜ ಪುತ್ರಿ ಪಲ್ಲವಿಯೊಂದಿಗೆ ಮನು ವಿವಾಹವಾಗಿದ್ದು, ಇಬ್ಬರೂ ತುಮಕೂರಿನಲ್ಲಿ ವಾಸವಿದ್ದರು. ತಮ್ಮ ಜೀವಕ್ಕೆ ಅಪಾಯವಿದೆ ಎಂದು ಅವರಿಬ್ಬರೂ ಫೇಸ್ ಬುಕಿನಲ್ಲಿ ಬರೆದುಕೊಂಡಿದ್ದರು. ಜೀವಬೆದರಿಕೆಯಿದೆ ಎಂದು ಬಹಿರಂಗವಾಗಿ ಆತಂಕವ್ಯಕ್ತಪಡಿಸಿದ್ದರೂ ಸಹ ಅವರಿಬ್ಬರಿಗೂ ಪಲೀಸರು ರಕ್ಷಣೆ ನೀಡದೇ ಲೋಪವೆಸಗಿದ್ದಾರೆ ಎಂದು ಆರೋಪಿಸಿದರು.
ಮದ್ದೂರಿನಲ್ಲಿ ಜೆಡಿಎಸ್ ಮುಖಂಡ ಪ್ರಕಾಶ್ ಹತ್ಯೆ ಪ್ರಕರಣದ ಆರೋಪಿಗಳನ್ನು ಶೂಟೌಟ್ ಮಾಡುವಂತೆ ಆದೇಶ ಮಾಡಿದ್ದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮನು ಕೊಲೆ ಪ್ರಕರಣದಲ್ಲಿ ಮೌನವಹಿಸಿದ್ದಾರೆ. ಇದನ್ನು ನೋಡಿದರೆ ಪ್ರಕರಣವನ್ನು ಮುಚ್ಚಿಹಾಕುವ ಸಾಧ್ಯತೆಗಳು ಕಂಡುಬರುತ್ತಿವೆ. ಹೀಗಾಗಿ ಪ್ರಕರಣವನ್ನು ಸಿಸಿಬಿ ತನಿಖೆಗೆ ಒಪ್ಪಿಸಬೇಕು ಎಂದು ಅವರು ಒತ್ತಾಯಿಸಿದರು.
ಪಲ್ಲವಿ ಅವರು ಸಹ ನಮಗೆ ಜೀವ ಬೆದರಿಕೆ ಇದೆ ಎಂದು ಫೇಸ್ ಬುಕ್ ನಲ್ಲಿ ಹೇಳಿಕೊಂಡಿದ್ದರು. ಅದಾಗ್ಯೂ ಮನು ಅವರನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ. ಜೀವ ಬೆದರಿಕೆ ಇದೆ ಎಂದು ಗೊತ್ತಿದ್ದರೂ ಪೊಲೀಸರು ರಾಜಕೀಯ ಪ್ರಭಾವಕ್ಕೆ ಒಳಗಾಗಿ ಅಮಾಯಕರಿಗೆ ರಕ್ಷಣೆ ನೀಡಿಲ್ಲ. ರಾಜ್ಯದಲ್ಲಿ ಮರ್ಯಾದಾ ಹತ್ಯೆ ನಡೆದಿರುವುದು ಜನರಲ್ಲಿ ಆತಂಕ ಮೂಡಿಸಿದೆ ಎಂದರು.
ಈ ಮರ್ಯಾದಾ ಹತ್ಯೆ ಕಾನೂನು ಸುವ್ಯವಸ್ಥೆಗೆ ಸವಾಲಾಗಿದ್ದು, ಹತ್ಯೆ ಹಿಂದೆ ಇರುವ ರಾಜಕೀಯ ಕೈಗಳು ಸಾಕ್ಷ್ಯ ನಾಶಮಾಡುವ ವಾತಂಕವಿದೆ. ಸಿಸಿಬಿ ತನಿಖೆಯಿಂದ ಮಾತ್ರ ತಪ್ಪಿತಸ್ಥರಿಗೆ ಶಿಕ್ಷೆ ನೀಡಲು ಸಾಧ್ಯ ಎಂದು ಅಶ್ವತ್ಥನಾರಾಯಣ ಪ್ರತಿಪಾಸಿದಿರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ